ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್‌ಎಸ್‌ಎಸ್‌ ಮುಖ್ಯಸ್ಥ, ಮುಸ್ಲಿಂ ಮುಖಂಡರ ಭೇಟಿ; ಧಾರ್ಮಿಕ ಸಾಮರಸ್ಯ ಕುರಿತು ಚರ್ಚೆ

|
Google Oneindia Kannada News

ನವದೆಹಲಿ, ಸೆ.21: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರು ಅನೇಕ ಮುಸ್ಲಿಂ ಪ್ರಜ್ಞಾವಂತರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ದೇಶದಲ್ಲಿನ ಇತ್ತೀಚಿನ ವಿವಾದಗಳು ಮತ್ತು ದೇಶದಲ್ಲಿ ಧಾರ್ಮಿಕ ಸಾಮರಸ್ಯವನ್ನು ಬಲಪಡಿಸುವ ಮಾರ್ಗಗಳನ್ನು ಚರ್ಚಿಸಿದರು.

ಆರೆಸ್ಸೆಸ್‌ಗೆ ನಿಕಟವಾಗಿರುವ ಮೂಲಗಳ ಪ್ರಕಾರ, ಸಂಘದ ವಿಚಾರಗಳನ್ನು ಪ್ರಚಾರ ಮಾಡಲು ಮತ್ತು ಧಾರ್ಮಿಕ ಸಾಮರಸ್ಯದ ವಿಷಯದ ಪ್ರಚಾರಕ್ಕಾಗಿ ಸಭೆಯನ್ನು ನಡೆಸಲಾಯಿತು. ಜ್ಞಾನವಾಪಿ ವಿವಾದ, ಹಿಜಾಬ್ ವಿವಾದ, ಜನಸಂಖ್ಯೆ ನಿಯಂತ್ರಣದಂತಹ ಇತ್ತೀಚಿನ ಘಟನೆಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.

ಜ್ಞಾನವಾಪಿ ವಿವಾದ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರಶ್ನೆಜ್ಞಾನವಾಪಿ ವಿವಾದ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರಶ್ನೆ

ಸಭೆಯಲ್ಲಿ ಮಾಜಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಎಸ್ ವೈ ಖುರೇಷಿ, ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ (ಎಲ್‌ಜಿ) ನಜೀಬ್ ಜಂಗ್, ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ (ಎಎಂಯು) ಮಾಜಿ ಕುಲಪತಿ ಲೆಫ್ಟಿನೆಂಟ್ ಜನರಲ್ ಜಮೀರ್ ಉದ್ದೀನ್ ಶಾ, ಮಾಜಿ ಸಂಸದ ಶಾಹಿದ್ ಸಿದ್ದಿಕಿ ಮತ್ತು ಉದ್ಯಮಿ ಸಯೀದ್ ಶೇರ್ವಾಣಿ ಮುಂತಾದ ಅನೇಕ ಬುದ್ಧಿಜೀವಿಗಳು ಭಾಗವಹಿಸಿದ್ದರು.

RSS Chief Mohan Bhagwat Meets Muslim Intellectuals And Discuss

ದೇಶದಲ್ಲಿ ಶಾಂತಿ ಮತ್ತು ಸಹೋದರತ್ವವನ್ನು ಬಲಪಡಿಸಲು ಚರ್ಚೆ ನಡೆಸಲಾಗಿದೆ ಎಂದು ಮಾಜಿ ಸಂಸದ ಶಾಹಿದ್ ಸಿದ್ದಿಕಿ ಹೇಳಿದರು.

"ದೇಶದಲ್ಲಿ ನಡೆಯುತ್ತಿರುವ ಧಾರ್ಮಿಕ ಸಾಮರಸ್ಯ ದುರ್ಬಲಗೊಳಿಸುತ್ತಿದೆ ಎಂದು ನಾವು ಕಳವಳ ವ್ಯಕ್ತಪಡಿಸುತ್ತೇವೆ. ಆದ್ದರಿಂದ, ದೇಶದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಹೇಗೆ ಉಳಿಸಿಕೊಳ್ಳುವುದು ಮತ್ತು ಬಲಪಡಿಸುವುದು ಎಂಬುದರ ಕುರಿತು ನಾವೆಲ್ಲರೂ ಚರ್ಚೆ ನಡೆಸಿದ್ದೇವೆ" ಎಂದು ಮಾಜಿ ಸಂಸದ ಶಾಹಿದ್ ಸಿದ್ದಿಕಿ ಹೇಳಿದರು.

RSS Chief Mohan Bhagwat Meets Muslim Intellectuals And Discuss

"ಮೋಹನ್ ಭಾಗವತ್ ಅವರು ಒಂದು ಸಂಘಟನೆಗೆ ಅಲ್ಲ ಅನೇಕರು ಅನುಸರಿಸುವ ಸಂಘಟನೆಗೆ ಸೇರಿದವರು. ಅದಕ್ಕಾಗಿಯೇ ನಾವೆಲ್ಲರೂ ಸಭೆ ನಡೆಸಿದ್ದೇವೆ. ದೇಶದಲ್ಲಿ ಧಾರ್ಮಿಕ ಒಳಗೊಳ್ಳುವಿಕೆಯನ್ನು ಹೇಗೆ ಬಲಪಡಿಸಬೇಕು ಎಂಬುದರ ಕುರಿತು ಚರ್ಚಿಸಿದ್ದೇವೆ" ಎಂದು ಶಾಹಿದ್ ಸಿದ್ದಿಕಿ ಹೇಳಿದರು.

English summary
Rashtriya Swayamsevak Sangh (RSS) Chief Mohan Bhagwat met Muslim intellectuals and discussed Religious Harmony in country. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X