• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶ್ರೀನಗರದಲ್ಲಿ ಪ್ರತಿಭಟನೆಯೇ ನಡೆದಿಲ್ಲ: ಗೃಹ ಸಚಿವಾಲಯ ಸ್ಪಷ್ಟನೆ

|

ನವದೆಹಲಿ, ಆಗಸ್ಟ್ 10: ಭಾರತ ಸರ್ಕಾರ ಸಂವಿಧಾನಸ ಕಲಂ 370 ರದ್ದು ಮಾಡಿದ್ದಕ್ಕೆ ಶ್ರೀನಗರದಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ ಎಂಬ ಸುದ್ದಿಯನ್ನು ಗೃಹ ಸಚಿವಾಲಯ ತಳ್ಳಿ ಹಾಕಿದೆ.

ಅಂತಹ ಯಾವುದೇ ಘಟನೆ ನಡೆದಿಲ್ಲ, ಈ ಕುರಿತು ರಾಯ್ಟರ್ಸ್ ಸುದ್ದಿ ವಾಹಿನಿ ತಪ್ಪು ಮಾಹಿತಿ ಪ್ರಕಟಿಸಿದೆ ಎಂದು ಹೇಳಿದೆ.

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು, ತೀವ್ರಗೊಂಡ ಪ್ರತಿಭಟನೆ

ಶ್ರೀನಗರದಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದರು ಎಂದು ಪ್ರಕಟವಾಗಿತ್ತು.

ಆದರೆ ನಿಜವಾಗಿ ಯಾವುದೇ ಪ್ರತಿಭಟನೆ ನಡೆದಿಲ್ಲ.ಸಣ್ಣಪುಟ್ಟ ಗಲಾಟೆಗಳು ನಡೆದಿವೆ ಆದರೆ 20ಕ್ಕಿಂತ ಹೆಚ್ಚು ಮಂದಿ ಎಲ್ಲೂ ಒಟ್ಟಿಗೆ ಸೇರಿಲ್ಲ ಎಂದು ಸ್ಪಷ್ಟಪಡಿಸಿದೆ.

ಅಶ್ರುವಾಯು ಸಿಡಿಸಿದಾಗ ಕೆಲವು ಮಹಿಳೆಯರು ಹಾಗೂ ಮಕ್ಕಳು ನೀರಿಗೆ ಹಾರಿದ್ದಾಗಿಯೂ ವರದಿ ಮಾಡಿತ್ತು. ಆದರೆ ಅದೆಲ್ಲವೂ ಸುಳ್ಳು ಅಂತಹ ಪ್ರತಿಭಟನೆ ನಡೆದೇ ಇಲ್ಲ ಎಂದು ಹೇಳಿದೆ.

ಮ್ಮು ಕಾಶ್ಮೀರದಲ್ಲಿ ವಿಧಾನಸಭೆ ಇರಲಿದೆ ಆದರೆ ಲಡಾಕ್‌ನಲ್ಲಿ ವಿಧಾನಸಭೆ ಇರುವುದಿಲ್ಲ.ಈ ನಿರ್ಧಾರದಿಂದ ಪಾಕಿಸ್ತಾನ ಮುನಿಸಿಕೊಂಡಿದ್ದು, ಭಾರತದ ಜೊತೆ ಯಾವುದೇ ವ್ಯವಹಾರವನ್ನು ಹೊಂದುವುದಿಲ್ಲ ಎಂದು ಹೇಳಿದೆ. ಅದರ ಜೊತೆಗೆ ಥಾರ್, ಸಂಜೋತಾ ಎಕ್ಸ್‌ ಪ್ರೆಸ್‌ ರೈಲನ್ನು ಸ್ಥಗಿತಗೊಳಿಸಿದೆ. ಅದರ ಜೊತೆಗೆ ಪಾಕಿಸ್ತಾನ ಏರೋಸ್ಪೇಸ್‌ನಲ್ಲಿ ಭಾರತದ ವಿಮಾನಕ್ಕೆ ನಿರ್ಬಂಧವನ್ನೂ ಕೂಡ ಹೇರಿದೆ.

English summary
MHA Spokesperson: There are media reports claiming there was a protest involving 10,000 people in Srinagar.This is completely fabricated and incorrect.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X