'ಕಾಶ್ಮೀರವನ್ನು ಪಾಕಿಸ್ತಾನಕ್ಕೆ ನೀಡಲು ಹೊರಟಿದ್ದರು ಪಟೇಲ್'

Recommended Video

      ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಕೊಡಲು ಹೊರಟ್ಟಿದ್ರಂತೆ ಸರ್ದಾರ್ ವಲ್ಲಭಬಾಯ್ ಪಟೇಲ್ | Oneindia Kannada

      ನವದೆಹಲಿ, ಜೂನ್ 26:'ಉಕ್ಕಿನ ಮನುಷ್ಯ ಎಂದೇ ಹೆಸರಾಗಿದ್ದ ಸರ್ದಾರ್ ವಲ್ಲಭಬಾಯ್ ಪಟೇಲ್ ಪಾಕಿಸ್ತಾನಕ್ಕೆ ಕಾಶ್ಮೀರವನ್ನು ಕೊಡಲು ಹೊರಟಿದ್ದರು. ಬದಲಾಗಿ ನಾವು ಹೈದರಾಬಾದ್ ಅನ್ನು ಉಳಿಸಿಕೊಳ್ಳುತ್ತೇವೆ ಎಂದಿದ್ದರು' ಎಂದು ಕಾಂಗ್ರೆಸ್ಸಿನ ಹಿರಿಯ ನಾಯಕ ಸೈಫುದ್ದಿನ್ ಸೋಜ್ ಹೇಳಿಕೆ ನೀಡಿದ್ದಾರೆ.

      ಇತ್ತೀಚೆಗಷ್ಟೆ, ಕಾಶ್ಮೀರ ಸ್ವಾತಂತ್ರ್ಯ ಬಯಸುತ್ತಿದೆ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದ ಸೋಜ್ ಇದೀಗ ಮತ್ತೊಮ್ಮೆ ವಿವಾದಾದತ್ಮಕ ಹೇಳಿಕೆ ನೀಡಿದ್ದಾರೆ.

      ತಮ್ಮ Kashmir: Glimpses of History and the Story of Struggle ಎಂಬ ಪುಸ್ತಕವನ್ನು ನಿನ್ನೆ(ಜೂನ್ 25) ನವದೆಹಲಿಯಲ್ಲಿ ಬಿಡುಗಡೆ ಮಾಡಿದ ಅವರು ಈ ರೀತಿ ಹೇಳಿದರು.

      Sardar Patel had offered Kashmir to Pakistan: Saifuddin Soz

      'ಸರ್ದಾರ್ ಪಟೇಲ್ ಒಬ್ಬ ವಾಸ್ತವತಾವಾದಿ. ಅವರು ಕಾಶ್ಮೀರವನ್ನು ಬೇಕಾದರೆ ತೆಗೆದುಕೊಳ್ಳಿ, ಆದರೆ ಯಾವುದೇ ಕಾರಣಕ್ಕೂ ಹೈದರಾಬಾದಿನ ಬಗ್ಗೆ ಮಾತ್ರ ಮಾತನಾಡಬೇಡಿ. ಅದನ್ನು ನಾವು ಬಿಟ್ಟುಕೊಡುವುದಿಲ್ಲ' ಎಂದು ಅಮದಿನ ಪಾಕಿಸ್ತಾನದ ಪ್ರಧಾನಿ ಲಿಯಾಕತ್ ಅಲಿ ಖಾನ್ ಗೆ ಹೇಳಿದ್ದರು' ಎಂದು ಸೋಜ್ ಹೇಳಿದರು. ಈ ಕುರಿತು ತಮ್ಮ ಪುಸ್ತಕದಲ್ಲಿ ಸವಿವರವಾಗಿ ಬರೆದಿರುವುದಾಗಿ ಅವರು ಹೇಳಿದರು.

      ಇತ್ತೀಚೆಗಷ್ಟೆ ಅವರು ನೀಡಿದ್ದ ಇನ್ನೊಂದು ಹೇಳಿಕೆ ವಿವಾದ ಸೃಷ್ಟಿಸಿತ್ತು. 'ಕಾಶ್ಮೀರಕ್ಕೆ ಸ್ವತಂತ್ರ್ಯ ಬೇಕಾಗಿದೆ. ಅದು ಪಾಕಿಸ್ತಾನದೊಂದಿಗಾಗಲೀ, ಭಾರತದೊಂದಿಗಾಗಲೀ ಇರಲು ಬಯಸುವುದಿಲ್ಲ ಎಂದು ಪಾಕ್ ಮುಖಂಡ ಪರ್ವೇಜ್ ಮುಷ್ರಪ್ ಒಮ್ಮೆ ಹೇಳಿದ್ದರು. ಅವರ ಮಾತು ಸತ್ಯ ಎಂದು ನನಗನ್ನಿಸುತ್ತಿದೆ ಎಮದು ಸೋಜ್ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.

      ಕಾಶ್ಮೀರ ವಿವಾದಕ್ಕೆ ಸಂಬಮಧಿಸಿದಂತೆ ಇರುವ ತಮ್ಮ ಪುಸ್ತಕದ ಮುಖ್ಯಾಂಶಗಳನ್ನು ಪುಸ್ತಕ ಲೋಕಾರ್ಪಣೆಯ ನಂತರ ಅವರು ತಿಳಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+