ಬೆಂಗಳೂರಿನ ನಾಗೇಂದ್ರ-ಇವರೇ ಪ್ರಧಾನಿ ಮೋದಿಯ ಯೋಗ ಗುರು..

ನವದೆಹಲಿ, ಜೂನ್ 21: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯೋಗವನ್ನು ಹೇಳಿಕೊಡುವ ವ್ಯಕ್ತಿಯ ಪರಿಚಯ ಇಲ್ಲಿದೆ ನೋಡಿ. ಅವರ ಹೆಸರು ಡಾ.ಎಚ್.ಆರ್.ನಾಗೇಂದ್ರ. ದೆಹಲಿಯ ಲೋಕಕಲ್ಯಾಣ್ ಮಾರ್ಗದಲ್ಲಿರುವ ನರೇಂದ್ರ ಮೋದಿ ಅವರ ನಿವಾಸದಿಂದ ಮೂರು ಕಿಲೋಮೀಟರ್ ಫಾಸಲೆಯೊಳಗೆ ಗುರುಗಳ ಮನೆಯಿದೆ.

ಎಪ್ಪತ್ತೊಂದು ವರ್ಷದ ಯೋಗ ಗುರು ದೆಹಲಿಯ ಜೋರ್ ಬಾಗ್ ನಲ್ಲಿ ವಾರದ ಹಿಂದಷ್ಟೇ ಹೊಸ ಶಾಖೆ ಆರಂಭಿಸಿದ್ದಾರೆ. ಮೋದಿ ಅವರಿಗೆ ಈಗ ಅರವತ್ತೈದು ವರ್ಷ ವಯಸ್ಸು. ಬೆಂಗಳೂರಿನಲ್ಲಿರುವ ನಾಗೇಂದ್ರ ಅವರ ಯೋಗ ಕೇಂದ್ರ ಪ್ರಶಾಂತಿಯಲ್ಲಿ ಮೊದಲ ಬಾರಿಗೆ ಅವರು ಭೇಟಿ ಮಾಡಿದ್ದು ಮೂವತ್ತೈದು ವರ್ಷಗಳ ಹಿಂದೆ.

ಪ್ರಧಾನಿ ಅವರಿಗೆ ವೈಯಕ್ತಿಕವಾಗಿ ತರಬೇತು ನೀಡುವುದಕ್ಕೆ ನಾಗೇಂದ್ರ ಅವರು ದೆಹಲಿಗೆ ಸ್ಥಳಾಂತರವಾದರಾ? ಎಂದು ಕೇಳಿದರೆ, "ಅವರಿಗೆ ಎಲ್ಲವೂ ಚೆನ್ನಾಗಿ ಗೊತ್ತಿದೆ. ಅವರಿಗೆ ಆವರ್ತನ ಧಾನ ಅಚ್ಚು ಮೆಚ್ಚು. ಅವರಿಗೇನಾದರೂ ಮಾಹಿತಿ-ಸಲಹೆ ಬೇಕಿದ್ದಾಗ ಒಂದು ಕರೆ ಮಾಡಿದರೆ ಸಾಕು" ಎನ್ನುತ್ತಾರೆ ನಾಗೇಂದ್ರ್.

ಮೋದಿ ಟೀಚರ್ ಎಂಬ ಕಾರಣಕ್ಕೆ ಹೆಚ್ಚಿದೆ ಕೀರ್ತಿ

ಮೋದಿ ಟೀಚರ್ ಎಂಬ ಕಾರಣಕ್ಕೆ ಹೆಚ್ಚಿದೆ ಕೀರ್ತಿ

ನಾಗೇಂದ್ರ ಅವರು ಪ್ರಧಾನಿಗೆ ಯೋಗ ಕಲಿಸಿದವರು ಎಂಬ ಕಾರಣಕ್ಕೆ ಕೀರ್ತಿ ಬಹಳ ಸಿಕ್ಕಿದೆ. "ನಾವು ತರಬೇತಿ ಕೇಂದ್ತ ಆರಂಭಿಸಿದಾಗ ಶೇ ಇಪ್ಪತ್ತರಷ್ಟು ಸೀಟುಗಳು ಮಾತ್ರ ಭರ್ತಿಯಾಗಿತ್ತು. ಆದರೆ ಈಗ ವಿಪರೀತ ಹೆಚ್ಚಾಗಿದೆ" ಎನುತ್ತಾರೆ ಯೋಗತಜ್ಞ ನಾಗೇಂದ್ರ.

ದೆಹಲಿಯಲ್ಲಿ ಯೋಗ ಕಲಿಕೆಗೆ ಡಿಮ್ಯಾಂಡ್

ದೆಹಲಿಯಲ್ಲಿ ಯೋಗ ಕಲಿಕೆಗೆ ಡಿಮ್ಯಾಂಡ್

ದೆಹಲಿಯಲ್ಲಿ ಯೋಗ ಕಲಿಯುವ ಆಸಕ್ತಿ ಇರುವವರು ವಿಚಾರಣೆ ನಡೆಸುವುದು ಹೆಚ್ಚಾಗಿದ್ದರಿಂದ ದೆಹಲಿಯಲ್ಲಿ ಒಂದು ಕೇಂದ್ರ ಆರಂಭಿಸಲಾಯಿತು ಎನ್ನುತ್ತಾರೆ ಅವರು.

ಗುಜರಾತ್ ನಲ್ಲೂ ಯೋಗ ಶಿಬಿರ

ಗುಜರಾತ್ ನಲ್ಲೂ ಯೋಗ ಶಿಬಿರ

ಹಲವು ವರ್ಷಗಳಿಂದ ಮೋದಿ ಹಾಗೂ ನಾಗೇಂದ್ರ ಮಧ್ಯೆ ನಿಕಟ ನಂಟಿದೆ. ಗುಜರಾತ್ ಮುಖ್ಯಮಂತ್ರಿ ಆಗಿದ್ದ ವೇಳೆ ನಾಗೇಂದ್ರ ಅವರ ಮೂಲಕ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಮೋದಿ ಯೋಗ ಶಿಬಿರ ಆಯೋಜಿಸಿದ್ದರು.

ವಾಯು ಸೇನೆ ಅಧಿಕಾರಿಗಳಿಗೆ ಪಾಠ

ವಾಯು ಸೇನೆ ಅಧಿಕಾರಿಗಳಿಗೆ ಪಾಠ

ಭಾರತೀಯ ವಾಯು ಸೇನೆಯ ಅಧಿಕಾರಿಗಳಿಗೆ ಕೂಡ ಡಾ.ನಾಗೇಂದ್ರ ಅವರ ತಂಡ ತರಬೇತಿ ನೀಡುತ್ತಿದೆ. ಬೆಂಗಳೂರಿನಲ್ಲಿರುವ ಯೋಗ ಕೇಂದ್ರ ಡೀಮ್ಡ್ ವಿವಿ ಆಗಿದ್ದು, ಅದರ ಚಾನ್ಸೆಲರ್ ಆಗಿ ನಾಗೇಂದ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.

ಆಯುರ್ವೇದ ಚಿಕಿತ್ಸೆ ಬಗ್ಗೆಯೂ ತಿಳಿವಳಿಕೆ

ಆಯುರ್ವೇದ ಚಿಕಿತ್ಸೆ ಬಗ್ಗೆಯೂ ತಿಳಿವಳಿಕೆ

ದೆಹಲಿಯ ಜೋರ್ ಬಾಗ್ ನಲ್ಲಿ ನಾಲ್ಕಂತಸ್ತಿನ ಕಟ್ಟಡದ ತರಬೇತಿ ಕೇಂದ್ರ ಇದ್ದು, ಅದನ್ನು ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಹಾಗೂ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಉದ್ಘಾಟಿಸಿದ್ದಾರೆ. ಇಲ್ಲಿ ಯೋಗ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತದೆ. ಒಂದು ಬ್ಯಾಚ್ ಗೆ ನಲವತ್ತು ಮಂದಿ ತರಬೇತಿ ಪಡೆಯುತ್ತಾರೆ. ಜತೆಗೆ ಆಯುರ್ವೇದ ಚಿಕಿತ್ಸೆ ಬಗ್ಗೆ ತಿಳಿಸಿಕೊಡಲಾಗುತ್ತದೆ ಎಂದು ನಾಗೇಂದ್ರ ಹೇಳುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+