ತ್ರಿವಳಿ ತಲಾಖ್: 1 ನ್ಯಾಯಪೀಠ, 5 ಜಡ್ಜ್ ಗಳು, 2 ರೀತಿಯ ವಾದ!!

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 22: ತ್ರಿವಳಿ ತಲಾಖ್ ಬಗ್ಗೆ ಮಂಗಳವಾರ (ಆಗಸ್ಟ್ 22) ಐತಿಹಾಸಿಕ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್, ತ್ರಿವಳಿ ತಲಾಖ್ ಪದ್ಧತಿಯು ಅಸಾಂವಿಧಾನಿಕ ಎಂದಿದೆಯಲ್ಲದೆ, ಇದು ಇಸ್ಲಾಂ ಧರ್ಮಕ್ಕೆ ವಿರೋಧ ಎಂದೂ ಘೋಷಿಸಿದೆ.

ತ್ರಿವಳಿ ತಲಾಖ್ ಅಸಂವಿಧಾನಿಕ, ಸುಪ್ರಿಂ ಕೋರ್ಟ್ ಐತಿಹಾಸಿಕ ತೀರ್ಪು

ಈ ತೀರ್ಪು ಐವರು ನ್ಯಾಯಾಧೀಶರುಳ್ಳ ನ್ಯಾಯಪೀಠದ ಬಹುಮತದ ತೀರ್ಪು. ಈ ಪೀಠದಲ್ಲಿ ಹಿಂದೂ, ಕ್ರಿಶ್ಚಿಯನ್, ಇಸ್ಲಾಂ, ಸಿಖ್ ಹಾಗೂ ಝೋರೊಸ್ಟ್ರಿಯನ್ ಧರ್ಮಕ್ಕೆ ಸೇರಿದ ನ್ಯಾಯಮೂರ್ತಿಗಳಿದ್ದರು.

Triple Talaq: Which said what

ಇವರಲ್ಲಿ, ನ್ಯಾ. ಲಲಿತ್ ಅವರು ಹಿಂದೂ ಆಗಿದ್ದರೆ, ನ್ಯಾಯಮೂರ್ತಿ ರೋಹಿಂಗ್ಟನ್ ನಾರಿಮನ್ ಹಾಗೂ ನ್ಯಾ. ಕುರಿಯೆನ್ ಜೋಸೆಫ್ ಅವರು, ತ್ರಿವಳಿ ತಲಾಖ್ ಎಂಬುದನ್ನು ಒಂದು ಆಚರಣೆಯನ್ನಾಗಿ ಒಪ್ಪಿಕೊಳ್ಳಬಹುದಾದರೂ, ಇದು ಸಾಂವಿಧಾನಿಕವಾಗಿ ಅಸಿಂಧುವಾಗಿದೆ. ಏಕಾಏಕಿ ಮೂರು ಬಾರಿ ತಲಾಖ್ ಎಂದು ಹೇಳುವ ಮೂಲಕ ಒಂದು ಮದುವೆಯನ್ನು ಮುರಿಯಬಹುದಾಗಿದೆ. ಹಾಗೆ ಮುರಿದ ಸಂಬಂಧವನ್ನು ಮತ್ತೆ ಒಗ್ಗೂಡಿಸಲು ಸಾಧ್ಯವೇ ಇಲ್ಲ. ಇದು ಸಂವಿಧಾನ ನಾಗರಿಕರ ಸ್ವಾತಂತ್ರ್ಯದ 14ನೇ ಪರಿಚ್ಛೇದದ ಸ್ಪಷ್ಟ ಉಲ್ಲಂಘನೆಯಾಗುತ್ತದೆ'' ಎಂದು ತಿಳಿಸಿದರು.

ತಲಾಖ್ ತಲಾಖ್ ತಲಾಖ್ ಗೆ ಭೇಷ್ ಭೇಷ್ ಭೇಷ್ ಎಂದ ಟ್ವಿಟ್ಟಿಗರು

ಆದರೆ, ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರಾದ ಜೆ.ಎಸ್. ಖೆಹರ್ ಹಾಗೂ ನ್ಯಾ. ಅಬ್ದಲ್ ನಜೀರ್ ಅವರು, ''ತ್ರಿವಳಿ ತಲಾಖ್ ತಪ್ಪೆಂದು ಹೇಳಬಹುದಾದರೂ, ಯಾವುದೇ ಧರ್ಮವೊಂದರ ಆಂತರಿಕ ಆಚರಣೆಗಳ ವಿಚಾರದಲ್ಲಿ ನ್ಯಾಯಾಲಯ ಮೂಗು ತೂರಿಸುವುದು ಸರಿಯಲ್ಲ. ಈ ಬಗ್ಗೆ ಸಂಸತ್ತು ಚರ್ಚಿಸಿ, ಒಂದು ಶಾಸನ ರೂಪಿಸಬೇಕು' ಎಂದು ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Supreme Court bench of five senior most judges, all of different faiths, today declared the Muslim practice of triple talaq or instant divorce by uttering "talaq (divorce)" three times "illegal and sinful".

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ