ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲಿಗಿಲ್ಲ ನೀರಿನ ತೊಂದರೆ: ಐದೇ ನಿಮಿಷದಲ್ಲಿ ಬೋಗಿಗೆ ನೀರು

|
Google Oneindia Kannada News

ನವದೆಹಲಿ, ಡಿಸೆಂಬರ್ 10: ರೈಲ್ವೆ ಬೋಗಿಗಳಲ್ಲಿನ ಶೌಚಾಲಯಗಳಲ್ಲಿ ನೀರಿನ ಕೊರತೆ ನಿವಾರಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಅದರ ಭಾಗವಾಗಿ ಸೂಪರ್‌ವೈಸರಿ ಕಂಟ್ರೋಲ್ ಆಂಸ್ ಡಟಾ ಆಕ್ವಿಸಿಷನ್ ಎಂಬ ಹೊಸ ತಂತ್ರಜ್ಞಾನವನ್ನು ಅಳವಡಿಸಿದೆ.

ಹುಬ್ಬಳ್ಳಿ : ಜೋಡಿಹಳಿ ಕಾಮಗಾರಿಗಾಗಿ ಹಲವು ರೈಲು ಸಂಚಾರ ರದ್ದು ಹುಬ್ಬಳ್ಳಿ : ಜೋಡಿಹಳಿ ಕಾಮಗಾರಿಗಾಗಿ ಹಲವು ರೈಲು ಸಂಚಾರ ರದ್ದು

ಸ್ವಚ್ಛ ಭಾರತ ಯೋಜನೆಯಡಿ ದೇಶದ ರೈಲು ನಿಲ್ದಾಣಗಳ ಪರಿಸರದಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದೆಯಾದರೂ ಕೋಚ್‌ಗಳ ಟಾಯ್ಲೆಟ್‌ಗಳಲ್ಲಿ ನೀರಿನ ಸಮಸ್ಯೆ ಎದುರಿಸುವ ಕುರಿತು ಪ್ರಯಾಣಿಕರಿಂದ ದೂರು ಕೇಳಿಬರುತ್ತಿತ್ತು. ಈ ಇನ್ನೆಲೆಯಲ್ಲಿ ಟಾಯ್ಲೆಟ್‌ಗಳ ಹಾಗೂ ವಾಷ್ ಬೇಸಿನ್‌ಗಳಲ್ಲಿ ನೀರಿನ ಕೊರತೆ ಬಗೆಹರಿಸಲು ರೈಲ್ವೆ ಇಲಾಖೆ 300 ಕೋಟಿ ರೂ ಮೊತ್ತದ ಯೋಜನೆ ಜಾರಿಗೆ ಮುಂದಾಗಿದೆ.

ವಿಶೇಷತೆ ಏನು?

ವಿಶೇಷತೆ ಏನು?

ಇದು ರಿಸರ್ಚ್ ಡಿಸೈನ್ ಆಂಡ್ ಸ್ಟಾಂಡರ್ಡ್ಸ್ ಆರ್ಗನೈಸೇಷನ್ ಸಂಸ್ಥೆ ಸಿದ್ಧಪಡಿಸಿರುವ ತಂತ್ರಜ್ಞಾನವಾಗಿದೆ. ತಂತ್ರಜ್ಞಾನದ ಮೂಲಕ ಆಗುವ ನೀರು ಪೂರೈಕೆ ಪ್ರಸ್ತುತ ಬೋಗಿಗಳಿಗೆ ನಾಲ್ಕು ಇಂಚು ಪೈಪುಗಳ ಮೂಲಕ ನೀರು ತುಂಬಿಸಲಾಗುತ್ತಿದೆ. ಇದರ ಬದಲಿಗೆ ಆರು ಇಂಚಿನ ಪೈಪುಗಳ ಜೊತೆಗೆ ಹೆಚ್ಚು ಶಕ್ತಿಶಾಲಿಯಾಗಲಿದೆ.

ಶತಾಬ್ದಿಗೆ ಸೆಡ್ಡು ಹೊಡೆಯಲು ಹಳಿಗಿಳಿದ ಇಂಜಿನ್ ರಹಿತ 'ಟ್ರೈನ್ 18' ಶತಾಬ್ದಿಗೆ ಸೆಡ್ಡು ಹೊಡೆಯಲು ಹಳಿಗಿಳಿದ ಇಂಜಿನ್ ರಹಿತ 'ಟ್ರೈನ್ 18'

ಅತ್ಯಾಧುನಿಕ ಪ್ರೆಷರ್ ಪಂಪ್‌ಗಳು

ಅತ್ಯಾಧುನಿಕ ಪ್ರೆಷರ್ ಪಂಪ್‌ಗಳು

ಅತ್ಯಾಧುನಿಕ ಹೈ ಪ್ರೆಷರ್ ಪಂಪ್‌ಗಳನ್ನು ಇಂಚುಗಳ ಪೈಪುಗಳ ಮೂಲಕ ಟ್ಯಾಂಕ್‌ಗಳಿಗೆ ಕೇವಲ ನಿಮಿಷದಲ್ಲಿ ನೀರು ಭರ್ತಿ ಮಾಡುವುದು ಯೋಜನೆಯ ವಿಶೇಷವಾಗಿದೆ. ಅತಿ ದೂರ ಪ್ರಯಾಣ ಅವಧಿಯ ರೈಲುಗಳಲ್ಲಿ ಪ್ರತಿ 300 ಕಿ.ಮೀಗೆ ನೀರು ಭರ್ತಿ ಮಾಡಲು ಈ ಯೋಜನೆ ಸಹಕಾರಿಯಾಗಲಿದೆ. ಇಲ್ಲಿ ಎಲ್ಲವೂ ಕಂಪ್ಯೂಟರ್ ಚಾಲಿತ ಎಸ್‌ಸಿಎಡಿಎ ವ್ಯವಸ್ಥೆಯ ಮೂಲಕ ನಡೆಯಲಿದೆ.

ಮೈಸೂರಿನಲ್ಲಿ ಹಳಿ ತಪ್ಪಿದ ಪೆಟ್ರೋಲಿಯಂ ತುಂಬಿದ ರೈಲು ಮೈಸೂರಿನಲ್ಲಿ ಹಳಿ ತಪ್ಪಿದ ಪೆಟ್ರೋಲಿಯಂ ತುಂಬಿದ ರೈಲು

5 ನಿಮಿಷದಲ್ಲಿ 1800 ಲೀಟರ್ ನೀರು ತುಂಬುತ್ತದೆ

5 ನಿಮಿಷದಲ್ಲಿ 1800 ಲೀಟರ್ ನೀರು ತುಂಬುತ್ತದೆ

ಕಾರ್ಯಾಚರಣೆಯಲ್ಲಿರುವ ಹಾಲಿ ರೈಲುಗಳ ಬೋಗಿಗಳಲ್ಲಿ ಪ್ರತಿ ವಾಟರ್ ಟ್ಯಾಂಕ್‌ನ ಸಂಗ್ರಹ ಸಾಮರ್ಥ್ಯ 1800 ಲೀಟರ್ ಇದೆ. ರೈಲ್ವೆ ಇಲಾಖೆ ಬಳಿ ಇರುವ ಸದ್ಯದ ತಂತ್ರಜ್ಞಾನದಲ್ಲಿ ಸಾಮಾನ್ಯವಾಗಿ 24 ಬೋಗಿಗಳಿರುವ ರೈಲುಗಳಿಗೆ ಪೂರ್ಣ ಪ್ರಮಾಣದಲ್ಲಿ ನೀರು ತುಂಬಿಸಲು ಕನಿಷ್ಠ 20ನಿಮಿಷವಾಗುತ್ತದೆ. ಎಸ್‌ಸಿಎಡಿಎ ತಂತ್ರಜ್ಞಾನದಲ್ಲಿ ನೀರು ತುಂಬಿಸು ಅವಧಿ ಕೇವಲ 5 ನಿಮಿಷಗಳಿಗೆ ಇಳಿಯಲಿದೆ. ಈ ಹಿಂದೆ 20 ನಿಮಿಷ ತಗುಲುತ್ತಿದ್ದ ಹಿನ್ನೆಲೆಯಲ್ಲಿ ಸಮಯದ ಅಭಾವದಿಂದ ನೀರಿನ ಟ್ಯಾಂಕ್ ಗನ್ನು ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಹೊಸ ತಂತರ್ಜ್ಞಾನದಲ್ಲಿ ಪ್ರತಿ 300 ಕಿ.ಮೀಗೆ ಟ್ಯಾಂಕ್‌ಗಳು ಭರ್ತಿಯಾಗುತ್ತವೆ.

ಹಲವಾರು ರೈಲುಗಳಿಗೆ ಒಂದೇ ಸಮಯದಲ್ಲಿ ನೀರು

ಹಲವಾರು ರೈಲುಗಳಿಗೆ ಒಂದೇ ಸಮಯದಲ್ಲಿ ನೀರು

24 ಬೋಗಿಗಳಿದ್ದರೂ ಅವೆಲ್ಲಕ್ಕೂ ನೀರು ತುಂಬಲು ಐದು ನಿಮಿಷಗಳು ಸಾಕು, ಏಕಕಾಲಕ್ಕೆ ಇದೇ ವೇಗದಲ್ಲಿ ಹಲವಾರು ರೈಲುಗಳಿಗೆ ನೀರು ತುಂಬಬಹುದಾಗಿದೆ. ಹೊಸ ವ್ಯವಸ್ಥೆಯು ಕಂಪ್ಯೂಟರೀಕರಣ ಆಗಿರುವುದರಿಂದ ಯಾವುದೇ ಲೋಪ, ನೀರಿನ ಅಪವ್ಯಯ ಇರುವುದಿಲ್ಲ.

English summary
Water woes onboard trains will soon be a thing of the past with railways at set to introduce a system which will reduce water filling time from the existing 20 minutes to just five minutes at stations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X