ಕಣ್ಮಿಟುಕಿಸಿದರೂ ಕೇಸು ಹಾಕ್ತೀರಾ, ಬೇರೆ ಕೆಲ್ಸ ಇಲ್ವಾ? ಸುಪ್ರೀಂ ಪ್ರಶ್ನೆ
Recommended Video

ನವದೆಹಲಿ, ಆಗಸ್ಟ್ 31: 'ನಿಮಗೆ ಬೇರೆ ಕೆಲಸ ಇಲ್ವಾ?' ಪ್ರಿಯಾ ವಾರಿಯರ್ ವಿರುದ್ಧ ಕೇಸು ದಾಖಲಿಸಿದ ತೆಲಂಗಾಣ ಸರ್ಕಾರವನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ತರಾಟೆಗೆ ತೆಗೆದುಕೊಂಡ ರೀತಿ ಇದು!
ಸಿನಿಮಾವೊಂದರಲ್ಲಿ ಕಣ್ಮಿಟುಕಿಸಿದ್ದ ಪ್ರಿಯಾ ವಾರಿಯರ್ ವಿರುದ್ಧ ಕೆಲವರು ನೀಡಿದ್ದ ದೂರನ್ನು ತೆಲಂಗಾಣ ಪೊಲೀಸರು ಸ್ವೀಕರಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪ್ರಿಯಾ ವಾರಿಯರ್ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ವಜಾಗೊಳಿಸಿದೆ. ಈ ಮೂಲಕ ಕಣ್ಮಿಟುಕು ಸುಂದರಿ ನಿರಾಳವಾಗಿದ್ದಾರೆ.
ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಚಿತ್ರವೊಂದರ ಹಾಡಿನಲ್ಲಿ ಕಣ್ಮಿಟುಕಿಸಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ, ಆಕೆ ಒಂದೇ ದಿನದಲ್ಲಿ ಸೆಲೆಬ್ರಿಟಿ ಆಗಿದ್ದರು. ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆ ನಡೆದಿತ್ತು. 18 ವರ್ಷದ ಪ್ರಿಯಾ ವಾರಿಯರ್ ಅವರ 'ಓರು ಅದರ್ ಲವ್' ಎಂಬ ಮಲಯಾಳಿ ಚಿತ್ರದ ಈ ಹಾಡು ಕೆಲವು ನಿರ್ದಿಷ್ಟ ಸಮುದಾಯದ ಮತೀಯರಿಗೆ ನೋವುಂಟು ಮಾಡುವಂತಿದೆ ಎಂದು ದೂರಲಾಗಿತ್ತು.

"ಒಂದು ಚಿತ್ರದಲ್ಲಿ ಯಾರೋ ಒಬ್ಬರು ಹಾಡುತ್ತಾರೆ. ಅವರ ವಿರುದ್ಧ ಕೇಸು ದಾಖಲಿಸೋಕೆ ನಿಮಗೇನು ಬೇರೆ ಕೆಲಸವಿಲ್ಲವೇ" ಎಂದು ಮುಖಕ್ಕೆ ಹೊಡೆದಂತೆ ಪ್ರಶ್ನಿಸಿರುವ ಸುಪ್ರೀಂ ಕೋರ್ಟ್, ಇಂಥ ಪ್ರಕರಣಗಳನ್ನು ದಾಖಲಿಸಿಕೊಳ್ಳುವ ಮುನ್ನ ಯೋಚಿಸಿ ಎಂಬ ಸೂಚನೆಯನ್ನೂ ನೀಡಿದೆ.












Click it and Unblock the Notifications