ನನ್ನನ್ನು ಝೂನಲ್ಲಿರುವ ಕೋತಿ ಥರ ನೋಡಿಕೊಳ್ತಾರೆ ಎಂದು ದೂರು ಹೇಳಿಕೊಂಡ ಮೈಖೇಲ್ ಕ್ರಿಶ್ಚಿಯನ್
ನೋಯ್ಡಾ, ಮೇ 10: ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣದ ಆರೋಪ ಹೊತ್ತಿರುವ ಮೈಖೇಲ್ ಕ್ರಿಸ್ಚಿಯನ್, ಜೈಲಿನಲ್ಲಿ ತನಗೆ ಸರಿಯಾದ ಆಹಾರ ನೀಡುತ್ತಿಲ್ಲ. ಆದ್ದರಿಂದ ಹದಿನಾರು ಕೇಜಿ ಕಡಿಮೆ ಆಗಿದ್ದೇನೆ ಎಂದು ದೂರಿದ ಹಿನ್ನೆಲೆಯಲ್ಲಿ ತಿಹಾರ್ ಜೈಲಧಿಕಾರಿಗಳಿಗೆ ದೆಹಲಿ ಕೋರ್ಟ್ ಗುರುವಾರ ಸಮನ್ಸ್ ನೀಡಿದೆ.
ಶುಕ್ರವಾರದಂದು ಅಧಿಕಾರಿಗಳು ಕೋರ್ಟ್ ಮುಂದೆ ಹಾಜರಾಗಬೇಕು ಎಂದು ಸೂಚಿಸಿದೆ. ನನಗೆ ಯುರೋಪಿಯನ್ ತಿಂಡಿಯನ್ನು ಕೇಳಿದರೆ ಕೊಡುವುದಕ್ಕೆ ಆಗಲ್ಲ ಎನ್ನುತ್ತಾರೆ. ನನ್ನನ್ನು ಪ್ರಾಣಿ ಸಂಗ್ರಹಾಲಯದಲ್ಲಿರುವ ಕೋತಿ ಥರ ನಡೆಸಿಕೊಳ್ಳುತ್ತಾರೆ ಎಂದು ಆತ ಆರೋಪ ಮಾಡಿದ್ದಾನೆ.

ತನ್ನ ಜತೆ ಇರುವ ಕೈದಿಗಳು ತೆರೆದ ಜಾಗದಲ್ಲೇ ಮಲ ವಿಸರ್ಜನೆ ಮಾಡುತ್ತಾರೆ. ನನಗೂ ಹಾಗೇ ಮಾಡು ಎನ್ನುತ್ತಾರೆ ಎಂದು ಆತ ದೂರಿದ್ದಾನೆ. ಈಸ್ಟರ್ ಅನ್ನು ನನ್ನ ಕುಟುಂಬದ ಜತೆ ಆಚರಿಸಬೇಕು. ಅದಕ್ಕಾಗಿ ಏಳು ದಿನಗಳ ಮಧ್ಯಂತರ ಜಾಮೀನು ನೀಡುವಂತೆ ಮನವಿ ಮಾಡಿಕೊಂಡೆ. ಅದನ್ನು ಕೂಡ ಸಿಬಿಐ ವಿಶೇಷ ನ್ಯಾಯಾಧೀಶರು ನಿರಾಕರಿಸಿದರು ಎಂದು ಆತ ಹೇಳಿದ್ದಾನೆ.












Click it and Unblock the Notifications