ಅಮೆರಿಕ-ಭಾರತ: ಹೊಸ ವಿದೇಶಾಂಗ ಕಾರ್ಯದರ್ಶಿ ಯಾರು?
ನವದೆಹಲಿ, ಡಿಸೆಂಬರ್ 24: ಅಮೆರಿಕದಲ್ಲಿನ ಭಾರತದ ವಿದೇಶಾಂಗ ಕಾರ್ಯದರ್ಶಿ ಹುದ್ದೆಗೆ ಹಿರಿಯ ವಿದೇಶಾಂಗ ಅಧಿಕಾರಿ ಹರ್ಷವರ್ಧನ್ ಶ್ರಿಂಗ್ಲಾ ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಸೋಮವಾರ ಆದೇಶಿಸಿದೆ.
ಮುಂದಿನ ತಿಂಗಳು ನಿವೃತ್ತಿಯಾಗಲಿರುವ ಅಮೆರಿಕದಲ್ಲಿನ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಕಲೆ ಅವರ ಸ್ಥಾನವನ್ನು ಶ್ರಿಂಗ್ಲಾ ತುಂಬಲಿದ್ದಾರೆ. ಇವರು 33 ನೇ ವಿದೇಶಾಂಗ ಕಾರ್ಯದರ್ಶಿ ಆಗಲಿದ್ದು, ಜನವರಿ 28 ರಂದು ವಾಷಿಂಗ್ಟನ್‌ನಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.

ಭಾರತೀಯ ವಿದೇಶಾಂಗ ಸೇವೆ (ಐಎಪ್‌ಎಸ್) 1984 ರ ಬ್ಯಾಚ್‌ನ ಅಧಿಕಾರಿಯಾಗಿರುವ ಹರ್ಷವರ್ಧನ್, ಈ ಹಿಂದೆ ಬ್ಯಾಂಕಾಕ್, ಡಾಕಾದಲ್ಲಿ ಭಾರತದ ಹೈಕಮಿಷನರ್ ಆಗಿ, ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿಯಾಗಿ ಕೆಲಸ ಮಾಡಿದ್ದಾರೆ. ಭಾರತೀಯ ಸಂವಿಧಾನದ 370 ನೇ ವಿಧಿ ರದ್ದು ಸಮಯದಲ್ಲಿ ಭಾರತ ಹಾಗೂ ಅಮೆರಿಕ ನಡುವೆ ಎದ್ದಿದ್ದ ಗೊಂದಲಗಳನ್ನು ನಿಭಾಯಿಸಿಲು ಹರ್ಷವರ್ಧನ್ ಯಶಸ್ವಿಯಾಗಿದ್ದರು.












Click it and Unblock the Notifications