ಗುರ್ಗಾಂವ್‌ನಲ್ಲಿ 3 ಬಾಂಬ್ ವದಂತಿ : ಜನ ಕಕ್ಕಾಬಿಕ್ಕಿ
ನವದೆಹಲಿ, ಡಿ. 17: ನಗರದ ಮೂರು ಸ್ಥಳಗಳಲ್ಲಿ ಬಾಂಬ್ ಇರಿಸಿರುವ ವದಂತಿ ಹಬ್ಬಿದ್ದು, ಜನರು ಆತಂಕಕ್ಕೊಳಗಾಗಿದ್ದಾರೆ. ಗುರ್ಗಾಂವ್ ನಗರದ ಹೂಡಾ ಸಿಟಿ ಸೆಂಟರ್ ಹಾಗೂ ಮೆಟ್ರೋ ರೈಲು ನಿಲ್ದಾಣದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಗುಪ್ತಚರ ಇಲಾಖೆಗಳು ಮಾಹಿತಿ ನೀಡಿವೆ.
ಮುನ್ನೆಚ್ಚರಿಕೆಯಾಗಿ ಹೂಡಾ ಸಿಟಿ ಸೆಂಟರ್‌ನಲ್ಲಿದ್ದ ಜನರನ್ನು ತೆರವುಗೊಳಿಸಲಾಗಿದೆ. ಸ್ಥಳದಲ್ಲಿ ಬಾಂಬ್ ಪತ್ತೆ ದಳ ಹಾಗೂ ಶ್ವಾನ ದಳ ಆಗಮಿಸಿದ್ದು, ಶೋಧ ಕಾರ್ಯ ನಡೆಸುತ್ತಿವೆ. ಮೆಟ್ರೋ ರೈಲು ಸಂಚಾರ ಸ್ಥಗಿತಗೊಳಿಸಲಾಗಿದ್ದು, ನಿಲ್ದಾಣದಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ.

ಪಾಕಿಸ್ತಾನದಲ್ಲಿ ಮತ್ತೆ ಸ್ಫೋಟ : ಪೇಶಾವರದ ಖೈಬರ್ ಪ್ರಾಂತ್ಯದ ಡೇರಾ ಇಸ್ಮಾಯಿಲ್ ಬಳಿಯ ಕುಳಚಿ ಮಹಿಳಾ ಕಾಲೇಜಿನ ಹತ್ತಿರ ಅವಳಿ ಬಾಂಬ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಎಷ್ಟು ಸಾವು-ನೋವುಗಳು ಸಂಭವಿಸಿವೆ ಎಂಬುದರ ವರದಿ ಸಿಕ್ಕಿಲ್ಲ.
ಮಂಗಳವಾರವಷ್ಟೇ ಸೈನಿಕ ಶಾಲೆಯಲ್ಲಿ ಮಕ್ಕಳನ್ನು ಅಮಾನುಷವಾಗಿ ಕೊಂದಿದ್ದ ತಾಲಿಬಾನ್ ಉಗ್ರರು ಇಂದು ಮತ್ತೆ ಬಾಂಬ್ ಸ್ಫೋಟ ಮುಂದುವರಿಸಿದ್ದಾರೆ.












Click it and Unblock the Notifications