ಕೋಲ್ಕತ್ತಾ ಪೊಲೀಸ್ ಕಮಿಷನರ್ ವಿವಾದ: ಸುಪ್ರೀಂನಲ್ಲಿ ನಾಳೆ ಸಿಬಿಐ ಅರ್ಜಿ ವಿಚಾರಣೆ
ಕೋಲ್ಕತ್ತಾ, ಫೆಬ್ರವರಿ 04: ಕೋಲ್ಕತ್ತಾದಲ್ಲಿ ಭಾನುವಾರ ನಡೆದ ಹೈಡ್ರಾಮಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿಗೆ ಸಿಬಿಐ ಸಲ್ಲಿಸಿದ ಅರ್ಜಿ ವಿಚಾರಣೆ ಫೆಬ್ರವರಿ 5, ಮಂಗಳವಾರದಂದು ನಡೆಯಲಿದೆ.
ಬಹುಕೋಟಿ ಶಾರದಾ ಸಮೂಹ ಸಂಸ್ಥೆ ಚಿಟ್ ಫಂಡ್ ಹಗರಣ ಹಾಗೂ ರೋಸ್ ವ್ಯಾಲಿ ಹಗರಣಕ್ಕೆ ಸಂಬಂಧಿಸಿದಂತೆ ಕೋಲ್ಕತಾ ಮಹಾನಗರದ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರನ್ನು ಬಂಧಿಸಲು ಭಾನುವಾರ ಸಿಬಿಐ ಮುಂದಾಗಿತ್ತು.
ಆದರೆ ಕೋಲ್ಕತಾ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಅವರ ವಿಚಾರಣೆಗೆಂದು ಬಂದಿದ್ದ ಐವರು ಸಿಬಿಐ ಅಧಿಕಾರಿಗಳನ್ನೇ ಪೊಲೀಸ್ ವಾಹನದಲ್ಲಿ ಬಲವಂತವಾಗಿ ಕರೆದೊಯ್ದು, ವಶಕ್ಕೆ ತೆಗೆದುಕೊಳ್ಳಲಾಗಿತ್ತು.

ರಾಜೀವ್ ಕುಮಾರ್ ಅವರಿಗೆ ಈಗಾಗಲೇ ಹಲವು ಬಾರಿ ಸಮನ್ಸ್ ನೀಡಿದ್ದರೂ ಅವರು, ತನಿಖೆಗೆ ಸಹಕರಿಸಿಲ್ಲ ಎಂದು ದೂರಿ ಸುಪ್ರೀಂ ಗೆ ಅರ್ಜಿ ಸಲ್ಲಿಸಿದ್ದ ಸಿಬಿಐ, ಅವರ ವಿಚಾರಣೆಗೆ ಅನುವು ಮಾಡಿಕೊಡುವಂತೆ ಮತ್ತು ತನಿಖೆಗೆ ಸಹಕರಿಸುವಂತೆ ಆದೇಶಿಸಲು ಕೋರಿ ಸುಪ್ರೀಂ ಮೊರೆ ಹೋಗಿತ್ತು.
ಈ ಎಲ್ಲ ಬೆಳವಣಿಗೆಯ ನಂತರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, 'ಸಂವಿಧಾನ ಉಳಿಸಿ' ಎಂದು ಧರಣಿ ಆರಂಭಿಸಿದ್ದರು. ಇದಕ್ಕೆ ವಿಪಕ್ಷಗಳಲೂ ಬೆಂಲ ನೀಡಿದ್ದವು.












Click it and Unblock the Notifications