ಶಿಕ್ಷಕ ವೃತ್ತಿ ಕೇವಲ ನೌಕರಿಯಲ್ಲ : ಮೋದಿ

ನವದೆಹಲಿ, ಸೆ.4 : ಶಿಕ್ಷಕರು ವಿದ್ಯಾರ್ಥಿಗಳಿಗೆ ದಾರಿ ತೊರುವ ದೇವರು, ಶಿಕ್ಷಕ ವೃತ್ತಿ ನೌಕರಿಯಲ್ಲ, ಅದು ಜೀವನ ಧರ್ಮವಿದ್ದಂತೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನೌಕರಿ ಇಲ್ಲದೆ ಇದ್ದರು ಶಿಕ್ಷಕರು ಯಾವಾಗಲು ನಿವೃತ್ತಿ ಹೊಂದುವುದಿಲ್ಲ, ಕಲಿಸುವ ತುಡಿತ ಅವರಲ್ಲಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಗುರುವಾರ ರಾಷ್ಟ್ರಪತಿ ಪದಕ ವಿಜೇತ 350 ಶಿಕ್ಷಕರ ಜೊತೆ ಸಂವಾದ ನಡೆಸಿದ ಪ್ರಧಾನಿ ಮೋದಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ದಾರಿ ತೊರುವ ದೇವರು ಎಂದು ಹೇಳಿದರು. ಶಿಕ್ಷಕರ ಮನಸ್ಸು ಯಾವಾಗಲು ಕಲಿಸುವ ತುಡಿತವನ್ನು ಹೊಂದಿರುತ್ತದೆ ಹಾಗಾಗಿ ನೌಕರಿ ಇಲ್ಲದೆ ಇದ್ದರು ಶಿಕ್ಷಕರು ಯಾವಾಗಲು ನಿವೃತ್ತಿ ಹೊಂದುವುದಿಲ್ಲ ಎಂದು ಬಣ್ಣಿಸಿದರು.

Narendra Modi

ಶಿಕ್ಷಕರು ವಿದ್ಯಾರ್ಥಿಗಳಿಗೆ ದಾರಿ ತೊರುವ ದೇವರು ಎಂದು ಹೇಳಿದ ಮೋದಿ, ಯಾವುದೇ ವಿದ್ಯಾರ್ಥಿಯ ಜೀವನ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದ್ದಾಗಿದೆ ಎಂದ ಮೋದಿ, ಶಿಕ್ಷಕರು ಜೀವನ ಪೂರ್ತಿ ಶಿಕ್ಷಕರೇ ಆಗಿರುತ್ತಾರೆ, ನಾನು ಕೂಡ ಸರ್ಕಾರಿ ಶಾಲೆಯಲ್ಲಿ ಓದಿದ್ದೇನೆ, ಶಿಕ್ಷಕ ವೃತ್ತಿ ಜೀವನ ಬಹಳ ಮಹತ್ವದ್ದು ಎಂದರು. [ಶುಕ್ರವಾರ ವಿದ್ಯಾರ್ಥಿಗಳಿಗೆ ಮೋಡಿ ಮಾಡಲಿದ್ದಾರೆ ಮೋದಿ]

14 ಶಿಕ್ಷಕರಿಗೆ ಪ್ರಶಸ್ತಿ : ಶಿಕ್ಷಕರ ದಿನಾಚರಣೆ ಮುನ್ನಾದಿನವಾದ ಗುರುವಾರ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು 345 ಶಿಕ್ಷಕರಿಗೆ ರಾಷ್ಟ್ರೀಯ ಶಿಕ್ಷಕ ಪುರಸ್ಕಾರ ಘೋಷಿಸಿದ್ದು, ಇವರಲ್ಲಿ ಕರ್ನಾಟಕ 14 ಶಿಕ್ಷಕರು ಸೇರಿದ್ದಾರೆ. [ಪಿಟಿಐ ಚಿತ್ರ]

ಪ್ರಶಸ್ತಿ ಪಡೆದ ಶಿಕ್ಷಕರ ಪಟ್ಟಿ

* ಎಂ.ವೆಂಕಟರಮಣಪ್ಪ, ಮುರ್ಫಿ ಟೌನ್, ಹಲಸೂರು, ಬೆಂಗಳೂರು
* ಸುರಿಯಾ ಬಾನು, ಅಶೋಕನಗರ, ಬೆಂಗಳೂರು
* ಎನ್. ವೆಂಕಟರಮಣಪ್ಪ, ಅಂಬೇಡ್ಕರ ನಗರ, ಮುಳಬಾಗಿಲು
* ಕೆ.ರಮೇಶ್‌ನಾಯಕ್ ರಾಯಿ, ಕೆದ್ದಲಿಕೆ ಬಂಟ್ವಾಳ
* ಲಕ್ಷ್ಮಿಕಾಂತ, ನಂದಳಿಕೆ, ಕಾರ್ಕಳ
* ರತ್ನಾಹೂಗಾರ್, ಒಕ್ಕಲಗೇರಿಯೋಣಿ ಗದಗ
* ಅನುಸೂಯಾರಾಥೋಡ್, ಸಿದ್ದಾಪುರ, ರಾಣೆಬೆನ್ನೂರು
* ಬಿ.ಸಿದ್ದಣ್ಣ ಸಾಹೂಕಾರ್, ಮುಂಡರಗಿ ಯಾದಗಿರಿ
* ಬಿ.ಎಂ ಪಾಂಢ್ರೆ, ಚಂಬೋಲ್, ಬೀದರ್
* ಬಿ.ವೆಂಕಟೇಶಪ್ಪ, ಹಿರೆಕತ್ತಿಗೇನಹಳ್ಳಿ ಚಿಂತಾಮಣಿ
* ಬಸವರಾಜಪ್ಪ ಡಿ.ಟಿ, ಹಿರೆನಲ್ಲೂರ್ ಕಡೂರ್
* ಪದ್ಮಾ ಹುಂಬಿ, ಗದಗ ಬೆಟಗೇರಿ
* ಸುಶೀಲಾ ದೇಸಾಯಿ, ತಾವರೆಗೆರಾ, ಕುಷ್ಟಗಿ
* ಗಜಾನನ ಹೆಗಡೆ, ಕಾಂವಚೂರು, ಸಿದ್ದಾಪುರ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+