• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಾಜಪೇಯಿ ಇದ್ದ ಬಂಗಲೆಯಲ್ಲಿ ಇನ್ಮುಂದೆ ಅಮಿತ್ ಶಾ ವಾಸ್ತವ್ಯ

|

ನವದೆಹಲಿ, ಆಗಸ್ಟ್ 27: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರದಂದು ಮಾಜಿ ಪ್ರಧಾನಿ ವಾಜಪೇಯಿ ಅವರು ವಾಸವಿದ್ದ ಬಂಗಲೆಗೆ ವಾಸ್ತವ್ಯ ಬದಲಿಸಿದ್ದಾರೆ. ಕೇಂದ್ರ ದೆಹಲಿಯ ಕೃಷ್ಣ ಮೆನನ್ ಮಾರ್ಗ್ ನಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ವಾಸವಿದ್ದ ಬಂಗಲೆ ಇದೆ. ಇದಕ್ಕೂ ಮುನ್ನ ಅಮಿತ್ ಶಾ ಅವರು ಅಕ್ಬರ್ ರಸ್ತೆಯಲ್ಲಿ ಇದ್ದರು.

ಬಿಜೆಪಿ ಸೆಂಟ್ರಲೈಸ್ಡ್: ಕಟೀಲ್ ಆಯ್ಕೆ ಹಿಂದಿರುವ 'ಶಾ ಲೆಕ್ಕಾಚಾರ' ಇಷ್ಟೆ...

ಕೇಂದ್ರದಲ್ಲಿ ಎರಡನೇ ಅವಧಿಗೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಮಿತ್ ಶಾ ಅವರಿಗೆ ಅಟಲ್ ಬಿಹಾರಿ ವಾಜಪೇಯಿ ಇದ್ದ ಬಂಗಲೆಯನ್ನು ನೀಡಲಾಗಿದೆ. ಕೃಷ್ಣ ಮೆನನ್ ಮಾರ್ಗದಲ್ಲಿನ ಬಂಗಲೆಯಲ್ಲಿ ವಾಜಪೇಯಿ ಅವರು ಹದಿನಾಲ್ಕು ವರ್ಷಗಳ ಕಾಲ ವಾಸವಿದ್ದರು. ಅವರು ನಿಧನರಾದ ನಂತರ ಆ ಬಂಗಲೆ ಖಾಲಿ ಉಳಿದಿತ್ತು.

ವಾಜಪೇಯಿ ನೆಲೆಸಿದ್ದ ನಿವಾಸ 'ಗೃಹ' ಸಚಿವ ಅಮಿತ್ ಪಾಲು

2004ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ಕಾಂಗ್ರೆಸ್ ನೇತೃತ್ವದ ಯುಪಿಎಗೆ ಸೋತ ನಂತರ ಅಟಲ್ ಬಿಹಾರಿ ವಾಜಪೇಯಿ ಅವರು ಈ ಕಟ್ಟಡದಲ್ಲಿ ವಾಸವಿದ್ದರು. ಕಟ್ಟಡದ ಸಂಖ್ಯೆ 8 ಎಂದು ಇದ್ದಿದ್ದು ಆ ನಂತರ 6A ಎಂದು ಬದಲಾವಣೆ ಆಗಿತ್ತು. ಇದೀಗ ಆ ಬಂಗಲೆಯಲ್ಲಿ ಅಮಿತ್ ಶಾ ವಾಸ್ತವ್ಯ ಹೂಡಿದ್ದಾರೆ.

English summary
After demise of former PM Atal Bihari Vajapayee his residence was vacant. Now union home minister Amit Shah moved to that bungalow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X