ಶಬರಿಮಲೆ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದ ಸುಪ್ರೀಂ ಕೋರ್ಟ್
ನವದೆಹಲಿ, ನವೆಂಬರ್ 14: ಸುಪ್ರೀಂ ಕೋರ್ಟ್ ನ ಐವರು ನ್ಯಾಯಾಧೀಶರ ಪಂಚ ಪೀಠವು ಶಬರಿಮಲೆ ದೇವಾಲಯ ಪ್ರಕರಣದ ಪರಿಶೀಲನಾ ಮನವಿಯನ್ನು ಏಳು ಸದಸ್ಯರ ಪೀಠಕ್ಕೆ ವರ್ಗಾವಣೆಯ ಆದೇಶವನ್ನು ಮಂಗಳವಾರ ಹೊರಡಿಸಿದೆ. ಈ ಮಧ್ಯೆ ದೇವಾಲಯ ಪ್ರವೇಶಿಸುವ ಮಹಿಳೆಯರಿಗೆ ಯಾವುದೇ ತಡೆ ತಂದಿಲ್ಲ.
ಪ್ರಕರಣವನ್ನು ವಿಸ್ತೃತ ನ್ಯಾಯಪೀಠಕ್ಕೆ ವರ್ಗಾವಣೆಗೊಳಿಸುವ ನಿರ್ಧಾರವನ್ನು 3:2 ಬಹುಮತದ ತೀರ್ಪಾಗಿದೆ. ನ್ಯಾಯಮೂರ್ತಿಗಳಾದ ಆರ್.ಎಫ್.ನಾರಿಮನ್ ಮತ್ತು ಡಿ.ವೈ.ಚಂದ್ರಚೂಡ್ ರವರು ಎಲ್ಲಾ ಪರಿಶೀಲನಾ ಮನವಿಗಳನ್ನು ವಜಾಗೊಳಿಸುವುದರ ಮೂಲಕ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರು.ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ನಿರ್ಬಂಧಗಳು ಕೇವಲ ಶಬರಿಮಲೆಗೆ ಸೀಮಿತವಾಗಿಲ್ಲ. ಅವು ಇತರ ಧರ್ಮಗಳಲ್ಲಿಯೂ ಚಾಲ್ತಿಯಲ್ಲಿವೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.

ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಇಂದೂ ಮಲ್ಹೋತ್ರಾ ಪರವಾಗಿ ತೀರ್ಪು ಓದಿದರು. "ಶಬರಿಮಲಾ, ಮಸೀದಿಗಳಲ್ಲಿ ಮಹಿಳೆಯರ ಪ್ರವೇಶ ಮತ್ತು ದಾವೂದ್ ಬೊಹ್ರಾ ಸಮುದಾಯದಲ್ಲಿ ಸ್ತ್ರೀ ಜನಾಂಗದ ನಗ್ನಗೊಳಿಸುವಿಕೆಯ ಅಭ್ಯಾಸಕ್ಕೆ ಸಂಬಂಧಿಸಿದ ಎಲ್ಲಾ ಧಾರ್ಮಿಕ ಸಮಸ್ಯೆಗಳನ್ನು ಏಳು ನ್ಯಾಯಾಧೀಶರ ವಿಸ್ತೃತ ನ್ಯಾಯಪೀಠ ನಿರ್ಧರಿಸುತ್ತದೆ" ಎಂದು ಸಿಜೆಐ ಹೇಳಿದರು.












Click it and Unblock the Notifications