Vastu Tips: ಈ ವಸ್ತುಗಳನ್ನು ದಾನ ಮಾಡಿದರೆ ದೂರವಾಗಲಿದೆ ಆರ್ಥಿಕ ಸಮಸ್ಯೆ, ಮನೆಗೆ ಬರಲಿದೆ ಸಮೃದ್ಧಿ
Vastu Tips: ಭಾರತೀಯ ಸಂಸ್ಕೃತಿಯಲ್ಲಿ ದಾನ ಮಾಡುವುದು ಎಂದರೆ ಅತ್ಯಂತ ಪುಣ್ಯದ ಕಾರ್ಯವೆಂದು ಹೇಳಲಾಗುತ್ತದೆ. ದಾನ ಮಾಡುವುದರಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ ಮತ್ತು ಜೀವನದಲ್ಲಿ ಸಕಾರಾತ್ಮಕ ಶಕ್ತಿಯು ಹೆಚ್ಚಾಗುತ್ತದೆ ಎಂದು ನಂಬಲಾಗಿದೆ.
ವಾಸ್ತು ಶಾಸ್ತ್ರ ಹಾಗೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಶುದ್ಧ ಮನಸ್ಸಿನಿಂದ ನಾವು ದಾನವನ್ನು ಮಾಡಿದರೆ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ, ಸುಖ-ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಆದರೆ ದಾನವನ್ನು ಮಾಡುವಾಗ ಕೆಲವು ವಸ್ತುಗಳನ್ನು ದಾನ ಮಾಡುವುದನ್ನು ತಪ್ಪಿಸಬೇಕು ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ. ಯಾಕೆಂದರೆ ಕೆಲವು ವಸ್ತುಗಳು ನಕಾರಾತ್ಮಕ ಶಕ್ತಿ ಮತ್ತು ಆರ್ಥಿಕ ಸಮಸ್ಯೆಗಳ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಗಡಿಯಾರ ದಾನ
ವಾಸ್ತು ನಂಬಿಕೆಗಳ ಪ್ರಕಾರ ಗಡಿಯಾರವು ವ್ಯಕ್ತಿಯ ಸಮಯ ಮತ್ತು ಅದೃಷ್ಟದ ಸಂಕೇತವಾಗಿದೆ. ಹಾಳಾದ ಅಥವಾ ಬಳಸಿದ ಗಡಿಯಾರವನ್ನು ದಾನ ಮಾಡಿದರೆ ಜೀವನದಲ್ಲಿ ಅಡಚಣೆಗಳು ಮತ್ತು ಆರ್ಥಿಕ ಸಮಸ್ಯೆಗಳು ಹೆಚ್ಚಾಗಬಹುದು ಎಂದು ಹೇಳಲಾಗುತ್ತದೆ. ಆದ್ದರಿಂದ ಗಡಿಯಾರವನ್ನು ದಾನವನ್ನು ಮಾಡುವುದಿಲ್ಲ.
ಪೊರಕೆ
ವಾಸ್ತು ಶಾಸ್ತ್ರದ ಪ್ರಕಾರ ಪೊರಕೆಯನ್ನು ಲಕ್ಷ್ಮಿ ದೇವಿಗೆ ಸಂಬಂಧಿಸಿದ ವಸ್ತು ಎಂದು ನಂಬಲಾಗಿದೆ. ಆದ್ದರಿಂದ ನಾವು ಪೊರಕೆಯನ್ನು ದಾನ ಮಾಡಿದರೆ ಮನೆಯ ಹಣಕಾಸಿನ ಸ್ಥಿರತೆ ಮತ್ತು ಸಮೃದ್ದಿಗೆ ತೊಂದರೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಅನೇಕರಿಗೆ ಈ ವಿಷಯ ಗೊತ್ತಿಲ್ಲದೆ ದಾನ ಮಾಡಿ ತೊಂದರೆಗಳನ್ನು ಎದುರಿಸುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಪೊರಕೆಯನ್ನು ದಾನ ಮಾಡುವುದು ತಪ್ಪು ಎಂದು ತಜ್ಞರ ಅಭಿಪ್ರಾಯವಾಗಿದೆ.
ಮನೆಯಲ್ಲಿ ಉಳಿದ ಆಹಾರ ದಾನ
ದಾನ ಎಂದರೆ ಗೌರವದಿಂದ ಕೊಡುವ ಕಾರ್ಯವಾಗಿದೆ. ಆದರೆ ಹಾಳಾದ ಅಥವಾ ಉಳಿದ ಆಹಾರವನ್ನು ದಾನ ಮಾಡುವುದು ಅಶುಭ ಎಂದು ಪರಿಗಣಿಸಲಾಗುತ್ತದೆ. ಇದು ಪಡೆಯುವ ವ್ಯಕ್ತಿಗೆ ನಾವು ಅವಮಾನ ಮಾಡಿದಂತೆ ಅಗುತ್ತದೆ ಎಂದು ನಂಬಲಾಗಿದೆ. ಆದ್ದರಿಂದ ದಾನ ಮಾಡುವುದೆ ಆದರೆ ತಾಜಾ, ಸ್ವಚ್ಛ ಮತ್ತು ಆರೋಗ್ಯಕರವಾದ ಆಹಾರವನ್ನು ಮಾತ್ರ ದಾನ ಮಾಡಬೇಕು.
ಮೊನಚಾದ ವಸ್ತುಗಳ ದಾನ
ಬ್ಲೇಡ್, ಕತ್ತರಿ ಮತ್ತು ಚಾಕುಗಳಂತಹ ಹರಿತವಾದ ವಸ್ತುಗಳನ್ನು ದಾನ ಮಾಡುವುದು ಉತ್ತಮವಲ್ಲ ಎಂದು ಹೇಳಲಾಗುತ್ತದೆ. ಇವು ಮನೆಯ ಸಂಬಂದಗಳಲ್ಲಿ ಭಿನ್ನತೆ, ಕುಟುಂಬ ಕಲಹ ಉಂಟುಮಾಡಬಹುದು ಎಂದು ವಸ್ತು ತಜ್ಙರ ಅಭಿಪ್ರಾಯ. ಹೀಗಾಗಿ ಕುಟುಂಬ ಮತ್ತು ಸ್ನೇಹ ಸಂಬಂಧಗಳಲ್ಲಿ ಸಾಮರಸ್ಯ ಕಾಪಾಡಲು ಇಂತಹ ವಸ್ತುಗಳನ್ನು ದಾನ ಮಾಡಬಾರದು.
ಕೆಟ್ಟ ಎಲೆಕ್ಟ್ರಾನಿಕ್ ಸಾಮಗ್ರಿಗಳು
ಹಾಳಾದ ಗೃಹೋಪಯೋಗಿ ವಸ್ತುಗಳು ಅಥವಾ ಕೆಲಸ ಮಾಡದ ಎಲೆಕ್ಟ್ರಾನಿಕ್ ಸಾಧನಗಳನ್ನು ದಾನ ಮಾಡುವುದು ಸಹ ತಪ್ಪು ವಾಸ್ತು ಶಾಸ್ತ್ರ ಹೇಳುತ್ತದೆ. ಇದು ಮನೆಯ ನಕಾರಾತ್ಮಕ ಶಕ್ತಿ ಹಾಗೂ ಆರ್ಥಿಕ ಅಸ್ಥಿರತೆಯನ್ನು ಸೂಚಿಸುತ್ತದೆ ಎಂದು ನಂಬಲಾಗಿದೆ. ಆದ್ದರಿಂದ ದಾನ ಮಾಡುವಾಗ ಬಳಸಲು ಯೋಗ್ಯವಾದ ವಸ್ತುಗಳನ್ನು ಮಾತ್ರ ನೀಡುವುದು ಒಳ್ಳೆಯದು.
ಹರಿದ ಪಾದರಕ್ಷೆಗಳು
ಹಳೆಯದಾದ ಅಥವಾ ಹಾಳಾದ ಚಪ್ಪಲಿ ಮತ್ತು ಶೂಗಳನ್ನು ದಾನ ಮಾಡುವುದು ಸಹ ಶುಭವಲ್ಲ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಆರ್ಥಿಕ ಸಂಕಷ್ಟ, ದುರಾದೃಷ್ಷ ಹೆಚ್ಚುತ್ತದೆ ಮತ್ತಯ ಇನ್ನೊಬ್ಬರ ಕಷ್ಟ ಹಸ್ತಾಂತರ ಆಗುತ್ತದೆ ಹೇಳಲಾಗುತ್ತದೆ. ಆದ್ದರಿಂದ ಪಾದರಕ್ಷೆಗಳನ್ನು ದಾನ ಮಾಡಬೇಕಾದರೆ ಅವು ಸ್ವಚ್ಛ ಮತ್ತು ಉತ್ತಮ ಸ್ಥಿತಿಯಲ್ಲಿರಬೇಕು.
ವಾಸ್ತು ಶಾಸ್ತ್ರದ ಪ್ರಕಾರ ದಾನ ಮಾಡುವಾಗ ಗೌರವ, ಶುದ್ಧತೆ ಮತ್ತು ಉಪಯುಕ್ತತೆ ಮುಖ್ಯವಾಗಿರಬೇಕು. ಇತರರಿಗೆ ನಿಜವಾಗಿಯೂ ಉಪಯೋಗವಾಗುವ ವಸ್ತುಗಳನ್ನು ನೀಡುವುದೇ ಉತ್ತಮ ದಾನ ಎಂದು ಪರಿಗಣಿಸಲಾಗುತ್ತದೆ.














Click it and Unblock the Notifications