ಬಿಬಿಎಂಪಿಗೆ ಚುನಾವಣೆ ನಡೆಸಿ, ಎರಡು ವಾರದಲ್ಲಿ ಅಧಿಸೂಚನೆ ಪ್ರಕಟಿಸಿ: ಸುಪ್ರೀಂ ಆದೇಶ
ನವದೆಹಲಿ, ಮೇ10: ದೇಶಾದ್ಯಂತ ಕಾರ್ಪೊರೇಷನ್ ಎಲೆಕ್ಷನ್ ನಡೆಸುವಂತೆ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ಮಹತ್ವದ ಆದೇಶ ಹೊರಡಿಸಿದೆ.
ಮಧ್ಯಪ್ರದೇಶ ಸ್ಥಳೀಯ ಸಂಸ್ಥೆ ಹಾಗೂ ಕರ್ನಾಟಕದ ಬಿಬಿಎಂಪಿ ಚುನಾವಣೆಗಳಲ್ಲಿ ಒಬಿಸಿ ಮೀಸಲಾತಿ ಮತ್ತು ಡಿ ಲಿಮಿಟೇಷನ್ ಮಾಡದ ಹಿನ್ನೆಲೆಯಲ್ಲಿ ಎಸ್ಸಿ ಎಸ್ಟಿ , ಜನರಲ್ ಕೆಟಗರಿಯಲ್ಲೇ ಚುನಾವಣೆಯನ್ನು ನಡೆಸುವಂತೆ ಕೋರ್ಟ್ ಆದೇಶಿಸಿದೆ. ಎರಡು ವಾರಗಳಲ್ಲಿ ನೋಟಿಫಿಕೇಷನ್ ಹೊರಡಿಸುವಂತೆ ಕೋರ್ಟ್ ಸೂಚನೆಯನ್ನು ಸಹಕೊಟ್ಟಿದೆ. ಇದರಿಂದಾಗಿ ಬಿಬಿಎಪಿಯಲ್ಲಿನ 198 ವಾರ್ಡ್ ಗಳಿಗೆ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ.
ಇನ್ನು ಚುನಾವಣೆಯನ್ನು ನಡೆಸುವಂತೆ ಕೋರಿ ಸುಪ್ರಿಂ ಅಂಗಳಕ್ಕೆ ಅರ್ಜಿದಾರರು ಹೋಗಿದ್ದರು. ಆದರೆ, ಸರ್ಕಾರ 243 ವಾರ್ಡ್ ಗಳನ್ನು ರಚಿಸಿ ಚುನಾವಣೆಯನ್ನು ನಡೆಸಲು ತೀರ್ಮಾಸಿತ್ತು. ಆದರೆ ಈವರೆಗೂ ಡಿ ಲಿಮಿಟೇಷನ್ ಮಾಡಿ ಸರ್ಕಾರ ಆದೇಶವನ್ನು ಹೊರಡಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ198 ವಾರ್ಡ್ ಗಳಿಗೆ ಬಿಬಿಎಂಪಿ ಚುನಾವಣೆಯನ್ನು ನಡೆಸಬೇಕಿದೆ.

ಬಿಬಿಎಂಪಿ ಚುನಾವಣೆಯ ಆಕಾಂಕ್ಷಿಗಳ ಮುಖದಲ್ಲಿ ಮಂದಹಾಸ
ಬಿಬಿಎಂಪಿಯ ಚುನಾವಣೆಯನ್ನು ನಡೆಸುವಂತೆ ಹೈಕೋರ್ಟ್ ನಿರ್ದೇಶನವನ್ನು ನೀಡಿತ್ತು. ಸರ್ಕಾರ ಮೇಲ್ಮನವಿಯನ್ನು ಸಲ್ಲಿಸಿದ್ದರು. ಕರ್ನಾಟಕ ನಗರ ಪಾಲಿಕೆ ತಿದ್ದುಪಡಿ ತಂದು 243 ವಾರ್ಡ್ ಗಳ ರಚನೆಯನ್ನು ಮಾಡಿದ್ದರು. ಆದರೂ ಹೈಕೋರ್ಟ್ 198 ವಾರ್ಡ್ ಗಳಿಗೆ ಚುನಾವಣೆ ನಡೆಸುವಂತೆ ಆದೇಶಿಸಿತ್ತು. ನಂತರ ರಾಜ್ಯ ವಿಧಾನಸಭೆಯಲ್ಲಿ 243 ವಾರ್ಡ್ ಗಳಿಗೆ ಚುನಾವಣೆಯನ್ನು ನಡೆಸಬೇಕು ಎಂದು ನಿರ್ಣಯವನ್ನು ಅಂಗೀಕರಿಸಿತು. ಆ ನಂತರವೇ ಸರ್ಕಾರ ಹೈಕೋರ್ಟ್ ಆದೇಶದ ವಿರುದ್ದ ಸುಪ್ರಿಂ ಕೋರ್ಟ್ ನಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದರು. ಹೈಕೋರ್ಟ್ ನ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ಅರ್ಜಿಯನ್ನು ವಿಚಾರಣೆ ನಡಸಿದ ಸುಪ್ರೀಂ ಕೋರ್ಟ್ ನ ಸಿಜೆಐ ಎಸ್ ಎ ಬೊಬ್ಡೆ ನೇತೃತ್ವದ ಪೀಠವೂ ಚುನಾವಣೆಗೆ ತಡೆಯನ್ನು ನೀಡಿತ್ತು. ಇದರಿಂದಾಗಿ ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೂ ಬಿಬಿಎಂಪಿಯ ಚುನಾವಣೆ ನಡೆಯುವುದೇ ಅನುಮಾನವಾಗಿ ಬಿಟ್ಟಿತ್ತು. ಇದೀಗ ಸುಪ್ರೀಂ ತೀರ್ಪು ಬಿಬಿಎಂಪಿ ಚುನಾವಣೆಯ ಆಕಾಂಕ್ಷಿಗಳ ಮುಖದಲ್ಲಿ ಮಂದಹಾಸವನ್ನು ಮೂಡಿಸಿದೆ.

ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಂತೆ 198 ವಾರ್ಡ್‌ಗಳಿಗೆ ಚುನಾವಣೆ..?
ಸರ್ಕಾರ ವಾರ್ಡ್‌ಗಳ ಮರು ವಿಂಗಡಣೆಯನ್ನು ಮಾಡಿ ಆದೇಶವನ್ನು ಹೊರಡಿಸಿಲ್ಲ. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಂತೆ 198 ವಾರ್ಡ್‌ಗಳಿಗೆ ಚುನಾವಣೆಯನ್ನು ನಡೆಸುತ್ತದೆಯೋ ಅಥವಾ ರಾಜ್ಯ ಸರ್ಕಾರ ಡಿ ಲಿಮಿಟೇಷನ್ ಮಾಡಿ ಆದೇಶ ಹೊರಡಸಿ ಚುನಾವಣೆಗೆ ಹೋಗಲಿದೆಯೋ ಕಾದುನೋಡಬೇಕಿದೆ.

243 ವಾರ್ಡ್ ಗಳ ರಚನೆಗೆ ಸರ್ಕಾರ ಸಿದ್ದ
ಬಿಬಿಎಂಪಿ ವ್ಯಾಪ್ತಿಯಲ್ಲಿ 1 ಕೋಟಿಗೂ ಅಧಿಕ ಮಂದಿ ವಾಸವಾಗಿದ್ದಾರೆ. ಒಂದು ಕಿ.ಮೀ ಚದರ ವ್ಯಾಪ್ತಿಯಲ್ಲಿ ಬರುವ 30 ರಿಂದ 50 ಸಾವಿರ ಜನರಿಗೊಬ್ಬರು ಜನಪ್ರತಿನಿಧಿ ಆಯ್ಕೆಯಾಗಬೇಕು ವಾರ್ಡ್ ರಚನೆಯಾಗಬೇಕು ಎಂಬುದಿದೆೆ. ಆದರೆ ಈಗಾಗಲೇ ಸರ್ಕಾರ ನಿರ್ಧರಿಸಿರುವಂತೆ 243 ವಾರ್ಡ್ ಗಳ ರಚನೆಗೆ ಸರ್ಕಾರ ಸಿದ್ದವಿದೆ. ಇದರಿಂದಾಗಿ ಬಿಬಿಎಂಪಿ ವ್ಯಾಪ್ತಿಯ ಎಂಎಲ್‌ಎಗಳಿಗೂ ಅನುಕೂಲವಾಗಲಿದೆ. ಮೀಸಲಾತಿ ಅನ್ವಯ ಬೇರೆ ಬೇರೆ ವಾರ್ಡ್‌ಗಳಿಗೆ ಪಾಲಿಕೆ ಸದಸ್ಯರಾಗಿ ಆಯ್ಕೆಯಾದರು ವಿಧಾನಸಭಾ ಚುನಾವಣೆಯಲ್ಲಿ ಪಾಲಿಕೆ ಸದಸ್ಯೆ ತನಗೆ ಪೈಪೋಟಿ ನೀಡುವುದಿಲ್ಲ ಹುನ್ನಾರವು ಅಡಗಿದೆ ಎನ್ನಲಾಗುತ್ತಿದೆ.

ಎರಡು ವರ್ಷಗಳಿಂದ ಜನಪ್ರತಿನಿಧಿಗಳಿಲ್ಲ
ಇನ್ನು ಎರಡು ವರ್ಷಗಳಿಂದ ವಾರ್ಡ್‌ಗಳಲ್ಲಿ ಜನಪ್ರತಿನಿಧಿಗಳಿಲ್ಲದೇ ಜನ ಸಾಮಾನ್ಯರ ಅದೆಷ್ಟೋ ಕೆಲಸಗಳು ನಡೆಯುತ್ತಿಲ್ಲ. ಜನರು ನೇರವಾಗಿ ಎಂಎಲ್‌ಎ, ಎಂಪಿಗಳನ್ನು ಭೇಟಿಯಲ್ಲಿ ಸಣ್ಣಪುಟ್ಟ ಸಮಸ್ಯೆಗಳನ್ನು ಹೇಳಿಕೊಳ್ಳುವುದಕ್ಕೂ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಸುಪ್ರೀಂ ಕೋರ್ಟ್ ನ ಆದೇಶದಂತೆ ಬಿಬಿಎಂಪಿಯ ಚುನಾವಣೆಯನ್ನು ರಾಜ್ಯ ಸರ್ಕಾರ ಶೀಘ್ರವೇ ನಡೆಸಲಿದೆ. ಇನ್ನು ರಾಜ್ಯ ಸರ್ಕಾರ 198 ವಾರ್ಡ್‌ಗಳಿಗೆ ಚುನಾವಣೆಯನ್ನು ನಡೆಸುತ್ತಾ ಕಾನೂನು ತಜ್ಞರ ಸಲಹೆಯನ್ನು ಪಡೆದುಕೊಂಡು 243 ವಾರ್ಡ್‌ಗಳಿಗೆ ಚುನಾವಣೆಯನ್ನು ನಡೆಯುತ್ತಾರೆಯೇ ಎಂಬದು ತಿಳಿದುಬರಬೇಕಿದೆ.












Click it and Unblock the Notifications