ಶಾಲೆಗೆ ಹೋಗುವಾಗ ಇನ್ನು 'ಭಾರ' ಇರೊಲ್ಲ: ಮಕ್ಕಳ ಬ್ಯಾಗ್ ತೂಕಕ್ಕೆ ಕಡಿವಾಣ

ಬೆಂಗಳೂರು, ನವೆಂಬರ್ 24: ಹೊರಲಾಗದ ಪುಸ್ತಕ ಚೀಲದ ಭಾರವನ್ನು ಕಷ್ಟಪಟ್ಟು ಹೊತ್ತುಕೊಂಡು ಹೋಗುವ ಶಾಲಾ ಮಕ್ಕಳನ್ನು ಕಂಡಾಗ ಕರುಳು ಚುರುಕ್ಕೆನ್ನುವುದು ಸಹಜ.

ಮಕ್ಕಳ ಈ ಸಂಕಟಕ್ಕೆ ಪರಿಹಾರ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಶಾಲಾ ಮಕ್ಕಳ ಬ್ಯಾಗ್ ತೂಕವನ್ನು ಇಳಿಸುವ ಉದ್ದೇಶದಿಂದ ತರಗತಿಗೆ ಅನುಗುಣವಾಗಿ ಬ್ಯಾಗ್ ತೂಕದ ಪ್ರಮಾಣವನ್ನು ನಿಗದಿಪಡಿಸಿದೆ.

ಕೇಂದ್ರ ಸರ್ಕಾರದ ವಿಧಿಸಿರುವ ತರಗತಿವಾರು ಚೀಲ ಭಾರದ ಮಿತಿಯ ನಿಯಮವನ್ನು ಕಟ್ಟುನಿಟ್ಟಾಗಿ ಸೂಚಿಸುವಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಎಲ್ಲ ರಾಜ್ಯಗಳಿಗೆ ಸುತ್ತೋಲೆ ಹೊರಡಿಸಿದೆ.

school students bag weight reduced human resource department

ಇದರ ಜತೆಗೆ ಕೆಲವು ಸೂಚನೆಗಳನ್ನು ಸಹ ನೀಡಲಾಗಿದೆ.

1 ಮತ್ತು 2ನೆಯ ತರಗತಿಯ ವಿದ್ಯಾರ್ಥಿಗಳಿಗೆ ಹೋಂ ವರ್ಕ್ ನೀಡುವಂತಿಲ್ಲ. ಮತ್ತು ಅವರಿಗೆ ಭಾಷೆ ಹಾಗೂ ಗಣಿತ ಹೊರತುಪಡಿಸಿ ಬೇರೆ ಯಾವ ವಿಷಯವನ್ನೂ ಬೋಧಿಸುವಂತಿಲ್ಲ. ಹೆಚ್ಚುವರಿ ಪುಸ್ತಕಗಳನ್ನು ತರುವಂತೆ ವಿದ್ಯಾರ್ಥಿಗಳಿಗೆ ಸೂಚಿಸುವಂತಿಲ್ಲ.

ಕೇಂದ್ರ ಸರ್ಕಾರ ನಿಗದಿಮಾಡಿರುವ ಶಾಲಾ ಬ್ಯಾಗ್ ತೂಕದ ಪ್ರಮಾಣ ಹೀಗಿದೆ...
1- 2 ತರಗತಿ 1.5 Kg
3-5 ತರಗತಿ 2.3 Kg
6-7 ತರಗತಿ 4 Kg
8-9 ತರಗತಿ 4.5 Kg
10 5 ತರಗತಿ Kg

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+