ನಾಲ್ಕು ವರ್ಷದ ಬಾಲಕಿಯ ಕತ್ತು ಸೀಳಿದ ಗಾಳಿಪಟ ದಾರ
ನವದೆಹಲಿ, ಆಗಸ್ಟ್ 26: ಗಾಳಿಪಟ ದಾರ ನಾಲ್ಕು ವರ್ಷದ ಬಾಲಕಿಯ ಕತ್ತು ಸೀಳಿದ ಘಟನೆ ದೆಹಲಿಯಲ್ಲಿ ನಡೆದಿದೆ.
ಅದು ಗಾಜು ಲೇಪಿತ ,ಆಜಾ ದಾರವಾಗಿದ್ದು, ತಂದೆ ಮತ್ತು ಮಗಳು ಹನುಮಾನ್ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಖಜೂರಿ ಚೌಕ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೃತ ಬಾಲಕಿಯನ್ನು 4 ವರ್ಷದ ಇಶಿಕಾ ಎಂದು ಗುರುತಿಸಲಾಗಿದ್ದು, ಈಕೆ ಸೋನಿಯಾ ವಿಹಾರ್ ನಿವಾಸಿ ಎಂದು ತಿಳಿದುಬಂದಿದೆ.
ಜನವರಿಯಲ್ಲಿ ಜೈಪುರದ ವಿದ್ಯಾನಗರದಲ್ಲಿ 6 ವರ್ಷದ ಬಾಲಕನೋರ್ವ ಇದೇ ಮಾಂಜಾ ದಾರಕ್ಕೆ ಬಲಿಯಾಗಿದ್ದ.

ಇತ್ತೀಚೆಗೆ ಇದೇ ದೆಹಲಿಯಲ್ಲಿ ಟೆಕ್ಕಿಯೊಬ್ಬ ಬೈಕ್ ನಲ್ಲಿ ತೆರಳುತ್ತಿದ್ದಾಗ ಮಾಜಾ ದಾರ ಆತನ ಕುತ್ತಿಗೆ ಸೀಳಿ ಕೊಂದು ಹಾಕಿತ್ತು. ಈ ಘಟನೆ ಹಸಿರಾಗಿರುವಾಗಲೇ ಮತ್ತೊಂದು ಧಾರುಣ ಘಟನೆ ನಡೆದಿದೆ.
ಮಗಳ ಕುತ್ತಿಗೆಗೆ ಹೊಡೆದ ಗಾಳಿಪಟ ದಾರವನ್ನು ಗಮನಿಸಿದ ಸಂತ್ರಸ್ತೆಯ ತಂದೆ ಆಕೆಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಮಗು ಮೃತಪಟ್ಟಿದೆ ಎಂದು ಘೋಷಿಸಲಾಯಿತು.
ಬಾಲಕಿ ಇಶಿಕಾ ತನ್ನ ತಂದೆಯೊಂದಿಗೆ ಮೋಟಾರುಬೈಕ್‍ನಲ್ಲಿ ಪ್ರಯಾಣಿಸುತ್ತಿದ್ದಾಗ ಗಾಜು ಲೇಪಿತ ಗಾಳಿಪಟದ ದಾರ (ಮಂಜಾ) ಕುತ್ತಿಗೆಗೆ ಸುತ್ತಿಗೊಂಡು ಗಾಯಗೊಂಡು ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಜನರ ಪ್ರಾಣಕ್ಕೆ ಕುತ್ತು ತರುವಂತಹ ವಸ್ತುಗಳಿಂದ ಅದೇನು ಖುಷಿ ಸಿಗುತ್ತೆ ಹೇಳಿ, ತಮ್ಮ ಸಂತೋಷವನ್ನು ಬದಿಗಟ್ಟು ಜನರ ಸುರಕ್ಷತೆಯನ್ನು ನೋಡಿಕೊಳ್ಳುವುದು ಒಳಿತು. ಗಾಳಿಪಟ ದಾರಕ್ಕೆ ಪ್ರತಿ ವರ್ಷ ಸುಮಾರು ನಾಲ್ಕುರಿಂದ ಐದು ಮಂದಿ ಮೃತಪಡುತ್ತಿದ್ದಾರೆ.












Click it and Unblock the Notifications