• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸ್ಪೈಸ್‌ಜೆಟ್‌ನ 1800ಕ್ಕೂ ಹೆಚ್ಚು ದೇಶೀಯ ಹಾರಾಟ ರದ್ದು

By Kiran B Hegde
|

ನವದೆಹಲಿ, ಡಿ. 9: ಇಂಡಿಯನ್ ಏರ್‌ಲೈನ್ಸ್, ಕಿಂಗ್ ಫಿಶರ್ ನಂತರ ಸ್ಪೈಸ್‌ಜೆಟ್...? ಹೀಗೊಂದು ಆತಂಕಭರಿತ ಪ್ರಶ್ನೆ ದೇಶೀಯ ವಿಮಾನಯಾನ ಕ್ಷೇತ್ರದಲ್ಲಿ ಹರಿದಾಡುತ್ತಿದೆ.

ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಕಲಾನಿಧಿ ಮಾರನ್ ನೇತೃತ್ವದ ಸನ್ ಸಮೂಹದ ಸ್ಪೈಸ್‌ಜೆಟ್ ಪ್ರಸಕ್ತ ತಿಂಗಳಿನಲ್ಲಿ ನೇಪಾಳದ ಕಠ್ಮಂಡುವಿಗೆ ಪ್ರಯಾಣಿಸಬೇಕಿದ್ದ 81 ಸಂಚಾರಗಳು ಸೇರಿದಂತೆ 1,861 ದೇಶೀಯ ವಿಮಾನ ಸಂಚಾರಗಳನ್ನು ರದ್ದುಪಡಿಸಲು ನಿರ್ಧರಿಸಿದೆ. ಸೋಮವಾರದಿಂದಲೇ ಈ ನಿರ್ಧಾರ ಜಾರಿಗೆ ಬಂದಿದೆ ಎಂದು ಸಂಸ್ಥೆಯು ವೆಬ್ ಸೈಟ್‌ನಲ್ಲಿ ತಿಳಿಸಿದೆ. [ಸ್ಪೈಸ್ ಜೆಟ್ ನಿಂದ ಸಕತ್ ಆಫರ್]

ಟಿಕೆಟ್ ಬುಕಿಂಗ್ ಪ್ರಕ್ರಿಯೆ ನಿಲ್ಲಿಸಲು ಸೂಚನೆ: ಮುಂಗಡ ಬುಕಿಂಗ್‌ನಲ್ಲಿ ಪಾಲಿಸಲು ಸೂಚಿಸಿದ್ದ ನಿರ್ದೇಶನಗಳನ್ನು ಸ್ಪೈಸ್‌ಜೆಟ್ ಸಂಸ್ಥೆಯು ಉಲ್ಲಂಘಿಸಿರುವ ಕಾರಣ ಡಿಜಿಸಿಎ ಶೋ ಕಾಸ್ (ಕಾರಣ ಕೇಳಿ) ನೋಟಿಸ್ ನೀಡಲು ಯೋಚಿಸುತ್ತಿದೆ. ಆದ್ದರಿಂದ ಟಿಕೆಟ್ ಬುಕಿಂಗ್‌ ಪ್ರಕ್ರಿಯೆಯನ್ನು ಒಂದು ತಿಂಗಳ ಕಾಲ ನಿಲ್ಲಿಸುವಂತೆ ಡಿಜಿಸಿಎ ಸೂಚಿಸಿದೆ. [ಮೈಸೂರು ವಿಮಾನ ನಿಲ್ದಾಣಕ್ಕೆ ವಿಸ್ತರಣೆ ಭಾಗ್ಯ]

ಅಷ್ಟಲ್ಲದೆ, ಸ್ಪೈಸ್‌ಜೆಟ್‌ ಸಂಸ್ಥೆಯು ಬ್ಯಾಂಕ್‌ ಗ್ಯಾರಂಟಿಗೆ 200 ಕೋಟಿ ರೂ. ತುಂಬಲು ವಿಫಲವಾದರೆ ಕ್ಯಾಶ್ ಅಂಡ್ ಕ್ಯಾರಿ ಜಾರಿ ತರುವುದಾಗಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ)ದ ಅಧಿಕಾರಿಗಳು ತಿಳಿಸಿದ್ದಾರೆ.

ಸಿಬ್ಬಂದಿಗೆ ಬಾಕಿ ಸಂಬಳ ಪಾವತಿಸಲು ಸೂಚನೆ: ಈ ಕ್ರಮವು ಸ್ಪೈಸ್‌ಜೆಟ್ ಪರವಾನಗಿಯ ಮೇಲೆ ನೇರ ಪರಿಣಾಮ ಬೀರದಿದ್ದರೂ, ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಇದರ ಜೊತೆಯಲ್ಲಿ ಸ್ಪೈಸ್‌ಜೆಟ್ ಸಂಸ್ಥೆಯು ತನ್ನ ಕೆಲಸಗಾರರಿಗೆ 10 ದಿನಗಳ ಒಳಗೆ ಬಾಕಿ ಉಳಿದಿರುವ ಸಂಬಳ ಪಾವತಿಸಬೇಕೆಂದು ಡಿಜಿಸಿಎ ಸೂಚಿಸಿದೆ. ಈ ಎಲ್ಲ ಕಾರಣಗಳಿಂದ ಸ್ಪೈಸ್‌ಜೆಟ್ ಸಂಸ್ಥೆಯ ಷೇರುಗಳು ಮಂಗಳವಾರ ಶೇ. 13ರಷ್ಟು ಇಳಿಕೆ ಕಂಡಿದೆ. [500 ರೂ.ಗೆ ಜೆಟ್ ಏರ್ ವೇಸ್ ಟಿಕೆಟ್]

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After reports of SpiecJet facing a financial crisis, the domestic airline was bound to cancel over 1,800 flights across the country for the current month. DGCA was planning to issue a show cause notice to the airline for defying its directives regarding advanced bookings. Airport Authority of India is also considering putting the jet on a cash-and-carry mode soon if it failed to provide a bank guarantee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more