ಮೋದಿಗೆ ಥ್ಯಾಂಕ್ಸ್‌,'ಜೀವಮಾನದಲ್ಲಿ ಈ ದಿನಕ್ಕಾಗಿ ಕಾದಿದ್ದೆ': ಸುಷ್ಮಾ ಕೊನೆ ಟ್ವೀಟ್

ನವದೆಹಲಿ, ಆಗಸ್ಟ್ 7: ಜೀವಮಾನದಲ್ಲಿ ಈ ದಿನವನ್ನು ನೋಡಲು ಕಾಯುತ್ತಿದ್ದೆ ಎಂದವರು ಜೀವವನ್ನೇ ಬಿಟ್ಟು ತೆರಳಿದ್ದಾರೆ.

ಆರ್‌ಎಸ್‌ಎಸ್‌ ಚಿಂತನೆಯೊಂದಿಗೆ ಬೆಳೆದ ಬಿಜೆಪಿ ಅಥವಾ ಜನಸಂಘ ನಾಯಕರಿಗೆ ಸಂವಿಧಾನದ 370ನೇ ವಿಧಿ ರಾಜಕೀಯವಾಗಿ ಪ್ರಮುಖವಾದದ್ದು, ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸುವುದು ಬಿಜೆಪಿ ನಾಯಕರಿಗೆ ರಾಮಮಂದಿರದಷ್ಟೇ ಪ್ರಮುಖವಾದ ವಿಚಾರ.

ಬಿಜೆಪಿ ನಾಯಕರ ಬಹುತೇಕ ಭಾಷಣಗಳಲ್ಲಿ ಸಂವಿಧಾನದ 370ನೇ ವಿಧಿ ಪ್ರಸ್ತಾಪವಾಗೇ ಆಗುತ್ತದೆ. ಇದಕ್ಕೆ ಸುಷ್ಮಾ ಹೊರತಾಗಿರಲಿಲ್ಲ. ಲೋಕಸಭೆ ಕಲಾಪ ಬಹಿರಂಗ ಸಭೆಗಳು, ಚುನಾವಣಾ ಭಾಷಣಗಳಲ್ಲಿ ಈ ವಿಚಾರವನ್ನು ಸುಷ್ಮಾ ಸ್ವರಾಜ್ ಕೂಡ ಸಾಕಷ್ಟು ಬಾರಿ ಪ್ರಸ್ತಾಪಿಸಿದ್ದರು.

The Last Emotional Tweet Of Sushma Swaraj

ಆದರೆ ಅದನ್ನು ಸಾಕಾರಗೊಳಿಸುವ ಅವಕಾಶಗಳು ಸುಷ್ಮಾ ಸ್ವರಾಜ್ ಅಧಿಕಾರದಲ್ಲಿದ್ದ ಅವಧಿಯಲ್ಲಿ ಸಾಧ್ಯವಾಗಿರಲಿಲ್ಲ. ಹೀಗಾಗಿ ಬಿಜೆಪಿಯ ಬಹುತೇಕ ನಾಯಕರಿಗೆ ಇದು ಕನಸಾಗಿಯೇ ಉಳಿದಿತ್ತು. ಆದರೆ ಸುಷ್ಮಾ ಸ್ವರಾಜ್‌ ಅವರ ನಾಲ್ಕೂವರೆ ದಶಕಗಳ ಸಾರ್ವಜನಿಕ ಬದುಕಿನ ಕನಸು ನನಸಾಗಿದ್ದನ್ನು ನೋಡಿಕೊಂಡೇ ಇಹಲೋಕ ತ್ಯಜಿಸಿದ್ದಾರೆ.

ಅವರ ಕೊನೆಯ ಟ್ವೀಟ್ ನಲ್ಲಿ ಈ ಖುಷಿಯನ್ನು ಹಂಚಿಕೊಂಡಿದ್ದರು. ವಿದೇಶಾಂಗ ಸಚಿವರಾಗಿದ್ದಾಗ ಸಾರ್ವಜನಿಕರ ಕುಂದುಕೊರತೆಗಳಿಗೆ ಸದಾ ಸ್ಪಂದಿಸಿ, ಜನ ಮೆಚ್ಚುಗೆಗೆ ಪಾತ್ರವಾಗಿದ್ದ ಸುಷ್ಮಾ ಅವರ ಕೊನೆಯ ಟ್ವೀಟ್ ದೇಶದ ಜನರನ್ನು ಭಾವನಾತ್ಮಕಗೊಳಿಸಿದೆ.

ತಮ್ಮ ಟ್ವೀಟಿನಲ್ಲಿ ಹೀಗೆ ಹೇಳಿದ್ದಾರೆ'' ಪ್ರಧಾನ ಮಂತ್ರಿಯವರೇ ನಿಮಗೆ ಹಾರ್ದಿಕ ಅಭಿನಂದನೆಗಳು, ನಾನು ನನ್ನ ಜೀವನದಲ್ಲಿ ಈ ದಿನಕ್ಕಾಗಿ ಕಾಯುತ್ತಿದ್ದೆ'' ಎಂದು ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು.

ಈ ಟ್ವೀಟ್‌ನ್ನು ಸರಿಯಾಗಿ 7 ಗಂಟೆ 23 ನಿಮಿಷಕ್ಕೆ ಪೋಸ್ಟ್ ಮಾಡಿದ್ದಾರೆ. ವಿಪರ್ಯಾಸವೆಂದರೆ ಇದಾದ ಒಂದು ಗಂಟೆಯ ಬಳಿಕ ಸುಷ್ಮಾ ಸ್ವರಾಜ್ ಅವರಿಗೆ ತೀವ್ರ ಹೃದಯಾಘಾತವಾಗಿತ್ತು.

ಜೀವಮಾನದಲ್ಲಿ ಇಂತಹ ಕ್ಷಣಕ್ಕಾಗಿ ಕಾಯುತ್ತಿದ್ದೆ ಎಂದವರು ಕೆಲವೇ ಕ್ಷಣಗಳಲ್ಲಿ ಇಲ್ಲವಾಗಿದ್ದಾರೆ.ಟ್ವೀಟ್ ಮೂಲಕ ದೇಶ-ವಿದೇಶದಲ್ಲಿನ ಸಾವಿರಾರು ಜನರ ಕಣ್ಣಿರು ಒರೆಸಿದ್ದ ಸುಷ್ಮಾ ತಮ್ಮ ಕೊನೆಯ ಟ್ವೀಟ್‌ನಲ್ಲಿಲಕ್ಷಾಂತರ ಜನರ ಕಣ್ಣು ತೇವವಾಗುವಂತೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+