ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿಲ್ಲಿಯಲ್ಲಿ ಐಷಾರಾಮಿ ಕಾರು ಕೊಳ್ಳಲು ಸಾಧ್ಯವೇ ಇಲ್ಲ

|
Google Oneindia Kannada News

ನವದೆಹಲಿ, ಡಿಸೆಂಬರ್, 16: ನವದೆಹಲಿಯಲ್ಲಿಗ ಸದ್ಯ ಕಾರು ಬ್ಯಾನಿನದ್ದೇ ಮಾತು. ಸುಪ್ರೀಂ ಕೋರ್ಟ್ ಬುಧವಾರ ನೀಡಿರುವ ತೀರ್ಪು ಪರ ವಿರೋಧದ ಅಲೆ ಹುಟ್ಟುಹಾಕಿದರೂ ಆಶ್ಚರ್ಯವಿಲ್ಲ.

ವಾಯು ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿ ಬುಧವಾರ ಮಹತ್ವದ ಆದೇಶ ನೀಡಿರುವ ಸುಪ್ರೀಂ, ನವದೆಹಲಿಯಲ್ಲಿ 2000 ಸಿಸಿಗಿಂತ ಮೇಲಿನ ಡೀಸೆಲ್ ಕಾರುಗಳ ನೋಂದಣಿಯನ್ನು ನಿಲ್ಲಿಸುವಂತೆ ಸೂಚನೆ ನೀಡಿದೆ. ಇದರೊಂದಿಗೆ 10 ವರ್ಷ ಹಳೆಯ ಟ್ರಕ್ ಗಳ ಓಡಾಟ ನಿಷೇಧಿಸಿದೆ. ಸರಕು ಸಾಗಣೆ ಲಾರಿಗಳಿಗೆ ರಾಷ್ಟ್ರೀಯ ಹೆದ್ದಾರಿ 1 ಮತ್ತು 8ಕ್ಕೆ ಪ್ರವೇಶವನ್ನು ನಿಷೇಧ ಮಾಡಲಾಗಿದೆ.

ಡೀಸೆಲ್ ಕಾರುಗಳನ್ನು ನಿಷೇಧಿಸಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಹೊರಡಿಸಿದ ಆದೇಶದ ವಿರುದ್ಧ ಕಾರು ಮಾರಾಟಗಾರರು ಸಲ್ಲಿಸಿದ್ಧ ಅರ್ಜಿಗಳ ವಿಚಾರಣೆ ನಡೆಸಿದ ಕೋರ್ಟ್, 2016ರ ಮಾರ್ಚ್ 31ರವರೆಗೆ ಐಷಾರಾಮಿ ಕಾರುಗಳ ನೋಂದಣಿ ಹಾಗೂ 10 ವರ್ಷ ಹಳೆಯ ಟ್ರಕ್ ಗಳ ಸಂಚಾರಕ್ಕೆ ನಿರ್ಬಂಧ ಹೇರಿದೆ. ಇದು ಸಾಮಾನ್ಯ ಜನರ ಮೇಲೆ ಯಾವ ಪರಿಣಾಮ ಬೀರಲ್ಲ ಎಂದು ತಿಳಿಸಿದೆ.

ಸಮ ಸಂಖ್ಯೆ, ಬೆಸ ಸಂಖ್ಯೆ

ಸಮ ಸಂಖ್ಯೆ, ಬೆಸ ಸಂಖ್ಯೆ

ದೆಹಲಿಯಲ್ಲಿ ಜನವರಿ 1ರಿಂದ 'ಸಮ-ಬೆಸ ವಾಹನ ವ್ಯವಸ್ಥೆ' ಜಾರುವ ಯೋಜನೆಗೆ ಇದೀಗಲೇ ಮಾನ್ಯತೆ ದೊರೆತಿದೆ. ಜಾರಿಗೆ ಬಂದ ನಂತರ ನಿತ್ಯ ಸುಮಾರು 10 ಲಕ್ಷ ವಾಹನಗಳು ರಸ್ತೆಯಿಂದ ಹೊರಗುಳಿಯಲಿವೆ. ಸಂಚಾರ ದಟ್ಟಣೆ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಲಿದೆ.

ಸುಪ್ರಿಂ ಮತ್ತೆ ಏನು ಹೇಳಿದೆ?

ಸುಪ್ರಿಂ ಮತ್ತೆ ಏನು ಹೇಳಿದೆ?

ಕೇವಲ ಸಿಎನ್‍ ಜಡ್ ಆಧರಿತ ಟ್ಯಾಕ್ಸಿಗಳಷ್ಟೇ ದೆಹಲಿಯಲ್ಲಿ ಸಂಚರಿಸುವಂತೆ ಕ್ರಮ ಕೈಗೊಳ್ಳಿ. ದೆಹಲಿ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಯೂರೋ 4 ವಾಹನಗಳಿಗೆ ಹೆಚ್ಚಿನ ಉತ್ತೇಜನ ನೀಡಿ. ನಿರ್ಮಾಣ ಕಾಮಗಾರಿ ನಡೆಯುವ ಪ್ರದೇಶಗಳಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ ಎಂದೂ ಸುಪ್ರೀಂ ಕೋರ್ಟ್ ತಿಳಿಸಿದೆ.

 ಎರಡು ದಿನಕ್ಕೆ ಒಮ್ಮೆ ಅವಕಾಶ

ಎರಡು ದಿನಕ್ಕೆ ಒಮ್ಮೆ ಅವಕಾಶ

ದೆಹಲಿಯಲ್ಲಿ 19 ಲಕ್ಷ ಕಾರು, ಜೀಪ್‌ ಮತ್ತು ವ್ಯಾನ್‌ಗಳು ನೋಂದಾಯಿತವಾಗಿವೆ. 2016ರ ಜನವರಿ 1ರಿಂದ ಈ 19 ಲಕ್ಷ ವಾಹನಗಳ ಪೈಕಿ ಶೇ.50ರಷ್ಟು ವಾಹನಗಳು 2 ದಿನಕ್ಕೆ ಒಮ್ಮೆ ಮಾತ್ರ ಅವಕಾಶ ಪಡೆಯಲಿವೆ. ಹೀಗಾಗಿ ನಗರದ ವಾಯಮಾಲಿನ್ಯ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

10 ಸಾವಿರ ಹೊಸ ಆಟೋ

10 ಸಾವಿರ ಹೊಸ ಆಟೋ

ಕಾರುಗಳ ಓಡಾಟಕ್ಕೆ ನಿಯಂತ್ರಣ ಹೇರಿದ ಬಳಿಕ ಉಂಟಾಗುವ ಪರಿಸ್ಥಿತಿ ಎದುರಿಸುವ ನಿಟ್ಟಿನಲ್ಲಿ ದೆಹಲಿಯಲ್ಲಿ ಹೆಚ್ಚುವರಿಯಾಗಿ 6000 ಬಸ್‌ ಓಡಿಸುವ ನಿರ್ಧಾರ ಕೈಗೊಂಡಿರುವ ಆಪ್‌ ಸರ್ಕಾರ, ಇದರ ಜೊತೆಗೆ 10000 ಹೊಸ ಆಟೋ ಪರ್ಮಿಟ್‌ ವಿತರಿಸಲೂ ನಿರ್ಧರಿಸಿದೆ. ಸಮ-ಬೆಸ ಸಂಖ್ಯೆ ಪ್ರಯೋಗ ಯಶಸ್ವಿಯಾದರೆ ಆಟೋ ಪರ್ಮಿಟ್‌ ಲಭಿಸಲಿದೆ

English summary
To control pollution level in New Delhi, the Supreme Court on Wednesday banned the registration of all diesel SUVs and luxury cars with engine capacity of 2000 cc or more in the entire National Capital Region till March 31 next year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X