ದೆಹಲಿಯಿಂದ ವಾಪಸಾದ ಸತೀಶ್ ಮೌನದ ಹಿಂದಿನ ಗುಟ್ಟೇನು?

Recommended Video

      ದೆಹಲಿಯಿಂದ ವಾಪಸಾದ ಸತೀಶ್ ಜಾರಕಿಹೊಳಿ ಮೌನಕ್ಕೆ ಶರಣಾಗಿದ್ಯಾಕೆ? | Oneindia Kannada

      ಬೆಂಗಳೂರು, ಸೆಪ್ಟೆಂಬರ್ 21: ಸತೀಶ್ ಜಾರಕಿಹೊಳಿ ದೆಹಲಿಗೆ ತೆರಳಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಭೇಟಿ ಮಾಡಿ, ರಾಹುಲ್ ಗಾಂಧಿ ಭೇಟಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮರಳಿದ್ದಾರೆ.

      ಬಂದ ಬಳಿಕ ಮೌನವಾಗಿದ್ದಾರೆ ಇದರ ಹಿಂದಿನ ಗುಟ್ಟೇನು ಎನ್ನುವುದು ಈಗಿರುವ ಸದ್ಯದ ಕುತೂಹಲವಾಗಿದೆ. ಜಾರಕಿಹೊಳಿ ಸಹೋದರರು ಬಿಜೆಪಿ ಸೇರ್ತಾರಂತೆ ಅನ್ನೋದು ಇದೀಗ ಹಳೇ ಸುದ್ದಿ, ಸೆಪ್ಟೆಂಬರ್ ಆರಂಭದಿಂದ ಮಧ್ಯತಿಂಗಳವರೆಗೂ ಇದೇ ಸುದ್ದಿ.

      ಒಂದು ಕಡೆಯಿಂದ ಕಾಂಗ್ರೆಸ್ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಿದರೆ ಮತ್ತೊಂದು ಕಡೆ ಬಿಜೆಪಿ ಸೆಳೆಯುವ ಪ್ರಯತ್ನವನ್ನು ಮಾಡುತ್ತಲೇ ಇದೆ, ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಪರಮೇಶ್ವರ್ ಸೇರಿದಂತೆ ಹಲವು ಮುಖಂಡರು ಶಾಸಕರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ.

      Satish Jarkiholi now keep mum after returns from Delhi

      ಬೆಂಬಲಿಗ ಶಾಸಕರಿಗೆ ಸಿಗದ ಪ್ರಾಶಸ್ತ್ಯ, ಬೆಳಗಾವಿ ರಾಜಕೀಯದಲ್ಲಿ ಸಚಿವ ಡಿಕೆ ಶಿವಕುಮಾರ್ ಹಸ್ತಕ್ಷೇಪದಿಂದ ಆಕ್ರೋಶಗೊಂಡಿದ್ದ ಸತೀಶ್ ಜಾರಕಿಹೊಳಿ ಅವರನ್ನು ವೇಣುಗೋಪಾಲ್ ಸ್ವಲ್ಪ ಶಾಂತವಾಗಿಸಿದ್ದಾರೆ.

      ನಿಗಮ ಮಂಡಳಿ ನೇಮಕಾತಿ, ಸಚಿವ ಸಂಪುಟ ವಿಸ್ತರಣೆ ವೇಣೆ ನಿಮ್ಮ ಬೇಡಿಕೆ ಈಡೇರಲಿದೆ ಎಂದು ಅಭಯ ನೀಡಿರುವ ವೇಣುಗೋಪಾಲ್ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸೀಟುಗಳನ್ನು ಗೆಲ್ಲಬೇಕಿದೆ. ಈ ನಿಟ್ಟಿನಲ್ಲಿ ಪಕ್ಷ ಸಂಘಟನೆಗೆ ನಿಮ್ಮ ಪಾಲ್ಗೊಳ್ಳುವಿಕೆ ಮುಖ್ಯ ಎಂದು ಮನವರಿಕೆ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

      ಡಿಕೆಶಿ ಹಸ್ತಕ್ಷೇಪಕ್ಕೆ ಲಗಾಮು ಹಾಕುವುದಾಗಿಈಗಾಗಲೇ ರಾಜ್ಯ ನಾಯಕರು ಭರವಸೆ ನೀಡಿದ್ದಾರೆ, ಲಕ್ಷ್ಮೀ ಹೆಬ್ಬಾಳ್ಕರ್ ಗೂ ಬುದ್ಧಿ ಹೇಳಿ, ವಿನಾಕಾರಣ ನಮ್ಮ ತಾಳ್ಮೆ ಪ್ರಶ್ನಿಸುವ ಕೆಲಸ ನಡೆಯುವುದು ಬೇಡ, ಸಹೋದರ ರಮೇಶ್ ಜಾರಕಿಹೊಳಿ ಕೂಡ ಈ ವಿಷಯದಲ್ಲಿ ಕೋಪಗೊಂಡಿದ್ದಾರೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಏನೇ ಅಸಮಾಧಾನಗಳು ಇರಲಿ ಅವರು ಶಾಂತವಾಗಿರುವ ಹಿಂದೆ ಬಲವಾದ ಕಾರಣ ಇದೆ ಎನ್ನುವುದು ಮಾತ್ರ ಸ್ಪಷ್ಟವಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+