ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬಿಲ್ ಕಟ್ಟಿಲ್ಲ ಎಂದು ಶವವನ್ನು ಆಸ್ಪತ್ರೆಯಲ್ಲಿ ಇಟ್ಟುಕೊಳ್ಳುವಂತಿಲ್ಲ'

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 17: ಇನ್ನುಮುಂದೆ ಆಸ್ಪತ್ರೆ ಬಿಲ್ ಕಟ್ಟಿಲ್ಲ ಎಂದು ಯಾವುದೇ ಕಾರಣಕ್ಕು ಶವವನ್ನು ಆಸ್ಪತ್ರೆಯಲ್ಲಿ ಇರಿಸಿಕೊಳ್ಳುವಂತಿಲ್ಲ ಹೀಗೊಂದು ಕಾಯ್ದೆಯನ್ನು ಕೇಂದ್ರ ಸರ್ಕಾರ ರೂಪಿಸಿದೆ.

ಕೆಲವು ಆಸ್ಪತ್ರೆಗಳಲ್ಲಿ ಬಿಲ್ ಹಣವನ್ನು ಬಾಕಿ ಉಳಿಸಿಕೊಂಡಿದ್ದಾರೆ, ಆ ಹಣವನ್ನು ನೀಡುವವರೆಗೂ ಆಸ್ಪತ್ರೆಯಿಂದ ಶವವನ್ನು ಸಾಗಿಸಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಆಸ್ಪತ್ರೆ ವೈದ್ಯರು ಕಡಾಖಂಡಿತವಾಗಿ ಹೇಳಿಬಿಡುತ್ತಿದ್ದರು. ಆದರೆ ಇನ್ನುಮುಂದೆ ಯಾವುದೇ ಆಸ್ಪತ್ರೆಯಲ್ಲೂ ವಿವಿಧ ಕಾರಣಗಳನ್ನೊಡ್ಡಿ ಆಸ್ಪತ್ರೆಗಳಲ್ಲಿ ಶವವನ್ನು ಇಟ್ಟುಕೊಳ್ಳುವಂತಿಲ್ಲ.

ವಿಜಯಪುರದಲ್ಲಿ ಸುಣ್ಣದ ಡಬ್ಬಿ ನುಂಗಿ ಮಗು ಸಾವುವಿಜಯಪುರದಲ್ಲಿ ಸುಣ್ಣದ ಡಬ್ಬಿ ನುಂಗಿ ಮಗು ಸಾವು

ಆರೋಗ್ಯ ಸೇವೆ ಹಾಗೂ ಗ್ರಾಹಕರ ಹಕ್ಕು ಕುರಿತು ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ರೂಪಿಸಲು ನಿರ್ಧರಿಸಿದ್ದು, ಇದರ ಕರಡು ಪ್ರತಿಯಲ್ಲಿ ಈ ಅಂಶಗಳು ಉಲ್ಲೇಖವಾಗಿದೆ. ಕೇಂದ್ರ ಆರೋಗ್ಯ ಇಲಾಖೆ ಈ ಕರಡು ನೀತಿಯನ್ನು ಸಾರ್ವಜನಿಕರಿಗಾಘಿ ತನ್ನ ವೆಬ್‌ಸೈಟ್‌ ನಲ್ಲಿ ಪ್ರಕಟಿಸಿದೆ ಜತೆಗೆ ಆಕ್ಷೇಪಣೆಗಳನ್ನು ಆಹ್ವಾನಿಸಿದೆ.

 ಆಸ್ಪತ್ರೆ, ಕ್ಲಿನಿಕ್ ಗಳಲ್ಲಿ ಉಂಟಾಗುವ ಕುಂದುಕೊರತೆಗಳ ಬಗ್ಗೆ ದೂರು

ಆಸ್ಪತ್ರೆ, ಕ್ಲಿನಿಕ್ ಗಳಲ್ಲಿ ಉಂಟಾಗುವ ಕುಂದುಕೊರತೆಗಳ ಬಗ್ಗೆ ದೂರು

ಆಸ್ಪತ್ರೆ, ಕ್ಲಿನಿಕ್ ಗಳಲ್ಲಿ ಎದುರಾಗುವ ಕುಂದುಕೊರತೆಗಳನ್ನು ನಿವಾರಿಸಿಕೊಳ್ಳುವ ಹಕ್ಕು ರೋಗಿಗಳಿಗಿದೆ. ದೂರು ನೀಡಿದ 15 ದಿನದ ಒಳಗಾಗಿ ಅವರಿಗೆ ಪರಿಹಾರ ಅಥವಾ ಸಮಸ್ಯೆ ಕುರಿತು ಕೈಗೊಂಡಿರು ಕ್ರಮಗಳ ಬಗ್ಗೆ ಲಿಖಿತ ಮಾಹಿತಿ ನೀಡಬೇಕಾಗುತ್ತದೆ.

 ರೋಗಿಯ ಆರೋಗ್ಯ ಮಾಹಿತಿಯ ಮೂಲ ದಾಖಲೆ ನೀಡಬೇಕು

ರೋಗಿಯ ಆರೋಗ್ಯ ಮಾಹಿತಿಯ ಮೂಲ ದಾಖಲೆ ನೀಡಬೇಕು

ರೋಗಿಯ ಆರೋಗ್ಯ ಮಾಹಿತಿ ಮೂಲ ದಾಖಲೆ, ಕೇಸ್ ಪೇಪರ್, ತನಿಖಾ ವರದಿಗಳನ್ನು ಡಿಸ್ಚಾರ್ಜ್ ಆದ 72 ಗಂಟೆಯ ಒಳಗಾಗಿ ಪಡೆಯುವ ಹಕ್ಕು ರೋಗಿ ಅವರ ಕುಟುಂಬದವರಿಗೆ ಇರುತ್ತದೆ.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಹಾರ್ದಿಕ್ ಪಟೇಲ್: ಉಪವಾಸ ಮುಂದುವರಿಕೆಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಹಾರ್ದಿಕ್ ಪಟೇಲ್: ಉಪವಾಸ ಮುಂದುವರಿಕೆ

 ಸೆಕೆಂಡ್ ಒಪೀನಿಯನ್ ಪಡೆಯಲು ಮುಕ್ತ ಅವಕಾಶ

ಸೆಕೆಂಡ್ ಒಪೀನಿಯನ್ ಪಡೆಯಲು ಮುಕ್ತ ಅವಕಾಶ

ಚಿಕಿತ್ಸೆಗೆ ಸಂಬಂಧಿಸಿ ರೋಗಿಗಳು ಸೆಕೆಂಡ್ ಒಪೀನಿಯನ್ ಪಡೆಯುವ ಮುಕ್ತ ಅವಕಾಶವಿದೆ, ಇದಕ್ಕೆ ಆಸ್ಪತ್ರೆಗಳು ಯಾವುದೇ ಕಾರಣಕ್ಕೂ ಅಡ್ಡಿಪಡಿಸುವಂತಿಲ್ಲ. ರೋಗಿಯ ಖಸಗಿತನದ ಹಕ್ಕು ಉಲ್ಲಂಘಟನೆಯಾಗುವಂತಿಲ್ಲ, ಗ್ರಾಹಕರು ಇಚ್ಛಿಸಿದರೆ ಯಾವ ಸೇವೆ, ಚಿಕಿತ್ಸೆಗೆ ಎಷ್ಟು ವೆಚ್ಚವಾಗಬಹುದು ಎಂಬ ವಿಸ್ತೃತ ಮಾಹಿತಿಯನ್ನು ಆಸ್ಪತ್ರೆ ಮೂಲಕ ಪಡೆಯಬಹುದಾಗಿದೆ.

 ಆಸ್ಪತ್ರೆ ಶುಲ್ಕ ಮಾಹಿತಿಯನ್ನು ಪ್ರಕಟಿಸುವುದು

ಆಸ್ಪತ್ರೆ ಶುಲ್ಕ ಮಾಹಿತಿಯನ್ನು ಪ್ರಕಟಿಸುವುದು

ಆಸ್ಪತ್ರೆಯ ಶುಲ್ಕ ಮತ್ತಿತರೆ ಮಾಹಿತಿಗಳನ್ನು ಇಂಗ್ಲಿಷ್ ಮತ್ತು ಸ್ಥಳೀಯ ಭಾಷೆಯಲ್ಲಿ ಫಲಕದ ಮೇಲೆ ಪ್ರಕಟಿಸಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಯಾವುದೋ ಒಂದು ಭಾಷೆಯಲ್ಲಿ ಪ್ರಕಟಿಸುವಂತಿಲ್ಲ.

English summary
Union health ministry has released draft bill on health services which proposed to private hospitals and their profit based practices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X