ಬಿಜೆಪಿ ಸೋಲಿಗೆ ಶ್ರೀರಾಮನ ಅವಕೃಪೆ ಕಾರಣ ಎಂದ ಶಿವಸೇನೆ ನಾಯಕ

Posted By:
Subscribe to Oneindia Kannada

ನವದೆಹಲಿ, ಮಾರ್ಚ್ 14: ಉತ್ತರಪ್ರದೇಶ ಹಾಗೂ ಬಿಹಾರದ ನಾಲ್ಕು ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆ ಪೈಕಿ ಮೂರು ಸ್ಥಾನಗಳಲ್ಲಿ ಬಿಜೆಪಿಗೆ ಹಿನ್ನಡೆ ಆಗಲು ಬಿಜೆಪಿಗೆ ಇತ್ತೀಚೆಗೆ ಸೇರ್ಪಡೆಯಾದ, ಈ ಹಿಂದೆ ಸಮಾಜವಾದಿ ಪಕ್ಷದಲ್ಲಿದ್ದ ನರೇಶ್ ಅಗರ್ ವಾಲ್ ಕಾರಣ ಎಂದು ಶಿವಸೇನಾದ ಸಂಜಯ್ ರಾವತ್ ವಿಶ್ಲೇಷಣೆ ಮಾಡಿದ್ದಾರೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಅಂದಹಾಗೆ, ಉತ್ತರಪ್ರದೇಶದಲ್ಲಿ ನಡೆದ ಗೋರಖ್ ಪುರ ಹಾಗೂ ಫುಲ್ ಪುರ್ ನ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷವು ಸಮಾಜವಾದಿ ಪಕ್ಷಕ್ಕೆ ಬೆಂಬಲ ನೀಡಿತ್ತು. ಆದರೆ ಇದರಿಂದಲೇ ಬಿಜೆಪಿಗೆ ಹಿನ್ನಡೆ ಆಗಿದೆ ಅನ್ನೋದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಯಾವ ಮನುಷ್ಯ ಹಲವು ಬಾರಿ ಶ್ರೀರಾಮನನ್ನು ಟೀಕಿಸುತ್ತಿದ್ದನೋ ಅದೇ ವ್ಯಕ್ತಿಗೆ (ನರೇಶ್ ಅಗರ್ ವಾಲ್) ನೀವು ರೆಡ್ ಕಾರ್ಪೆಟ್ ಹಾಕಿ ಪಕ್ಷಕ್ಕೆ ಸೇರಿಸಿಕೊಂಡಿರಿ.ಆ ದಿನವೇ ಶ್ರೀರಾಮ ಕೂಡ ನಿಮಗೆ ವಿರುದ್ಧವಾಗಿ ಬದಲಾದ ಎಂದು ಸಂಜಯ್ ರಾವತ್ ವಿಶ್ಲೇಷಣೆ ಮಾಡಿದ್ದಾರೆ.

Sri Rama against BJP, according to Shiv Sena's Sanjay Raut

ಈಚೆಗೆ ಬಿಜೆಪಿ ಸೇರಿದ ನರೇಶ್ ಅಗರ್ ವಾಲ್ ಎಸ್ ಪಿಯ ಸಂಸದರಾಗಿದ್ದಾಗ, ಕಳೆದ ವರ್ಷ ರಾಮನೂ ಸೇರಿದ ಹಾಗೆ ಹಿಂದೂ ದೇವತೆಗಳನ್ನು ವಿವಿಧ ಮದ್ಯಗಳಿಗೆ ಹೋಲಿಕೆ ಮಾಡಿದ್ದರು. ಆ ಕಾರಣಕ್ಕೇ ಬಿಜೆಪಿ ಇಂಥ ಹಿನ್ನಡೆ ಅನುಭವಿಸುತ್ತಿದೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Only one man will be to blame if the BJP loses three prestige Lok Sabha bypoll battles in Uttar Pradesh and Bihar today, said the Shiv Sena's Sanjay Raut. And that man is Naresh Agarwal, newly-inducted BJP member, formerly of the Samajwadi Party, he said.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ