ರಾಜಕಾರಣಿಗಳ ಕೆಂಪು ದೀಪದ ಕಾರಿಗೆ ಸುಪ್ರೀಂ ತಡೆ

Supreme Court
ನವದೆಹಲಿ, ಡಿ. 10 : ರಾಜಕಾರಣಿಗಳ ಕೆಂಪು ದೀಪದ ಕಾರುಗಳಿಗೆ ಸುಪ್ರೀಂಕೋರ್ಟ್ ಬ್ರೇಕ್ ಹಾಕಿದೆ. ಕೋರ್ಟ್ ಹೊಸ ಮಾರ್ಗಸೂಚಿಯ ಪ್ರಕಾರ ಎಲ್ಲರು ಕೆಂಪು ದೀಪದ ಕಾರು ಬಳಸುವಂತಿಲ್ಲ. ಗಣ್ಯಾತಿ ಗಣ್ಯರು ಮಾತ್ರ ಕೆಂಪು ದೀಪವಿರುವ ವಾಹನಗಳನ್ನು ಬಳಸಬೇಕು ಎಂದು ನ್ಯಾಯಾಲಯ ಆದೇಶ ನೀಡಿದೆ.

ಸಂವಿಧಾನಿಕ ಹುದ್ದೆಗಳಲ್ಲಿ ಇರುವವರು ಕೆಂಪು ದೀಪವಿರುವ ವಾಹನಗಳನ್ನು ಬಳಸೇಕು. ತುರ್ತು ಸೇವೆಯ ವಾಹನಗಳಾದ ಆಂಬ್ಯುಲೆನ್ಸ್, ಪೊಲೀಸ್ ವಾಹನಗಳು, ಅಗ್ನಿಶಾಮಕ ವಾಹನಗಳು ಇನ್ನು ಮುಂದೆ ಕೆಂಪು ದೀಪದ ಬದಲು, ನೀಲಿ ದೀಪಗಳನ್ನು ಬಳಸಬೇಕು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ಹೊಸ ಕಾನೂನನ್ನು ಮೂರು ತಿಂಗಳಲ್ಲಿ ರೂಪಿಸಬೇಕು ಮತ್ತು ಕಾನೂನು ಜಾರಿಯಾಗುವ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

ಕೆಂಪು ದೀಪದ ಕಾರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಹೊಸ ಮಾರ್ಗಸೂಚಿ ಹೊರಡಿಸಿದೆ. ಇದರಿಂದ ರಾಜಕಾರಣಿಗಳು ಇನ್ನು ಕೆಂಪು ದೀಪದ ಕಾರು ಬಳಸುವಂತಿಲ್ಲ. ಪೊಲೀಸ್, ಆಂಬ್ಯುಲೆನ್ಸ್, ಅಗ್ನಿ ಶಾಮಕ ದಳದ ವಾಹನಗಳು ನೀಲಿ ದೀಪವನ್ನು ಬಳಸಬೇಕಾಗಿದೆ.

ಯಾರು ಬಳಸಬಹುದು : ಸಂವಿಧಾನಿಕ ಹುದ್ದೆಗಳಲ್ಲಿ ಇರುವವರು ಮಾತ್ರ ಕೆಂಪು ದೀಪದ ಕಾರು ಬಳಸಬಹುದಾಗಿದೆ. ರಾಷ್ಟ್ರಪತಿ, ಪ್ರಧಾನಿ, ಸಚಿವರು, ರಾಜ್ಯಪಾಲರು, ಮುಖ್ಯ ನ್ಯಾಯಮೂರ್ತಿಗಳು, ಸುಪ್ರೀಂಕೋರ್ಟ್ ನ್ಯಾಯಾಧೀಶರು, ಸಂಸತ್ತಿನ ಉಭಯ ಸದನಗಳ ಮುಖ್ಯಸ್ಥರು ಕೆಂಪು ದೀಪದ ಕಾರಿನಲ್ಲಿ ಸಂಚರಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+