ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಹಿಂಸಾಚಾರ: ಕೋಮುವಾದಕ್ಕೆ ಬೆಲೆಯಿಲ್ಲ ಎಂದು ಖಂಡಿಸಿದ ಸೋನಿಯಾ

|
Google Oneindia Kannada News

ನವದೆಹಲಿ, ಫೆಬ್ರವರಿ 25: ಕೋಮು ಸೌಹಾರ್ದತೆ ಕಾಪಾಡಿಕೊಳ್ಳಬೇಕು ಮತ್ತು ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸಲು ಹೊರಟಿರುವ ಶಕ್ತಿಯನ್ನು ಸೋಲಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಹೇಳಿದ್ದಾರೆ.

Recommended Video

Sonia Gandhi condemns clashes in Delhi | Sonia Gandhi | Delhi | BJP

ದೆಹಲಿಯಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಪೌರತ್ವ ನಿಷೇಧ ಕಾಯ್ದೆ(ಸಿಎಎ) ವಿರುದ್ಧದ ಹೋರಾಟ, ಕಲ್ಲು ತೂರಾಟ, ಹಿಂಸಾಚಾರದಲ್ಲಿ ಇದುವರೆಗೆ 5 ಮಂದಿ ಸಾವನ್ನಪ್ಪಿದ್ದು 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಸಿಎಎ ಪ್ರತಿಭಟನೆ: ನೀವು ದೆಹಲಿಯಲ್ಲಿದ್ದರೆ ಈ ರಸ್ತೆಗಳಲ್ಲಿ ಸಂಚರಿಸಬೇಡಿಸಿಎಎ ಪ್ರತಿಭಟನೆ: ನೀವು ದೆಹಲಿಯಲ್ಲಿದ್ದರೆ ಈ ರಸ್ತೆಗಳಲ್ಲಿ ಸಂಚರಿಸಬೇಡಿ

ಮಹಾತ್ಮ ಗಾಂಧಿಯವರ ಭೂಮಿಯಲ್ಲಿ ಹಿಂಸಾಚಾರಕ್ಕೆಅವಕಾಶವಿಲ್ಲ,ಕೋಮುವಾದಿ ಸಿದ್ಧಾಂತವನ್ನು ಜನರ ಮೇಲೆ ಹೇರಲು ಪ್ರಯತ್ನಿಸುವ ಶಕ್ತಿಗಳಿಗೆ ದೇಶದಲ್ಲಿ ಯಾವುದೇ ಸ್ಥಾನವಿಲ್ಲ ಎಂದು ಸೋನಿಯಾ ಗಾಂಧಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Sonia Gandhi Condemns Clashes In Delhi

ಹಿಂಸಾಚಾರದಲ್ಲಿ ಮೃತಪಟ್ಟ ಹೆಡ್ ಕಾನ್‌ಸ್ಟೆಬಲ್ ರತನ್ ಲಾಲ್ ಅವರ ಕುಟುಂಬಕ್ಕೆ ಅವರು ಸಂತಾಪ ಸೂಚಿಸಿದ್ದಾರೆ.

ಕಾಂಗ್ರೆಸ್ ಹಿರಿಯ ಮುಖಂಡ ರಾಹುಲ್ ಗಾಂಧಿ ಕೂಡ ಹಿಂಸಾಚಾರವನ್ನು ಖಂಡಿಸಿದರು. "ದೆಹಲಿಯಲ್ಲಿ ಇಂದು ನಡೆಯುತ್ತಿರುವ ಹಿಂಸಾಚಾರವು ಗೊಂದಲದಾಯಕವಾಗಿದೆ ಮತ್ತು ಅದನ್ನು ನಿಸ್ಸಂದಿಗ್ಧವಾಗಿ ಖಂಡಿಸಬೇಕು" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಮಧ್ಯರಾತ್ರಿ ಹೊತ್ತಿ ಉರಿದ ದೇಶದ ರಾಜಧಾನಿ; ಕಿಚ್ಚು ಹಬ್ಬಿದ ವೃತ್ತಾಂತಮಧ್ಯರಾತ್ರಿ ಹೊತ್ತಿ ಉರಿದ ದೇಶದ ರಾಜಧಾನಿ; ಕಿಚ್ಚು ಹಬ್ಬಿದ ವೃತ್ತಾಂತ

"ಶಾಂತಿಯುತ ಪ್ರತಿಭಟನೆಗಳು ಆರೋಗ್ಯಕರ ಪ್ರಜಾಪ್ರಭುತ್ವದ ಸಂಕೇತವಾಗಿದೆ, ಆದರೆ ಹಿಂಸಾಚಾರವನ್ನು ಎಂದಿಗೂ ಸಮರ್ಥಿಸುವುದಿಲ್ಲ, ಯಾವುದೇ ಪ್ರಚೋದನೆಕಾರಿ ಸಂಗತಿಗಳಿದ್ದರೂ ಅದನ್ನು ಮೆಟ್ಟಿನಿಲ್ಲುವುದು ಕೂಡ ಗೊತ್ತಿದೆ' ಎಂದರು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ದೆಹಲಿ ಜನರನ್ನು ಕೋಮು ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕೆಂದು ಒತ್ತಾಯಿಸಿದರು.
ಸಾಮಾನ್ಯ ಜನರು ಮಾತ್ರ ಹಿಂಸಾಚಾರವನ್ನು ಎದುರಿಸುತ್ತಿದ್ದಾರೆ ಇದನ್ನು ನಿಲ್ಲಿಸುವುದು ನಮ್ಮ ಜವಾಬ್ದಾರಿ. ಮಹಾತ್ಮ ಗಾಂಧಿಯವರ ದೇಶ ಶಾಂತಿಯ ದೇಶ. ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿ ಎಂದು ದೇಶದ ಜನರಲ್ಲಿ ಮನವಿ ಮಾಡುತ್ತೇನೆ ಎಂದರು.

ಮೌಜ್‌ಪುರ, ಜಾಫ್ರಾಬಾದ್, ಭಜನ್‌ಪುರ, ಕಾರ್ಡಂಪುರಿ, ದಯಾಲ್‌ಪುರ ಮತ್ತು ಚಾಂಡ್‌ಬಾಗ್ ಪ್ರದೇಶಗಳಲ್ಲಿ ಹಿಂಸಾಚಾರ ನಡೆಯುತ್ತಿದೆ. ಇದು ನಗರದ ಕೇಂದ್ರದಿಂದ 15 ಕಿ.ಮೀ.ಗಿಂತಲೂ ಕಡಿಮೆ ದೂರದಲ್ಲಿದೆ.ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೆಹಲಿ ತಲುಪುವ ಒಂದು ಗಂಟೆ ಮೊದಲು ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು.

English summary
Congress President Sonia Gandhi on Monday urged the people of Delhi to maintain communal harmony and defeat forces that intend to divide the country on the basis of religion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X