ರೈಲು ವಿಳಂಬವಾದರೆ ಪ್ರಯಾಣಿಕರಿಗೆ ಉಚಿತ SMS

Posted By: Nayana
Subscribe to Oneindia Kannada

ನವದೆಹಲಿ, ಜನವರಿ 06: ಕಾಯ್ದಿರಿಸಿದ ಟಿಕೆಟ್ ಹೊಂದಿದ ಪ್ರಯಾಣಿಕರಿಗೆ ರೈಲು ಸಂಚಾರ ವಿಳಂಬವಾದರೆ ಅದರ ಮಾಹಿತಿಯನ್ನು ಎಸ್‌ಎಂಎಸ್ ಮೂಲಕ ರವಾನಿಸುವ ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಹೆಚ್ಚುವರಿಯಾಗಿ 1,373 ರೈಲುಗಳಿಗೆ ವಿಸ್ತರಿಸಿದೆ.

ಗರೀಬ್ ರಥ್, ಡುರಾಂಟೊ, ಜನ ಶತಾಬ್ದಿ, ಸುವಿಧಾ, ಹಮ್ಸಫರ್, ಸೂಪರ್ ಫಾಸ್ಟ್ ಹಾಗೂ ಪ್ರೀಮಿಯಂ ರೈಲುಗಳ ಪ್ರಯಾಣಿಕರಿಗೆ ಈ ಸೌಲಭ್ಯ ದೊರಕಲಿದೆ.

ಟಿಕೆಟ್ ಕಾಯ್ದಿರಿಸುವ ವೇಳೆ ಕೌಂಟರ್‌ನಲ್ಲಿ ಭರಿಸಿದ ಅರ್ಜಿಯಲ್ಲಿ ನಮೂದಿಸಿದ ಮೊಬೈಲ್ ಸಂಖ್ಯೆಗಳಿಗೆ ಹಾಗೂ ಇ-ಟಿಕೆಟ್ ನಮೂನೆಯಲ್ಲಿ ದಾಖಲಿಸಿದ ಮೊಬೈಲ್ ಸಂಖ್ಯೆಗಳಿಗೆ ರೈಲು ವಿಳಂಬದ ಮಾಹಿತಿ ರವಾನೆಯಾಗಲಿದೆ.

Train Status SMS service extended

ಕಾಯ್ದಿರಿಸಿದ ಟಿಕೆಟ್ ಹೊಂದಿದ ಪ್ರಯಾಣಿಕರಿಗೆ ಈವರೆಗೆ ರೈಲು ಸಂಚಾರದ ಮಾಹಿತಿ ದೊರೆಯದ ಕಾರಣ ಅನೇಕ ಸಲ ಕಾಯಬೇಕಾಗುತ್ತಿತ್ತು. ಇದೀಗ ಎಸ್‌ಎಂಎಸ್ ಮೂಲಕ ಮಾಹಿತಿ ರವಾನೆ ಆಗುವುದರಿಂದ ಕಾದು ಕಾದು ಸುಸ್ತಾಗುವುದರಿಂದ ಮುಕ್ತಿ ದೊರಕಲಿದೆ. ಸದ್ಯ ಪಿಎನ್ ಆರ್ ಸಂಖ್ಯೆಗಳನ್ನು 139 ಗೆ ಎಸ್‌ಎಂಎಸ್ ಮಾಡುವ ಮೂಲಕ ರೈಲಿನ ಮಾಹಿತಿ ಪಡೆಯುವ ಅವಕಾಶವೂ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Railway Department has extended SMS service if delayed trains status service to passengers of more 1,373 trains.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ