ನ್ಯಾ.ಲೋಯಾ ಪ್ರಕರಣ: ಬಿಜೆಪಿಯಿಂದ ಕಾಂಗ್ರೆಸ್ ಗೆ ತಪರಾಕಿ
ನವದೆಹಲಿ, ಏಪ್ರಿಲ್ 20: ನ್ಯಾ.ಲೋಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ವಿಶೇಷ ತನಿಖಾ ದಳ(SIT) ರಚಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸುವ ಮೂಲಕ, ಲೋಯಾ ಸಾವು ಆಕಸ್ಮಿಕ ಎಂದು ಹೇಳಿದೆ.
2005 ರಲ್ಲಿ ನಡೆದ ಸೋಹ್ರಾಬುದ್ದಿನ್ ಎನ್ ಕೌಂಟರ್ ಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿದ್ದ ಸಿಬಿಐ ಕೋರ್ಟಿನ ನ್ಯಾಯಾಧೀಶರಾಗಿದ್ದ ನ್ಯಾ.ಬಿ.ಎಚ್.ಲೋಯಾ ಅವರು 2014 ಮಹಾರಾಷ್ಟ್ರದ ನಾಗ್ಪುರದಲ್ಲಿ ಅಕಾಲಿಕವಾಗಿ ಮರಣಹೊಂದಿದ್ದರು.
ಸೊಹ್ರಾಬುದ್ದಿನ್ ಎನ್ ಕೌಂಟರ್ ನಲ್ಲಿ ಆಗಿನ ಗುಜರಾತ್ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಮತ್ತು ಬಿಜೆಪಿಯ ಹಾಲಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಕೈವಾಡವಿದೆ ಎಂದು ದೂರಲಾಗಿತ್ತು. ಲೋಯಾ ಅಕಾಲಿಕ ಮರಣಕ್ಕೂ ಈ ನಾಯಕರಿಗೂ ಸಂಬಂಧವಿದೆ ಎಂದು ಆರೋಪಿಸಲಾಗಿತ್ತು. ಆದರೆ ಲೋಯಾ ಅವರು ಹೃದಯಾಘಾತದಿಂದ ಮೃತಪಟ್ಟಿದ್ದು ಎಂಬುದು ವೈದ್ಯಕೀಯ ವರದಿಯಿಂದ ತಿಳಿದುಬಂದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಪ್ರಕರಣಕ್ಕಾಗಿ ವಿಶೇಷ ತನಿಖಾ ದಳವನ್ನು ನೇಮಿಸುವುದಕ್ಕೆ ನಿರಾಕರಿಸಿತ್ತು.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಸುಪ್ರೀಂ ಕೋರ್ಟ್ ನ ಈ ತೀರ್ಪು ಹೊರಬರುತ್ತಿದ್ದಂತೆಯೇ ಬಿಜೆಪಿ ಪಾಳೇಯದಲ್ಲಿ ಸಂಭ್ರಮ ಮನೆಮಾಡಿದೆ. ಲೋಯಾ ಸಾವಿನ ಪ್ರಕರಣದಲ್ಲಿ ಬಿಜೆಪಿ ಮತ್ತು ಅಮಿತ್ ಶಾ ಅವರ ಮೇಲೆ ಆರೋಪ ಹೊರಿಸಿದ ಕಾರಣಕ್ಕೆ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ದೇಶದ ಕ್ಷಮೆ ಯಾಚಿಸಬೇಕು ಎಂದು ಹಲವು ಬಿಜೆಪಿ ನಾಯಕರು ಆಗ್ರಹಿಸಿದರು.
| Array |
ಕಾಂಗ್ರೆಸ್ ಕುತಂತ್ರಕ್ಕೆ ಸುಪ್ರೀಂ ಸ್ಪಷ್ಟ ಉತ್ತರ
ನ್ಯಾ. ಲೋಯಾ ಪ್ರಕರಣದ ಮೂಲಕ ಈ ದೇಶದ ಪ್ರಜಾಪ್ರಭುತ್ವಕ್ಕೆ ಮತ್ತು ಸಾಂವಿಧಾನಿಕ ಸಂಸ್ಥೆಗಳಿಗೆ ಧಕ್ಕೆ ತರುವ ಕಾಂಗ್ರೆಸ್ಸಿನ ಪ್ರಯತ್ನಕ್ಕೆ ಸುಪ್ರೀಂ ಕೋರ್ಟ್ ಸ್ಪಷ್ಟ ಉತ್ತರ ನೀಡಿದೆ. ನಮ್ಮ ರಾಷ್ಟ್ರ, ಪ್ರಜಾಪ್ರಭುತ್ವ ಬಹಳ ಶ್ರೇಷ್ಠವಾದುದು. ಒಂದು ಪಕ್ಷ, ಒಂದು ಕುಟುಂಬ ಅಥವಾ ಒಬ್ಬ ವ್ಯಕ್ತಿಗಿಂತ ನಮ್ಮ ಪ್ರಜಾಪ್ರಭುತ್ವ ಶ್ರೇಷ್ಠವಾದುದು ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಟ್ವೀಟ್ ಮಾಡಿದ್ದಾರೆ.
|
ಸಿಬಿಐ ಎಂಬ ಪಂಜರದ ಪಕ್ಷಿ!
ಒಬ್ಬ ಸಿಬಿಐ ನ್ಯಾಯಾಧೀಶರಿಗೇ ಇಲ್ಲಿ ನ್ಯಾಯ ಸಿಕ್ಕುವುದಿಲ್ಲ ಎಂದಾದರೆ, ಸಿಬಿಐ ಮತ್ತೊಬ್ಬರಿಗೆ ನ್ಯಾಯ ನೀಡುತ್ತದೆ ಎಂದು ನಂಬುವುದಾದರೂ ಹೇಗೆ? ಸಿಬಿಐ ಎಂಬುದು ಒಂದು ಪಂಜರದ ಪಕ್ಷಿ ಎಂದಿದ್ದಾರೆ ಶೆಹ್ಲಾ ರಶಿದ್
|
ಸುಪ್ರೀಂ ನಿಂದ ಕಪಾಳ ಮೋಕ್ಷ!
ನ್ಯಾಯಾಂಗವನ್ನು ಅವಹೇಳನ ಮಾಡಿದವರಿಗೆ, ನ್ಯಾ.ಲೋಯಾ ಸಾವನ್ನು ರಾಜಕೀಯ ಗೊಳಿಸಲು ಪ್ರಯತ್ನಿಸಿದವರಿಗೆ ಸುಪ್ರೀಂ ಕೋರ್ಟ್ ತೀರ್ಪು ಕಪಾಳಮೋಕ್ಷ ಮಾಡಿದಂತಾಗಿದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಟ್ವೀಟ್ ಮಾಡಿದ್ದಾರೆ.
|
ಮೇವಾನಿ ಗುಡುಗು!
'ನ್ಯಾಯಾಧೀಶರು ಸುಳ್ಳು ಹೇಳುವುದಿಲ್ಲ ಎಂಬುದು ನಿಜವಾದರೆ, ಜನವರಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ನ್ಯಾಯಮೂರ್ತಿಗಳ ಮಾತುಗಳನ್ನೂ ನಾವು ಕೇಳಬೇಕಾಗುತ್ತದೆ' ಎಂದಿದ್ದಾರೆ ಸಂಸದ ಜಿಗ್ನೇಶ್ ಮೇವಾನಿ.
|
ಆರೋಪ ಮಾಡುತ್ತಿರುವುದು ಕಾಂಗ್ರೆಸ್ ಮಾತ್ರ
ನ್ಯಾ.ಲೋಯಾ ಅವರು ಒಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಅವರಿಗೆ ಎದು ನೋವು ಕಾಣಿಸಿಸಕೊಂಡಿತ್ತು. ನಂತರ ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅವರು ನಿಧನರಾದರು.
ವೈದ್ಯರು ಇದನ್ನು ಆಕಸ್ಮಿಕ ಸಾವು ಎನ್ನುತ್ತಾರೆ.
ಲೋಯಾ ಕುಟುಂಬ ಇದನ್ನು ಆಕಸ್ಮಿಕ ಸಾವು ಎನ್ನುತ್ತದೆ.
ಸ್ನೇಹಿತರು ಇದನ್ನು ಆಕಸ್ಮಿಕ ಸಾವು ಎನ್ನುತ್ತಾರೆ
ಸುಪ್ರೀಂ ಕೋರ್ಟ್ ಸಹ ಇದನ್ನು ಆಕಸ್ಮಿಕ ಸಾವು ಎನ್ನುತ್ತದೆ.
ಆದರೆ ಕಾಂಗ್ರೆಸ್ ಮತ್ತು ಅದರ ಜೊತೆಗಾರರಿಗೆ ಮಾತ್ರ ಇದು ಅಮಿತ್ ಶಾ ಮಾಡಿದ ಕೊಲೆ! ಎಂದು ಟ್ವೀಟ್ ಮಾಡಿದ್ದಾರೆ ರಿಶಿ ಬ್ಯಾಗ್ರಿ.












Click it and Unblock the Notifications