ಕೇಜ್ರಿವಾಲ್ ಹುಟ್ಟುಹಬ್ಬ, ಟ್ವಿಟ್ಟರ್ ನಲ್ಲಿ ಕ್ರೇಜಿ ಟ್ವೀಟ್ಸ್
ನವದೆಹಲಿ, ಆಗಸ್ಟ್ 16: ದೆಹಲಿಯ ಮುಖ್ಯಮಂತ್ರಿ, ಭ್ರಷ್ಟಾಚಾರ ವಿರುದ್ಧದ ಹೋರಾಟಗಾರ, ಆಮ್ ಆದ್ಮಿ ಪಕ್ಷದ ಮುಖಂಡ ಟ್ವಿಟ್ಟರ್ ಸ್ನೇಹಿ ಅರವಿಂದ್ ಕೇಜ್ರಿವಾಲ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಹುಟ್ಟುಹಬ್ಬದ ಶುಭ ಹಾರೈಸಿದ್ದಾರೆ. ಟ್ವಿಟ್ಟರ್ ನಲ್ಲಿ ಶುಭ ಸಂದೇಶಗಳ ಜೊತೆಗೆ ಕೆಲ ಕ್ರೇಜಿ ಟ್ವೀಟ್ ಗಳು ಕಂಡು ಬಂದಿವೆ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಮೋದಿ ಅವರು, ತಮಗೆ ಹುಟ್ಟುಹಬ್ಬದ ಶುಭಾಶಯಗಳು, ಭಗವಂತನು ತಮಗೆ ಅಯುರಾರೋಗ್ಯ ನೀಡಲಿ ಎಂದು ಟ್ವೀಟ್ ಮಾಡಿದ್ದರು.
Spoke to Delhi CM Shri @ArvindKejriwal & wished him on his birthday. My prayers for his long life and good health.
— Narendra Modi (@narendramodi) August 16, 2015 ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಕೇಜ್ರಿವಾಲ್ ಧನ್ಯವಾದ ತಿಳಿಸಿ, ಶೀಘ್ರದಲ್ಲೇ ಪ್ರಧಾನಿಯವರನ್ನು ಭೇಟಿಯಾಗುವುದಾಗಿ ಹಾಗೂ ಕೆಲವು ಸಮಸ್ಯೆಗಳ ಬಗ್ಗೆ ತಮ್ಮೊಂದಿಗೆ ಚರ್ಚಿಸಬೇಕಿದೆ ಎಂದಿದ್ದಾರೆ.
ಹರ್ಯಾಣದ ಹಿಸಾರ್ ಪ್ರಾಂತ್ಯದಲ್ಲಿ 1968ರ ಆಗಸ್ಟ್ 16ರಂದು ಜನಿಸಿದ ಅರವಿಂದ್ ಕೇಜ್ರಿವಾಲ್ ದೇಶದ ಅತ್ಯಂತ ಪ್ರತಿಭಾವಂತ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ. ಜೊತೆಗೆ ಅನೇಕ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದು ಅನೇಕ ಬಾರಿ ಸಾರ್ವಜನಿಕರಿಂದ ಅಪಹಾಸ್ಯಕ್ಕೀಡಾಗಿದ್ದಾರೆ.
ಸೋನೇಪೇಟ್, ಹಿಸಾರ್, ಮಥುರಾ ಹಾಗೂ ಉತ್ತರಪ್ರದೇಶದಲ್ಲಿ ವಿದ್ಯಾಭಾಯದ ಮಾಡಿದ ಕೇಜ್ರಿವಾಲ್ ಅವರು ಐಐಟಿ ಖರಗ್ ಪುರ್ ನಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಪದವಿ ಪಡೆದಿದ್ದಲ್ಲದೆ ಐಐಟಿ-ಜೆಇಇ ಪ್ರವೇಶ ಪರೀಕ್ಷೆಯನ್ನು ಪ್ರಥಮ ಯತ್ನದಲ್ಲೇ ಯಶಸ್ವಿಯಾಗಿ ಪೂರೈಸಿದವರಾಗಿದ್ದಾರೆ.ವಿಐಪಿ ಸಂಸ್ಕೃತಿ ದಿಕ್ಕರಿಸಿ, ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸುವ ಅರವಿಂದ್ ಅವರ ಹುಟ್ಟು ಹಬ್ಬಕ್ಕೆ ಬಂದ ಟ್ವೀಟ್ಸ್ ಮುಂದಿದೆ.

ಆಮ್ ಆದ್ಮಿ ಪಕ್ಷ ಸ್ಥಾಪನೆ
ಟಾಟಾ ಸ್ಟೀಲ್ಸ್ ಸಂಸ್ಥೆಯಲ್ಲಿ ನಾಲ್ಕು ವರ್ಷ ಉದ್ಯೋಗಿಯಾಗಿದ್ದವರು ನಂತರ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಪರಿವರ್ತನಾ ಎನ್ ಜಿಒ ಮೂಲಕ 18 ತಿಂಗಳಲ್ಲೇ 800 ಕೇಸುಗಳನ್ನು ಬಗೆಹರಿಸಿದ ದಾಖಲೆ ಹೊಂದಿದ್ದಾರೆ. ಮುಂದೆ ಭ್ರಷ್ಟಾಚಾರ ವಿರೋಧಿ ಆಂದೋಲನ, ಆಮ್ ಆದ್ಮಿ ಪಕ್ಷ ಸ್ಥಾಪನೆ ,ದೆಹಲಿ ಸಿಎಂಆಗಿ ಆಯ್ಕೆ ಎಲ್ಲವೂ ಇವರ ಸಾಧನೆ.
|
ಹ್ಯಾಪಿ ಬರ್ಥ್ ಡೇ ಕೇಜ್ರಿವಾಲ್
ಹ್ಯಾಪಿ ಬರ್ಥ್ ಡೇ ಕೇಜ್ರಿವಾಲ್ ದೆಹಲಿಗೆ ನಿಮ್ಮ ಅಗತ್ಯವಿದೆ.
|
ದಿ ಬ್ಯಾಡ್ ಡಾಕ್ಟರ್ ಟ್ವೀಟ್ ಮಾಡಿದ್ದು ಹೀಗೆ
ದಿ ಬ್ಯಾಡ್ ಡಾಕ್ಟರ್ ಟ್ವೀಟ್ ಮಾಡಿದ್ದು ಹೀಗೆ ಆಶ್ವಾಸನೆ ನೀಡುತ್ತಿರಿ, ನಮಗೆ ನಗು ತರಿಸುತ್ತಿರಿ, ಚೆನ್ನಾಗಿರಿ.
|
ರಾಜಕೀಯಕ್ಕೆ ರಂಗು ತಂದ ಕೇಜ್ರಿವಾಲ್
ರಾಜಕೀಯಕ್ಕೆ ರಂಗು ತಂದ ಕೇಜ್ರಿವಾಲ್ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು.
|
ಕಮಲ್ ಆರ್ ಖಾನ್ ರಿಂದ ಟ್ವೀಟ್
ಕಮಲ್ ಆರ್ ಖಾನ್ ಟ್ವೀಟ್ ಮಾಡಿ ಅಲ್ಲಾಹ್ ನಿಮಗೆ ಒಳ್ಳೆ ಆರೋಗ್ಯ ನೀಡಲಿ ಎಂದು ಹಾರೈಸಿದ್ದಾರೆ.
|
ಕೇಜ್ರಿವಾಲ್ ಹುಟ್ಟುಹಬ್ಬಕ್ಕೆ ಬಗೆ ಬಗೆ ಟ್ವೀಟ್ಸ್
ಕೇಜ್ರಿವಾಲ್ ಹುಟ್ಟುಹಬ್ಬಕ್ಕೆ ಬಗೆ ಬಗೆ ಟ್ವೀಟ್ಸ್ ಗಳು ಬಂದಿವೆ.












Click it and Unblock the Notifications