ವಿಡಿಯೋ: ಹಾಡಹಗಲೇ ದೆಹಲಿಯಲ್ಲಿ ಗನ್ ಹಿಡಿದು ರಸ್ತೆಗಿಳಿದ ಅಪರಿಚಿತರು
ನವದೆಹಲಿ, ಫೆಬ್ರವರಿ.07: ರಾಷ್ಟ್ರ ರಾಜಧಾನಿಯು ಅದೆಷ್ಟು ಸುರಕ್ಷಿತ ಎನ್ನುವಂತಾ ಪ್ರಶ್ನೆಯನ್ನು ಹಾಕಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ನವದೆಹಲಿಯಲ್ಲಿ ಇತ್ತೀಚಿಗೆ ಫೈರಿಂಗ್ ನಡೆಸುವಂತಾ ಘಟನೆಗಳು ಸರ್ವೇ ಸಾಮಾನ್ಯದಂತೆ ಆಗಿ ಬಿಟ್ಟಿವೆ.
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಪ್ರತಿಭಟನೆ ಹಾಗೂ ಇದಕ್ಕೆ ವಿರೋಧಿಸುವವರ ಹೆಸರಿನಲ್ಲಿ ಕೆಲವರು ಹಾಡಹಗಲಿನಲ್ಲೇ ಗನ್ ಹಿಡಿದು ರಸ್ತೆಗೆ ಇಳಿಯುತ್ತಿದ್ದಾರೆ. ಇದೀಗ ಅಂಥದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

ಬೈಕ್ ನಲ್ಲಿ ಆಗಮಿಸಿದ ಇಬ್ಬರು ಅಪರಿಚಿತರು ದೆಹಲಿಯ ಜಫರ್ ಬಾದ್ ನಲ್ಲಿರುವ ಅಂಗಡಿಯೊಂದರ ಮುಂದೆ ಗಾಡಿ ನಿಲ್ಲಿಸುತ್ತಾರೆ. ಇಬ್ಬರ ಪೈಕಿ ಒಬ್ಬ ಅಪರಿಚಿತನು ಹಾಡಹಗಲಿನಲ್ಲೇ ಗುಂಡಿನ ದಾಳಿ ನಡೆಸಿದ್ದಾನೆ.
#WATCH CCTV footage of two unidentified persons opening fire in front of a shop in Delhi's Jafarabad area earlier today. Police investigation is underway. pic.twitter.com/k7yrqoCCw8
— ANI (@ANI) February 7, 2020
ಸಿಸಿ ಕ್ಯಾಮರಾದಲ್ಲಿ ಕ್ಲಿಯರ್ ಪಿಕ್ಚರ್:
ಹಾಡುಹಗಲಿನಲ್ಲೇ ಬೈಕ್ ನಲ್ಲಿ ಆಗಮಿಸಿದ ಇಬ್ಬರು ಅಂಗಡಿಯಲ್ಲಿ ಇದ್ದವರ ಮೇಲೆ ಗುಂಡಿನ ದಾಳಿ ನಡೆಸಿದ ಸ್ಪಷ್ಟ ಚಿತ್ರಣವು ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ದೃಶ್ಯವನ್ನು ಆಧರಿಸಿದ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಇನ್ನು, ಸಿಸಿ ಕ್ಯಾಮರಾದ ದೃಶ್ಯಾವಳಿಯು ಸಾಮಾಜಿಕ ಜಾಲತಾಣದಲ್ಲೂ ಸಖತ್ ವೈರಲ್ ಆಗುತ್ತಿದೆ.












Click it and Unblock the Notifications