ನಿಮ್ಮ ಜಾತಕದಲ್ಲಿ ಯಾವ ದೆಸೆ ನಡೆಯುತ್ತಿದೆ? ಯಾವ ಗ್ರಹದ ಪ್ರಭಾವ ಹೆಚ್ಚಿದೆ? ಎರಡೇ ನಿಮಿಷದಲ್ಲಿ ಹೀಗೆ ಕಂಡುಕೊಳ್ಳಿ

ಪ್ರತಿಯೊಬ್ಬರ ಜನ್ಮ ಜಾತಕ ತಿಳಿಯಬೇಕಾದರೆ ನಿಖರವಾದ ಹುಟ್ಟಿದ ದಿನಾಂಕ ಮತ್ತು ಜನ್ಮ ಸಮಯ ತಿಳಿದಿರಬೇಕು. ಆಗ ಮಾತ್ರ ಜಾತಕದಲ್ಲಿ ಯಾವ ಗ್ರಹಗಳು ಬಲವಾಗಿದೆ, ಯಾವ ದೆಸೆ ನಡೆಯುತ್ತಿದೆ, ಜಾತಕ ಫಲ ಹೇಗಿದೆ ಎನ್ನುವುದನ್ನು ಕಂಡುಕೊಳ್ಳಬಹುದು. ಒಂದು ವೇಳೆ ಯಾರ ಬಳಿಯಾದರೂ ನಿಖರವಾದ ಜನ್ಮ ದಿನಾಂಕ ಅಥವಾ ಸಮಯ ಇಲ್ಲ ಎಂದಾದರೂ ಅವರಿಗೆ ಯಾವ ಗ್ರಹ ದೆಸೆ ನಡೆಯುತ್ತಿದೆ ಎನ್ನುವುದನ್ನು ತಿಳಿಯಬಹುದು. ಒಂಭತ್ತು ಗ್ರಹಗಳಲ್ಲಿ ಯಾವ ಗ್ರಹ ನಿಮ್ಮ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ ಅಥವಾ ಯಾವ ಗ್ರಹವು ನಿಮ್ಮ ಜೀವನವನ್ನು ಆಳುತ್ತಿದೆ ಎಂಬುದನ್ನು ನಿರ್ಧರಿಸಲು ಹಲವು ಮಾರ್ಗಗಳಿವೆ.

ಪ್ರತಿಯೊಂದು ಗ್ರಹ ಬಲದ ಚಿಹ್ನೆಗಳು ಮತ್ತು ಲಕ್ಷಣಗಳನ್ನು ತಿಳಿದುಕೊಂಡರೆ ನಿಮ್ಮ ಜಾತಕದಲ್ಲಿ ಯಾವ ಗ್ರಹವು ಪ್ರಬಲವಾಗಿದೆ ಎಂಬುದನ್ನು ನಿರ್ಧರಿಸುವುದು ಸುಲಭವಾಗುತ್ತದೆ. ಅದು ಹಠಾತ್ ಆರ್ಥಿಕ ಲಾಭ, ಯಶಸ್ಸು ಅಥವಾ ಜೀವನದ ಕಠಿಣ ಹೋರಾಟ ಇವೆಲ್ಲವುಗಳಲ್ಲಿ ಗ್ರಹಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.

Which Planet Is Strong

ಬಲಿಷ್ಠ ಗ್ರಹದ ಚಿಹ್ನೆಗಳು: ಒಬ್ಬ ವ್ಯಕ್ತಿಯ ಅಭ್ಯಾಸಗಳು, ಮುಖಭಾವ, ನಡವಳಿಕೆ, ಜೀವನ ಕ್ರಮಗಳು ಮತ್ತು ಜೀವನದಲ್ಲಿ ಸಂಭವಿಸುವ ಘಟನೆಗಳು ಅವನ ಜಾತಕದಲ್ಲಿ ಯಾವ ಗ್ರಹವು ಅತ್ಯಂತ ಶಕ್ತಿಶಾಲಿಯಾಗಿದೆ ಎಂಬುದನ್ನು ಹೇಳುತ್ತವೆ.

ಚಂದ್ರ ಬಲವಾಗಿದ್ದರೆ: ಜಾತಕದಲ್ಲಿ ಚಂದ್ರ ಬಲವಾಗಿದ್ದರೆ ವ್ಯಕ್ತಿಯು ಸ್ಥಿರ ಮತ್ತು ಶಾಂತ ಮನಸ್ಸನ್ನು ಹೊಂದಿರುತ್ತಾನೆ. ಚೆನ್ನಾಗಿ ನಿದ್ರಿಸುತ್ತಾನೆ. ಗಮನಾರ್ಹವಾದ ಚಿಂತನಾ ಸಾಮರ್ಥ್ಯಗಳನ್ನು ಹೊಂದಿರುತ್ತಾನೆ. ಅಂತಹ ವ್ಯಕ್ತಿಯು ಸ್ಪಷ್ಟ ಮನಸ್ಸನ್ನು ಹೊಂದಿದ್ದು, ಯಾವುದೇ ಕಾರಣಕ್ಕೂ ಗೊಂದಲಕ್ಕೊಳಗಾಗುವುದಿಲ್ಲ.

ಇನ್ನು 10 ದಿನಗಳಲ್ಲಿ ಹೆಚ್ಚುವುದು ಈ ರಾಶಿಯವರ ಸಿರಿ ಸಂಪತ್ತು, ಸಾಲದಿಂದ ಸಿಗುವುದು ಮುಕ್ತಿ, ಅಕ್ಟೋಬರ್‌ವರೆಗೆ ಅದೃಷ್ಟ
ಇನ್ನು 10 ದಿನಗಳಲ್ಲಿ ಹೆಚ್ಚುವುದು ಈ ರಾಶಿಯವರ ಸಿರಿ ಸಂಪತ್ತು, ಸಾಲದಿಂದ ಸಿಗುವುದು ಮುಕ್ತಿ, ಅಕ್ಟೋಬರ್‌ವರೆಗೆ ಅದೃಷ್ಟ

ಮಂಗಳ ಬಲವಾಗಿದ್ದರೆ: ಜಾತಕದಲ್ಲಿ ಮಂಗಳ ಬಲವಾಗಿದ್ದರೆ ವ್ಯಕ್ತಿಗೆ ಬಲಿಷ್ಠ ವ್ಯಕ್ತಿತ್ವ, ಧೈರ್ಯ ಮತ್ತು ಹೃದಯ ವೈಶಾಲ್ಯವನ್ನು ನೀಡುತ್ತದೆ. ಅಂತಹ ವ್ಯಕ್ತಿಗಳು ಆಕರ್ಷಕ ದೇಹ ಮತ್ತು ಗುಲಾಬಿ ಮೈಬಣ್ಣವನ್ನು ಹೊಂದಿರುತ್ತಾರೆ. ಈ ವ್ಯಕ್ತಿಗಳು ಸಾಮಾನ್ಯವಾಗಿ ಪೊಲೀಸ್, ಮಿಲಿಟರಿ ಮತ್ತು ಕ್ರೀಡೆಗಳಂತಹ ಕ್ಷೇತ್ರಗಳನ್ನು ಆಯ್ಕೆ ಮಾಡುತ್ತಾರೆ. ಈ ಕ್ಷೇತ್ರಗಳಲ್ಲಿ ದೊಟ್ಟ ಮಟ್ಟದ ಯಶಸ್ಸನ್ನು ಸಾಧಿಸುತ್ತಾರೆ.

Which Planet Is Strong

ಗುರು ಬಲವಾಗಿದ್ದರೆ: ಗುರು ಯಾರ ಜಾತಕದಲ್ಲಿ ಬಲವಾಗಿರುತ್ತದೆಯೋ ಅವರು ಸಂತೋಷದ ಜೀವನವನ್ನು ನಡೆಸುತ್ತಾರೆ. ಅವರು ಸಮೃದ್ಧ ಕುಟುಂಬ, ವಿಧೇಯ ಮಕ್ಕಳು ಮತ್ತು ಒಳ್ಳೆಯ ಸಂಗಾತಿಯನ್ನು ಪಡೆಯುತ್ತಾರೆ. ಅವರು ಬುದ್ಧಿವಂತರು ಮತ್ತು ವಿವೇಚನಾಶೀಲರಾಗಿರುತ್ತಾರೆ.ಜೀವನದಲ್ಲಿ ಪ್ರತಿಕೂಲ ಪರಿಸ್ಥಿತಿ ಎದುರಾದರೆ ಅದನ್ನು ನಿವಾರಿಸಲು ಅನುವು ಮಾಡಿಕೊಡುತ್ತಾರೆ.

ಬುಧ ಬಲವಾಗಿದ್ದರೆ: ಬಲಿಷ್ಠ ಬುಧ ಗ್ರಹದ ವ್ಯಕ್ತಿಯು ಬುದ್ಧಿವಂತ, ವಾಗ್ಮಿ ಮತ್ತು ಅವರ ವಯಸ್ಸಿಗಿಂತ ಕಿರಿಯರಾಗಿ ಕಾಣುತ್ತಾರೆ. ಅವರು ಚಂಚಲ ಮನಸ್ಸಿನವರಾಗಿದ್ದು, ಸಣ್ಣ ಸಣ್ಣ ಮಾತಿಗೂ ಸುಲಭವಾಗಿ ಬೇಸರಗೊಳ್ಳುತ್ತಾರೆ.

ರೋಹಿಣಿ ನಕ್ಷತ್ರದಲ್ಲಿ ಬುಧ ಸಂಕ್ರಮಣ :ಈ ರಾಶಿಯವರಿಗೆ ಹೆಚ್ಚುವುದು ಅದೃಷ್ಟ
ರೋಹಿಣಿ ನಕ್ಷತ್ರದಲ್ಲಿ ಬುಧ ಸಂಕ್ರಮಣ :ಈ ರಾಶಿಯವರಿಗೆ ಹೆಚ್ಚುವುದು ಅದೃಷ್ಟ

ಶುಕ್ರ ಬಲವಾಗಿದ್ದರೆ: ಬಲಿಷ್ಠ ಶುಕ್ರನು ಅಪಾರ ಸಂಪತ್ತು ಮತ್ತು ಐಷಾರಾಮಿ ಜೀವನವನ್ನು ಕರುಣಿಸುತ್ತಾನೆ. ಅಂಥಹ ವ್ಯಕ್ತಿಯು ಐಷಾರಾಮಿ ಜೀವನವನ್ನು ನಡೆಸುತ್ತಾನೆ. ಅವರು ಸುಂದರ ಮತ್ತು ಆಕರ್ಷಕವಾಗಿರುತ್ತಾರೆ. ಜನರು ಅವರತ್ತ ಸುಲಭವಾಗಿ ಆಕರ್ಷಿತರಾಗುತ್ತಾರೆ.

ಶನಿಯು ಬಲವಾಗಿದ್ದರೆ: ತಮ್ಮ ಜಾತಕದಲ್ಲಿ ಬಲಿಷ್ಠ ಅಥವಾ ಉಚ್ಛ ಶನಿ ಇರುವವರು ಹೆಚ್ಚು ಶಿಸ್ತುಬದ್ಧ ಮತ್ತು ಜವಾಬ್ದಾರಿಯುತರಾಗಿರುತ್ತಾರೆ. ಈ ವ್ಯಕ್ತಿಗಳು ಪರಿಶ್ರಮಿಗಳಾಗರುತ್ತಾರೆ.ಅವರು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದು ಪೂರ್ಣಗೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಬಹಳ ಶ್ರಮಪಟ್ಟ ನಂತರ ಹೋರಾಟದ ಬಳಿಕ ಯಶಸ್ಸು ಸಿಗುವುದು. ಆದರೆ, ಅವರ ಜೀವನದಲ್ಲಿ ಒಲಿದು ಬರುವ ಯಶಸ್ಸು ಶಾಶ್ವತವಾಗಿರುತ್ತದೆ.

ರಾಹು ಬಲಿಷ್ಟವಾಗಿದ್ದರೆ: ಬಲಿಷ್ಠ ರಾಹು ತೀಕ್ಷ್ಣ ಬುದ್ಧಿಶಕ್ತಿ, ಹಠಾತ್ ಸಂಪತ್ತು ಮತ್ತು ಯಶಸ್ಸನ್ನು ದಯಪಾಲಿಸುತ್ತಾನೆ. ರಾಹು ಎಷ್ಟು ಬೇಗ ಯಶಸ್ಸನ್ನು ನೀಡುತ್ತಾನೆಯೋ ಅಷ್ಟೇ ಬೇಗನೆ ಅವನತಿಗೂ ಕಾರಣನಾಗುತ್ತಾನೆ. ವ್ಯಕ್ತಿಯು ವಂಚನೆ ಮತ್ತು ಸುಳ್ಳುಗಳಿಗೆ ಗುರಿಯಾಗುತ್ತಾನೆ.

ಕೇತು ಬಲವಾಗಿದ್ದರೆ: ಯಾರ ಜಾತಕದಲ್ಲಿ ಕೇತು ಬಲಿಷ್ಟನಗಿರುತ್ತಾನೆಯೋ ಅವರು ಆಧ್ಯಾತ್ಮಿಕ, ತಪಸ್ವಿ ಮತ್ತು ಹೆಚ್ಚು ಬುದ್ಧಿವಂತರಾಗಿರುತ್ತಾರೆ. ಅವರು ಸಂಶೋಧನೆ, ನಿಗೂಢ ಮತ್ತು ಅತೀಂದ್ರಿಯ ವಿಜ್ಞಾನಗಳಲ್ಲಿ ತೀವ್ರ ಆಸಕ್ತಿ ಹೊಂದಿರುತ್ತಾರೆ. ಇವರ ಪ್ರತಿಭೆ ಬಹಳ ಬೇಗ ಬೆಳಕಿಗೆ ಬರುತ್ತದೆ. ಶ್ರೀಮಂತರಾಗುತ್ತಾರೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+