ದೆಹಲಿ ವಿಶೇಷ ಪೊಲೀಸ್ ಆಯುಕ್ತರಾಗಿ ಶ್ರೀವಾಸ್ತವ ನೇಮಕ
ನವದೆಹಲಿ, ಫೆಬ್ರವರಿ 28 : ಹಿರಿಯ ಐಪಿಎಸ್ ಅಧಿಕಾರಿ ಎಸ್. ಎನ್. ಶ್ರೀವಾಸ್ತವರನ್ನು ದೆಹಲಿಯ ವಿಶೇಷ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ. ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 42ಕ್ಕೆ ಏರಿಕೆಯಾಗಿದೆ.
ಶುಕ್ರವಾರ ಕೇಂದ್ರ ಗೃಹ ಇಲಾಖೆ ಈ ಕುರಿತು ಆದೇಶ ಹೊರಡಿಸಿದ್ದು, ತಕ್ಷಣ ಅಧಿಕಾರ ವಹಿಸಿಕೊಳ್ಳಬೇಕು ಎಂದು ಸೂಚನೆ ನೀಡಿದೆ. 1985ನೇ ಬ್ಯಾಚ್ ಐಪಿಎಸ್ ಅಧಿಕಾರಿ ಎಸ್. ಎನ್. ಶ್ರೀವಾಸ್ತವ ಅಮೂಲ್ಯ ಪಟ್ನಾಯಕ್ ಅವರ ಸ್ಥಾನಕ್ಕೆ ನೇಮಕಗೊಂಡಿದ್ದಾರೆ.
ಎಸ್. ಎನ್. ಶ್ರೀವಾಸ್ತವ ಸಿಆರ್‌ಪಿಎಫ್‌ನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಎರಡು ದಿನಗಳ ಹಿಂದೆ ಕೇಂದ್ರ ಸರ್ಕಾರ ಅವರನ್ನು ಬಿಡುಗಡೆಗೊಳಿಸಿತ್ತು. ದೆಹಲಿಯಲ್ಲಿ ಗಲಭೆ ನಡೆದಿದ್ದರಿಂದ ತಕ್ಷಣ ಅವರನ್ನು ವಿಶೇಷ ಆಯುಕ್ತರನ್ನಾಗಿ ನೇಮಿಸಲಾಗಿದೆ.

ದೆಹಲಿಯಲ್ಲಿ ಭಾನುವಾರದಿಂದ ನಡೆದ ಗಲಭೆಯಲ್ಲಿ 42 ಜನರು ಮೃತಪಟ್ಟಿದ್ದಾರೆ. ಎಸ್. ಎನ್. ಶ್ರೀವಾಸ್ತವ ದೆಹಲಿಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ವಿಶೇಷ ಪೊಲೀಸ್ ಘಟಕದ ಮುಖ್ಯಸ್ಥರಾಗಿಯೂ ಅವರು ಕೆಲಸ ಮಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಎಸ್. ಎನ್. ಶ್ರೀವಾಸ್ತವ, "ಪೊಲೀಸರಿಂದ ಸೂಕ್ತ ಭದ್ರತೆ ಲಭಿಸುತ್ತದೆ ಎಂಬ ಭಾವನೆ ಜನರಿಗೆ ಮೂಡಿಸುವುದು ನನ್ನ ಪ್ರಮುಖ ಕೆಲಸವಾಗಿದೆ" ಎಂದು ಹೇಳಿದರು.
ಭಾನುವಾರ ಪೌರತ್ವ ತಿದ್ದುಪಡಿ ಪರ-ವಿರೋಧ ಹೋರಾಟಗಾರರ ನಡುವೆ ಈಶಾನ್ಯ ದೆಹಲಿಯಲ್ಲಿ ಘರ್ಷಣೆ ನಡೆದಿತ್ತು. ಬಳಿಕ ಇದು ಹಿಂಸಾಚಾರಕ್ಕೆ ತಿರುಗಿದ್ದು, ವಿವಿಧ ಪ್ರದೇಶಗಳು ಹೊತ್ತಿ ಉರಿದಿದೆ. ಇದುವರೆಗೂ 42 ಜನರು ಮೃತಪಟ್ಟಿದ್ದಾರೆ.












Click it and Unblock the Notifications