ದೆಹಲಿಯಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಿದರೆ 5 ಸಾವಿರ ರೂ. ದಂಡ

Posted By: Gururaj
Subscribe to Oneindia Kannada

ನವದೆಹಲಿ, ಅ.10 : ಜೈವಿಕವಾಗಿ ಕೊಳೆಯದ ಪ್ಲಾಸ್ಟಿಕ್ ಚೀಲಗಳನ್ನು ನವದೆಹಲಿಯಲ್ಲಿ ಉಪಯೋಗಿಸುವಂತಿಲ್ಲ ಎಂದು ರಾಷ್ಟ್ರೀಯ ಹಸಿರು ಪೀಠ ಆದೇಶ ನೀಡಿದೆ. ನಿಯಮ ಉಲ್ಲಂಘನೆ ಮಾಡಿದರೆ ಐದು ಸಾವಿರ ರೂ. ದಂಡ ವಿಧಿಸಲು ಸೂಚನೆ ನೀಡಿದೆ.

ಗುರುವಾರ ಹಸಿರು ನ್ಯಾಯಪೀಠ ಈ ಕುರಿತು ಆದೇಶ ಹೊರಡಿಸಿದೆ. ಸೂಚಿತ ಗುಣಮಟ್ಟಕ್ಕಿಂತ ಕಡಿಮೆ ಪ್ರಮಾಣದ ಪ್ಲಾಸ್ಟಿಕ್ ಸಂಗ್ರಹವನ್ನು ಒಂದು ವಾರದೊಳಗೆ ವಶಪಡಿಸಿಕೊಳ್ಳಬೇಕು ಎಂದು ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

Rs 5000 fine for use of banned plastic bags in New Delhi

ಜೈವಿಕವಾಗಿ ಕೊಳೆಯದ ಪ್ಲಾಸ್ಟಿಕ್ ಚೀಲಗಳನ್ನು ಉಪಯೋಗಿಸುವಂತಿಲ್ಲ ಎಂದು ಆದೇಶ ನೀಡಿದೆ. ಐವತ್ತು ಮೈಕ್ರಾನ್ ಪ್ರಮಾಣಕ್ಕಿಂತಲೂ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಚೀಲ ಬಳಕೆ ಮಾಡಿದರೆ ಐದು ಸಾವಿರ ರೂ. ದಂಡ ವಿಧಿಸಬೇಕು ಎಂದು ಹೇಳಿದೆ.

Video Found Childrens Playing Cricket In Plastic Rice Ball | Oneindia Kannada

ಬಳಕೆ ಮಾಡಿ ಬಿಸಾಡಬಹುದಾದ ಪ್ಲಾಸ್ಟಿಕ್ ಬಳಕೆಯನ್ನು ಹಸಿರು ಪೀಠ 2017ರ ಜನವರಿ 1ರಿಂದಲೇ ಜಾರಿಗೆ ಬರುವಂತೆ ನಿರ್ಬಂಧಿಸಿತ್ತು. ಜುಲೈ ತಿಂಗಳಿನಲ್ಲಿ ದೆಹಲಿ ಸರ್ಕಾರ ಆದೇಶವನ್ನು ಪಾಲನೆ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The National Green Tribunal on August, 10, 2017 imposed an interim ban on use of non-biodegradable plastic bags which are less than 50 microns in New Delhi.
Please Wait while comments are loading...