ಯೋಗಿಗೆ ಅವಮಾನ ಮಾಡಿದ್ದು, ಕೊಲೆಯಲ್ಲ! ಪತ್ರಕರ್ತನ ಬಿಡುಗಡೆಗೆ ಸುಪ್ರೀಂ ಆದೇಶ
ನವದೆಹಲಿ, ಜೂನ್ 11: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ್ದಕ್ಕಾಗಿ ಬಂಧನಕ್ಕೊಳಗಾದ ಹವ್ಯಾ ಪತ್ರಕರ್ತ ಪ್ರಶಾಂತ ಕನೋಜಿಯಾ ಅವರನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಪ್ರಶಾಂತ್ ಕನೋಜಿಯಾ ಅವರು ಯೋಗಿ ಆದಿತ್ಯನಾಥ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಶೇರ್ ಮಾಡಿದ್ದಾರಷ್ಟೆ, ಕೊಲೆ ಮಾಡಿಲ್ಲವಲ್ಲ ಎಮದು ಸುಪ್ರೀಂ ಕೋರ್ಟ್ ಹೇಳಿದೆ.
ಕಾನ್ ಪುರ್ ಮೂಲದ ಮಹಿಳೆಯೊಬ್ಬರು ಆದಿತ್ಯನಾಥ್ ವಿರುದ್ಧ ಮಾಡಿದ ಆರೋಪದ ವಿಡಿಯೋವನ್ನು ಪ್ರಶಾಂತ್ ಕನೋಜಿಯಾ ಕಳೆದ ವಾರ ಷೇರ್ ಮಾಡಿದ್ದರು. ಇದರಿಂದಾಗಿ ಶನಿವಾರ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಸುಳ್ಳು ಮಾಹಿತಿ ಹರಡಿರುವ ಕಾರಣ ಅವರನ್ನು ಬಂಧಿಸಲಾಗಿದೆ, ಅದಕ್ಕೆ ಸಾಕ್ಷ್ಯಗಳೂ ಇವೆ ಎಂದು ಪೊಲಿಸರು ಹೇಳಿದ್ದರು. ಆದರೆ ಪ್ರಶಾಂತ್ ಅವರ ಬಂಧನವನ್ನು ಖಂಡಿಸಿ ಅವರ ಪತ್ನಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಈ ಕುರಿತು ಇಂದು ವಿಚಾರಣೆ ನಡೆಸಿದ ನ್ಯಾಯಾಲಯ, "ಈ ರೀತಿಯ ಅರ್ಜಿಯನ್ನು ವಿಚಾರಣೆ ಮಾಡಲು ನಮಗೆ ಮನಸ್ಸಿಲ್ಲ. ಆದರೆ ಒಬ್ಬ ವ್ಯಕ್ತಿ ಕಾರಣವಿಲ್ಲದೆ ಹನ್ನೊಂದು ದಿನಕ್ಕಿಂತ ಹೆಚ್ಚು ದಿನ ಜೈಲಿನಲ್ಲಿರಬಾರದು" ಎಂದು ಅದು ಹೇಳಿದೆ.
ಪ್ರಶಾಂತ್ ಅವರೊಂದಿಗೆ ಯೋಗಿ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಶೇರ್ ಮಾಡಿದ್ದ ಇನ್ನೂ ಐವರನ್ನು ಬಂಧಿಸಲಾಗಿತ್ತು.












Click it and Unblock the Notifications