47 ವರ್ಷದ ಬಳಿಕ ಬಡ್ಡಿ ಸಮೇತ ಸಂಬಳ ಪಡೆದ ಸುಬ್ರಮಣಿಯನ್ ಸ್ವಾಮಿ!
Recommended Video

ನವದೆಹಲಿ, ಏಪ್ರಿಲ್ 9: ತಮ್ಮ ರಾಜಕೀಯ ವೈರಿಗಳನ್ನು ಕಾನೂನಾತ್ಮಕವಾಗಿ ಹಣಿಯುವುದರಲ್ಲಿ ನಿಸ್ಸೀಮರಾದ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಮತ್ತೊಂದು ಕಾನೂನು ಹೋರಾಟದಲ್ಲಿ ಜಯಗಳಿಸಿದ್ದಾರೆ. ಆದರೆ, ಇದು ಅವರ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದ್ದು.
ತಮಗೆ ಬಾಕಿ ಉಳಿದಿದ್ದ 20 ವರ್ಷಗಳ ಸಂಬಳವನ್ನು ಅವರು ಸುಮಾರು 28 ವರ್ಷಗಳ ಬಳಿಕ ಪಡೆದುಕೊಳ್ಳಲಿದ್ದಾರೆ. ಈ ಹಣದ ಮೊತ್ತ ಹೆಚ್ಚೂ ಕಡಿಮೆ 45 ಲಕ್ಷ ರೂಪಾಯಿ.
1972ರಿಂದ 1991ರ ಅವಧಿಯಲ್ಲಿ ಅವರಿಗೆ ಬಾಕಿ ಉಳಿಸಿಕೊಂಡಿದ್ದ ವೇತನವನ್ನು ಪಾವತಿಸುವಂತೆ ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಸ್ಥಳೀಯ ನ್ಯಾಯಾಲಯವೊಂದು ಆದೇಶಿಸಿದೆ.

ಆರ್ಥಿಕ ತಜ್ಞರಾಗಿರುವ ಸುಬ್ರಮಣಿಯನ್ ಸ್ವಾಮಿ ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (ಐಐಟಿ) ಅರ್ಥಶಾಸ್ತ್ರ ವಿಷಯದ ಪ್ರೊಫೆಸರ್ ಆಗಿ ಮೂರು ವರ್ಷ ಕೆಲಸ ಮಾಡಿದ್ದರು. ಆದರೆ ಅವರ ಮತ್ತು ಸಂಸ್ಥೆಯ ನಡುವೆ ಕಾನೂನಾತ್ಮಕ ಹೋರಾಟ ನಡೆದಿತ್ತು.
ಈಗ 1972ರಿಂದ 1991ರ ಅವಧಿಯ ಸುಮಾರು 20 ವರ್ಷದ ವೇತನವನ್ನು ಅವರಿಗೆ ಸಂಸ್ಥೆ ನೀಡುವಂತಾಗಿದೆ. ಮೊತ್ತಕ್ಕೆ ಶೇ 8ರ ಬಡ್ಡಿದರವನ್ನು ಸೇರಿಸಿ ಸುಬ್ರಮಣಿಯನ್ ಸ್ವಾಮಿ ಅವರಿಗೆ ಪಾವತಿ ಮಾಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ಇದರಿಂದ ಸ್ವಾಮಿ ಅವರು ಅಂದಾಜು 40 ರಿಂದ 45 ಲಕ್ಷ ರೂಪಾಯಿ ಪಡೆದುಕೊಳ್ಳಲಿದ್ದಾರೆ.
ಈ ವಿಚಾರದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಂಸ್ಥೆಯ ಆಡಳಿತಾಧಿಕಾರಿಗಳ ಮಂಡಳಿಗೆ ಬಿಡುವುದಾಗಿ ಐಐಟಿ ದೆಹಲಿಯ ಅಧಿಕಾರಿಗಳು ತಿಳಿಸಿದ್ದಾರೆ.
'ನಾವು ಮಂಡಳಿಗೆ ಮಾಹಿತಿ ನೀಡಲಿದ್ದೇವೆ. ಮುಂದಿನ ಕ್ರಮ ಏನು ಎಂಬುದನ್ನು ಅವರೇ ನಿರ್ಧಾರ ಮಾಡಲಿದ್ದಾರೆ' ಎಂದು ಐಐಟಿ-ದೆಹಲಿ ನಿರ್ದೇಶಕ ವಿ. ರಾಮ್‌ಗೋಪಾಲ ರಾವ್ ಹೇಳಿದ್ದಾರೆ.
ರಾಜಕಾರಣಕ್ಕೆ ಬರುವ ಮುನ್ನ ಸ್ವಾಮಿ ಅವರು ಐಐಟಿಯಲ್ಲಿ 1969-1972ರ ವರೆಗೆ ಮೂರು ವರ್ಷ ಅರ್ಥಶಾಸ್ತ್ರ ಬೋಧಿಸಿದ್ದರು. ಆದರೆ, ಆಡಳಿತಮಂಡಳಿಯೊಂದಿಗೆ ಅನೇಕ ಮನಸ್ತಾಪಗಳು ಉಂಟಾದ ಕಾರಣ ಸ್ವಾಮಿ ಅವರನ್ನು ಸಂಸ್ಥೆಯಿಂದ ವಜಾ ಮಾಡಲಾಗಿತ್ತು. ಇದರನ್ನು ಸ್ವಾಮಿ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ದೆಹಲಿಯ ನ್ಯಾಯಾಲಯವೊಂದು 1991ರಲ್ಲಿ ಸ್ವಾಮಿ ಮರು ನೇಮಕಕ್ಕೆ ಸೂಚಿಸಿತ್ತು. ತಮ್ಮನ್ನು ವಜಾಗೊಳಿಸಿದ್ದು ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದ ಸ್ವಾಮಿ, ಈ ಅವಧಿಯಲ್ಲಿ ತಮಗೆ ಬರಬೇಕಿದ್ದ ಬಾಕಿ ವೇತನವನ್ನು ನೀಡುವಂತೆ ಒತ್ತಾಯಿಸಿದ್ದರು.
After 47 years the IIT Delhi lost to me In The Saket Court and has to pay my back salary at annual 8% interest compounded. Earlier they had to restore me to my Professorship of Economics.which I resigned after a day. Let this be an example to all perverts in the academic world
— Subramanian Swamy (@Swamy39) 8 April 2019
'ಕೋರ್ಟ್ ಆದೇಶವು ಶೈಕ್ಷಣಿಕ ಜಗತ್ತಿನಲ್ಲಿರುವ ಎಲ್ಲ ಖದೀಮರಿಗೆ ಉದಾಹರಣೆಯಾಗಬೇಕು' ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.
'47 ವರ್ಷಗಳ ಬಳಿಕ ಸಾಕೇತ್ ಕೋರ್ಟ್‌ನಲ್ಲಿ ಐಐಟಿ ದೆಹಲಿ ನನಗೆ ಸೋತಿದೆ. ಶೇ 8ರ ವಾರ್ಷಿಕ ಬಡ್ಡಿದರದಲ್ಲಿ ನನ್ನ ವೇತನದ ಮೊತ್ತವನ್ನು ಪಾವತಿಸಬೇಕಿದೆ. ಇದು ಶೈಕ್ಷಣಿಕ ಜಗತ್ತಿನಲ್ಲಿರುವ ಎಲ್ಲ ಖದೀಮರಿಗೆ ಉದಾಹರಣೆಯಾಗಲಿ' ಎಂದು ಅವರು ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications