ತ್ರಿವಳಿ ತಲಾಖ್ ಜಾಮೀನು ರಹಿತ ಅಪರಾಧ : ಕೇಂದ್ರ

ನವದೆಹಲಿ, ಡಿಸೆಂಬರ್ 02 : ತ್ರಿವಳಿ ತಲಾಖ್ ಕುರಿತಂತೆ ಮಹತ್ವದ ಕರಡು ಮಸೂದೆಯನ್ನು ಕೇಂದ್ರ ರಚಿಸಿದ್ದು, ತ್ರಿವಳಿ ತಲಾಖ್ ನೀಡುವುದನ್ನು ಜಾಮೀನು ರಹಿತ ಅಪರಾಧ ಎಂದು ಪರಿಗಣಿಸಿದೆ.

ನಿಯಮ ಮೀರುವವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲು ಇದರಲ್ಲಿ ಅವಕಾಶವಿರಲಿದೆ. ಕೇಂದ್ರ ಸರ್ಕಾರ ವಿವಾಹ ಕಾಯ್ದೆಯಲ್ಲಿ ತಿದ್ದುಪಡಿ ತರುವ ಮೂಲಕ ಮುಸ್ಲಿಂ ಮಹಿಳೆಯರ ರಕ್ಷಣೆಗೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಅದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಲು ಕೇಂದ್ರ ಸರ್ಕಾರ ಮಂತ್ರಿಗಳನ್ನೊಳಗೊಂಡ ತಂಡವನ್ನು ರಚಿಸಿದೆ.

Triple Talaq : Draft may taken up in winter session

ಜಮ್ಮು-ಕಾಶ್ಮೀರಕ್ಕೆ ಅನ್ವಯವಾಗುವುದಿಲ್ಲ: 370ನೇ ವಿಧಿ ಅಡಿಯಲ್ಲಿ ಜಮ್ಮು-ಕಾಶ್ಮೀರಕ್ಕೆ ವಿಶೇಷ ರಾಜ್ಯ ಸ್ಥಾನಮಾನ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತರಲಿರುವ ಹೊಸ ಕಾಯ್ದೆ ಜಮ್ಮು-ಕಾಶ್ಮೀರಕ್ಕೆ ಅನ್ವಯವಾಗುವುದಿಲ್ಲ.

ಕರಡು ಮಸೂದೆಯಲ್ಲೇನಿದೆ: ತ್ರಿವಳಿ ತಲಾಖ್ ಜಾಮೀನು ರಹಿತ ಅಪರಾಧ ಎಂದು ಪರಿಗಣನೆ, ಗರಿಷ್ಠ 3 ವರ್ಷ ಶಿಕ್ಷೆ, ಜಮ್ಮು-ಕಾಶ್ಮೀರಕ್ಕೆ ಅನ್ಯವಿಲ್ಲ, ಲಿಖಿತ, ಮಾತಿನ ಮೂಲಕ ಅಥವಾ ಎಲೆಕ್ಟ್ರಾನಿಕ್ ವಿಧಾನದಲ್ಲಿ ತಲಾಖ್ ನೀಡುವುದು ಮಸೂದೆಯಲ್ಲಿ ತಿಳಿಸಲಾಗಿದೆ.

ಆಗಸ್ಟ್ ತಿಂಗಳಲ್ಲಿ ಸುಪ್ರೀಂಕೋರ್ಟ್ ತ್ರಿವಳಿ ತಲಾಖ್ ರದ್ದು ಮಾಡುವ ಆದೇಶ ಹೊರಡಿಸಿದ ಹೊರತಾಗಿಯೂ ಈ ಸಂಬಂಧ ಸರ್ಕಾರಕ್ಕೆ 67 ದೂರುಗಳು ಬಂದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+