• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡಿಕೆಶಿ ಸುಪರ್ಧಿಯಲ್ಲಿ 317 ಬ್ಯಾಂಕ್ ಖಾತೆ: ಇಡಿ ತನಿಖೆ

|

ನವದೆಹಲಿ, ಸೆಪ್ಟೆಂಬರ್ 13: ಡಿ.ಕೆ.ಶಿವಕುಮಾರ್ ತಮ್ಮ ಅಕ್ರಮ ಹಣವನ್ನು 317 ಖಾತೆಗಳ ಮೂಲಕ ವಿವಿದೆಡೆ ಹೂಡಿಕೆ ಮಾಡಿದ್ದಾರೆ ಎಂದು ಇಡಿ ತನಿಖೆ ಮಾಡಿದೆ.

ಇಂದು ವಿಶೇಷ ನ್ಯಾಯಾಲಯದಲ್ಲಿ ಡಿ.ಕೆ.ಶಿವಕುಮಾರ್ ಪ್ರಕರಣ ವಿಚಾರಣೆ ವೇಳೆ ಈ ವಿಷಯವನ್ನು ಇಡಿ ಪರ ವಕೀಲರು ನ್ಯಾಯಾಲಯಕ್ಕೆ ಹೇಳಿದರು.

DK Shivakumar Bail LIVE Updates: ಡಿಕೆಶಿಗೆ ಜಾಮೀನಿಲ್ಲ, ಸೆ 17 ರ ವರೆಗೆ ಇಡಿ ವಶಕ್ಕೆ

ಅಕ್ರಮ ಹಣವನ್ನು 317 ಬ್ಯಾಂಕ್ ಖಾತೆಗಳ ಮೂಲಕ ಡಿ.ಕೆ.ಶಿವಕುಮಾರ್ ಹಂಚಿದ್ದಾರೆ ಅಥವಾ ಹೂಡಿಕೆ ಮಾಡಿದ್ದಾರೆ ಎಂದು ಅವರು ನ್ಯಾಯಾಧೀಶರ ಗಮನಕ್ಕೆ ತಂದರು.

ಮುಂದುವರೆದು ವಾದ ಮಂಡಿಸಿದ ಅವರು, ಡಿ.ಕೆ.ಶಿವಕುಮಾರ್‌ಗೆ 800 ಕೋಟಿಗೂ ಹೆಚ್ಚು ಮೌಲ್ಯದ ಬೇನಾಮಿ ಆಸ್ತಿ ಇದೆ. ಈವರೆಗೆ 200 ಕೋಟಿ ಬೇನಾಮಿ ಆಸ್ತಿ ದಾಖಲೆ ದೊರೆತಿದೆ. ಇನ್ನೂ ಕೆಲವು ತನಿಖೆ ನಡೆಸಲಾಗುತ್ತಿದೆ ಎಂದರು.

ಇಡಿ ಪರ ವಕೀಲ ನಟರಾಜ್ ಈ ಎರಡು ಅತ್ಯಂತ ಮಾಹಿತಿಗಳನ್ನು ನ್ಯಾಯಾಲಯದ ಮುಂದೆ ಇಂದು ಇಟ್ಟರು.

ಡಿಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರಾಗಲು ಮಗಳು ಐಶ್ವರ್ಯಳೇ ಕಾರಣ?

5 ಗಂಟೆ ವೇಳೆಗೆ ಆದೇಶ ಕಾಯ್ದಿರಿಸಿ ನ್ಯಾಯಾಧೀಶರು ನ್ಯಾಯಾಲಯದಿಂದ ಹೊರಗೆ ಹೋದ ಸಂಬರ್ಭ ಪತ್ರಕರ್ತರತ್ತ ತಿರುಗಿ ಮಾತನಾಡಿದ ಡಿ.ಕೆ.ಶಿವಕುಮಾರ್, 'ನನ್ನ ಬಳಿ 317 ಬ್ಯಾಂಕ್ ಖಾತೆ ಇದ್ದರೆ ನಾನು ತಪ್ಪು ಮಾಡಿದ್ದೇನೆಂದು ಬರೆದು ಕೊಟ್ಟುಬಿಡುತ್ತೇನೆ' ಎಂದು ಹೇಳಿದರು. ಆ ಮೂಲಕ ಇಡಿ ಸುಳ್ಳು ಆರೋಪ ಮಾಡುತ್ತಿದೆ ಎಂದು ಡಿಕೆಶಿ ಹೇಳಿದರು.

ಇಂದು ವಿಚಾರಣೆ ನಡೆಸಿದ ನ್ಯಾಯಾಲವು ಡಿ.ಕೆ.ಶಿವಕುಮಾರ್ ಅವರನ್ನು ಸೆಪ್ಟೆಂಬರ್ 17 ರ ವರೆಗೆ ಇಡಿ ವಶಕ್ಕೆ ನೀಡಿತು.

English summary
ED alleged that DK Shivakumar diverteed tainted money through 317 bank accounts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X