Get Updates
Get notified of breaking news, exclusive insights, and must-see stories!

ಹೊಗೆ ಪ್ರಮಾಣಪತ್ರವಿರದಿದ್ದರೆ ಇಂಧನ ಸಿಗಲ್ಲ

ಬೆಂಗಳೂರು, ಮೇ. 1: ನಿಮ್ಮ ವಾಹನಕ್ಕೆ ಸಮಬಂಧಿಸಿ ಸಮರ್ಪಕ 'ಹೊಗೆ ಪ್ರಮಾಣ ಪತ್ರ' (ಎಮಿಶನ್ ಸರ್ಟಿಫಿಕೇಟ್) ಹೊಂದಿರದಿದ್ದರೆ ಇನ್ನು ಮುಂದೆ ನಿಮಗೆ ಪೆಟ್ರೋಲ್ ಅಥವಾ ಡೀಸೆಲ್ ಸಿಗಲ್ಲ.

ಮಾಲಿನ್ಯ ತಡೆ ಕುರಿತಂತೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಪಿಐಎಲ್ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಡಿ.ಎಚ್.ವಘೇಲಾ ಹಾಗೂ ನ್ಯಾಯಮೂರ್ತಿ ರಾಮಮೋಹನ್ ರೆಡ್ಡಿ ಅವರಿದ್ದ ವಿಭಾಗೀಯ ಪೀಠಕ್ಕೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್. ಪೊನ್ನಣ್ಣ ವರದಿ ಸಲ್ಲಿಕೆ ಮಾಡಿದ್ದಾರೆ.[ಉಸಿರುಗಟ್ಟಿಸುವ ವಾತಾವರಣದಲ್ಲಿ ಬೆಂಗಳೂರು ವಿಲವಿಲ]

pollution

ಶಬ್ದ ಹಾಗೂ ವಾಯು ಮಾಲಿನ್ಯ ಮೀತಿ ಮೀರುತ್ತಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಸೇರಿದಂತೆ ವಿವಿಧ ಸಂಸ್ಥೆಗಳು ಆತಂಕ ವ್ಯಕ್ತಪಡಿಸಿದ್ದವು. ಹಾಗಾಗಿ ಪ್ರಮಾಣಪತ್ರ ಹೊಂದಿಲ್ಲದ ವಾಹನಗಳಿಗೆ ಇಂಧನ ತುಂಬದಂತೆ ಪೆಟ್ರೋಲ್ ಬಂಕ್ ಮಾಲೀಕರಿಗೆ ಅಧಿಸೂಚನೆ ಹೊರಡಿಸಲು ನಿರ್ಧರಿಸಲಾಗಿದೆ. ಆ ಕುರಿತ ಕರಡು ಸಿದ್ಧವಾಗಿದೆ. ಸದ್ಯದಲ್ಲೇ ಆದನ್ನು ಪ್ರಕಟಿಸಲಾಗುವುದು ಎಂದು ಪೊನ್ನಣ್ಣ ನ್ಯಾಯಪೀಠಕ್ಕೆ ತಿಳಿಸಿದ್ದಾರೆ.[ಪೆಟ್ರೋಲ್ 4 ರುಪಾಯಿ, ಡೀಸೆಲ್ 2.37 ರು. ತುಟ್ಟಿ]

ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ತನ್ನ ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗಿದೆ. ಅದು ತನ್ನ ಕರ್ತವ್ಯಗಳನ್ನು ಪಾಲಿಸುತ್ತಿಲ್ಲ ಮಂಡಳಿಯನ್ನು ಮುಚ್ಚುವುದೇ ಲೇಸು ಎಂದು ಕಟುವಾಗಿ ಹೇಳಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+