ದಿಲ್ಲಿಯಲ್ಲಿ ಐಷಾರಾಮಿ ಕಾರು ಕೊಳ್ಳಲು ಸುಪ್ರೀಂ ಅನುಮತಿ

Written By:
Subscribe to Oneindia Kannada

ನವದೆಹಲಿ, ಆಗಸ್ಟ್, 12: ವಾಹನ ಬಳಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಶುಕ್ರವಾರ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ನವದೆಹಲಿ ನಗರ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್‌) 2000 ಸಿಸಿ ಮತ್ತು ಅದಕ್ಕೂ ಹೆಚ್ಚಿನ ಸಾಮರ್ಥ್ಯದ ಡೀಸಿಲ್‌ ಚಾಲಿತ ಎಸ್‌ಯುವಿ ಮತ್ತು ಹೈ ಎಂಡ್‌ ಕಾರುಗಳ ನೋಂದಾವಣೆ ಮೇಲೆ ತಾನೇ ಹೇರಿದ್ದ ನಿಷೇಧವನ್ನು ನ್ಯಾಯಾಲಯ ಹಿಂದಕ್ಕೆ ಪಡೆದುಕೊಂಡಿದೆ.

ಇಂಥ ವಾಹನ ಖರೀದಿ ಅಥವಾ ಬಳಕೆ ವೇಳೆ ಶೇ.1ರಷ್ಟು ಹಣವನ್ನು ಪರಿಸರ ತೆರಿಗೆಯಾಗಿ ಪಾವತಿಸಿದಲ್ಲಿ ಅವುಗಳ ನೋಂದಾವಣೆಗೆ ಅವಕಾಶ ನೀಡಬಹುದು ಎಂದು ಹೇಳಿದೆ.[ದಿಲ್ಲಿಯಲ್ಲಿ ಐಷಾರಾಮಿ ಕಾರು ಕೊಳ್ಳಲು ಸಾಧ್ಯವೇ ಇಲ್ಲ]

supreme court

ಮರ್ಸಿಡಿಸ್‌, ಟೊಯೋಟಾ, ಮಹೀಂದ್ರ ಸೇರಿದಂತೆ ವಿವಿಧ ದೈತ್ಯ ಕಂಪನಿಗಳು ನಿರ್ಧಾರ ಪರಿಶೀಲನೆ ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದವು. ಒಮ್ಮೆ ನ್ಯಾಯಾಲಯ ಕಂಪನಿಗಳ ಅರ್ಜಿಯನ್ನು ತಿರಸ್ಕಾರ ಮಾಡಿತ್ತು.[ಹೊಗೆ ಪ್ರಮಾಣಪತ್ರವಿರದಿದ್ದರೆ ಇಂಧನ ಸಿಗಲ್ಲ]

ನವದೆಹಲಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ತಡೆ ದೃಷ್ಟಿಯಿಂದ ನ್ಯಾಯಾಲಯ ಕಳೆದ ಡಿಸೆಂಬರ್ ನಲ್ಲಿ ಈ ನಿಷೇಧದ ನಿರ್ಧಾರ ತೆಗೆದುಕೊಂಡಿತ್ತು. ಆದರೆ ಇದೀಗ ತೆರವು ಮಾಡಿದ್ದು ಐಷಾರಾಮಿ ಕಾರು ಕೊಳ್ಳಲು ಅಡ್ಡಿಇಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Supreme Court on Friday said that all diesel vehicles with engine capacity of 2,000 cc or above can now be registered in the National Capital Region (NCR) subject to depositing one percent of the ex-showroom price of the car with the Central Pollution Control Board.
Please Wait while comments are loading...