ಮೊದಲ ಬಾರಿ ವೈದ್ಯ ಶಿಕ್ಷಣ ಪ್ರಾರಂಭಿಸಿದ ಐಐಟಿ

ನವದೆಹಲಿ, ಜೂ 22 : ಖಾರಗ್ ಪುರದ ಐಐಟಿ ಸಂಸ್ಥೆಯು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವೈದ್ಯ ಪದವಿ ಆರಂಭಿಸುವ ನಿರ್ಧಾರ ತೆಗೆದುಕೊಂಡಿದೆ.

ಸಂಸ್ಥೆಯ ಕ್ಯಾಂಪಸ್ ಒಳಗೆ 3 ಎಕರೆ ಜಾಗದಲ್ಲಿ 400 ಬೆಡ್ ಗಳ ಉತ್ತಮ ಸೌಲಭ್ಯ ಭರಿತ ಆಸ್ಪತ್ರೆಯನ್ನು 2017 ರ ಒಳಗೆ ನಿರ್ಮಿಸಲಾಗುವುದು ಎಂದು ಮೆಡಿಕಲ್ ಸೈನ್ಸ್ ಮತ್ತು ರಿಸರ್ಚ್ ಸಂಸ್ಥೆಯ ಡಾ|| ಬಿ ಸಿ ರಾಯ್ ತಿಳಿಸಿದ್ದಾರೆ.

ಈಗಾಗಲೇ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಮ್ ಸಿ ಐ) ಮೆಡಿಕಲ್ ಕೋರ್ಸ್ ಪ್ರಾರಂಭ ಮಾಡುವಂತೆ ಅನುಮೋದನೆ ನೀಡಿದೆ. ಅದರಂತೆ ಸರ್ಕಾರವೂ ಕೂಡ 230 ಕೋಟಿ ರೂಗಳನ್ನು ಬಿಡುಗಡೆ ಮಾಡಿದೆ. ಇದರ ನಿರ್ಮಾಣ ಕಾರ್ಯ ಅತಿ ಶೀಘ್ರದಲ್ಲಿಯೇ ಆರಂಭವಾಗಲಿದ್ದು, 26 ತಿಂಗಳ ಒಳಗೆ ಪೂರ್ಣಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಐಐಟಿ ಸಂಸ್ಥೆ ನಿರ್ದೇಶಕರಾದ ಪಾರ್ಥ ಪ್ರತಿಮ್ ಚಕ್ರಬರ್ತಿ ಹೇಳಿದ್ದಾರೆ.

Soon, IIT will also produce doctors alongwith engineers

ಐಐಟಿ ಪ್ರಪಂಚದಾದ್ಯಂತ ಸಾಕಷ್ಟು ಇಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪನೆ ಮಾಡಿತ್ತು . ಆದರೆ ಇದೇ ಮೊದಲ ಬಾರಿಗೆ ವೈದ್ಯ ಕಾಲೇಜನ್ನು ಆರಂಭಿಸಲು ಮುಂದಾಗಿದೆ. ಬಯೋಮೆಡಿಕಲ್ ಗೆ ಸಂಬಂಧಪಟ್ಟಂತಹ ಎಲ್ಲಾ ರೀತಿಯ ಸಂಶೋಧನೆಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ. ಶಿಕ್ಷಣ ಮತ್ತು ಸಂಶೋಧನೆ ವಿಷಯದಲ್ಲಿ ಇವೆರಡರ ಮೈತ್ರಿ ಅತ್ಯುತ್ತಮ ಮೈಲಿಗಲ್ಲಾಗಲಿದೆ. ಉತ್ತಮ ತಂತ್ರಜ್ಞಾನ ಅಳವಡಿಸಿಕೊಂಡು ಸಾವಿರಾರು ರೋಗಿಗಳನ್ನು ತಲುಪುವತ್ತ ಪ್ರಯತ್ನ ನಡೆಸಲಾಗುವುದು ಎಂದು ನಿರ್ದೇಶಕರು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+