'ರೋಹಿತ್ ತಿವಾರಿಗೆ ಬೇರೊಂದು ಮಹಿಳೆ ಜೊತೆ ಅಕ್ರಮ ಸಂಬಂಧವಿತ್ತು'

ನವದೆಹಲಿ, ಏ.27: ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್‌ಡಿ ತಿವಾರಿ ಪುತ್ರ ರೋಹಿತ್ ತಿವಾರಿಗೆ ಬೇರೊಂದು ಹೆಣ್ಣಿನ ಜೊತೆ ಅಕ್ರಮ ಸಂಬಂಧವಿತ್ತು ಎಂದು ರೋಹಿತ್ ಅವರ ಪತ್ನಿ ಅಪೂರ್ವ ಮನೆಯವರು ಆರೋಪಿಸಿದ್ದಾರೆ.

ಏ.16ರಂದು ರೋಹಿತ್ ತಿವಾರಿ ಮೃತಪಟ್ಟಿದ್ದರು ಮೊದ ಮೊದಲು ಅದು ಹೃದಯಾಘಾತ ಅಂದುಕೊಂಡಿತ್ತಾದರೂ ವೈದ್ಯಕೀಯ ವರದಿ ಪ್ರಕಾರ ಅದು ಸಹಜ ಸಾವಲ್ಲ ಕೊಲೆ ಎನ್ನುವುದು ದೃಢಪಟ್ಟಿತ್ತು. ಅದಾದ ಬಳಿಕ ರೋಹಿತ್ ಪತ್ನಿ ಅಪೂರ್ವ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವುದು ತಾನೇ ಎಂದು ಆಕೆ ಒಪ್ಪಿಕೊಂಡಿದ್ದಳು.

ರೋಹಿತ್ ಕೊಲೆ ಮಾಡಲು ಇದೂ ಒಂದು ಕಾರಣ

ರೋಹಿತ್ ಕೊಲೆ ಮಾಡಲು ಇದೂ ಒಂದು ಕಾರಣ

ರೋಹಿತ್ ತಿವಾರಿಗೆ ಬೇರೊಂದು ಹೆಣ್ಣಿನ ಜೊತೆ ಅಕ್ರಮ ಸಂಬಂಧವಿತ್ತು ಎಂದು ರೋಹಿತ್ ಕುಟುಂಬಸ್ಥರು ಆರೋಪಿಸಿದ್ದಾರೆ. ಅಪೂರ್ವ ಹಾಗೂ ರೋಹಿತ್ ನಡುವೆ ಗಂಡ-ಹೆಂಡತಿಯ ಬಾಂಧವ್ಯವೇ ಇರಲಿಲ್ಲ ಇರಲಿಲ್ಲ ಎಂದು ಅಪೂರ್ವ ತಾಯಿ ಮಂಜುಳಾ ತಿಳಿಸಿದ್ದಾರೆ.

ರೋಹಿತ್‌ಗೆ ಗಂಭೀರ ಕಾಯಿಲೆ ಇತ್ತು

ರೋಹಿತ್‌ಗೆ ಗಂಭೀರ ಕಾಯಿಲೆ ಇತ್ತು

ಎನ್‌ಡಿ ತಿವಾರಿ ಪುತ್ರ ರೋಹಿತ್ ಶೇಖರ್‌ಗೆ ಗಂಭೀರ ಕಾಯಿಲೆ ಇತ್ತು. ಕೆಲವು ದಿನಗಳ ಹಿಂದೆ ರೋಹಿತ್ ಅವರ ಮನೆಯಲ್ಲಿ ಪೂಜೆ ನಡೆದಿತ್ತು. ಅಂದು ಅಪೂರ್ವ ಹಾಗೂ ರೋಹಿತ್ ಇಬ್ಬರ ಆರೋಗ್ಯವೂ ಸರಿ ಇರಲಿಲ್ಲ ಎಂದು ಮಂಜುಳಾ ಹೇಳಿದ್ದಾರೆ.

ರೋಹಿತ್ ಮತ್ತು ತಾಯಿ ಉಜ್ವಲ ನಡುವೆ ಆಸ್ತಿ ಕಲಹವಿತ್ತು

ರೋಹಿತ್ ಮತ್ತು ತಾಯಿ ಉಜ್ವಲ ನಡುವೆ ಆಸ್ತಿ ಕಲಹವಿತ್ತು

ರೋಹಿತ್ ತಿವಾರಿ ಹಾಗೂ ಅವರ ತಾಯಿ ಉಜ್ವಲ ಅವರ ನಡುವೆ ಆಸ್ತಿ ವಿಷಯವಾಗಿ ವೈಮನಸ್ಸು ಇತ್ತು, ಆಗಾಗ ಜಗಳ ನಡೆಯುತ್ತಿತ್ತು ಎನ್ನುವ ಮಾಹಿತಿ ತಿಳಿದುಬಂದಿದೆ.

ನಾಲ್ಕು ದಿನಗಳ ತನಿಖೆಯಲ್ಲಿ ಅಪೂರ್ವ ಹೇಳಿದ್ದೇನು?

ನಾಲ್ಕು ದಿನಗಳ ತನಿಖೆಯಲ್ಲಿ ಅಪೂರ್ವ ಹೇಳಿದ್ದೇನು?

ರೋಹಿತ್ ಕೊಲೆ ಕುರಿತು ಪೊಲೀಸರು ನಡೆಸಿದ ನಾಲ್ಕು ದಿನದ ತನಿಖೆಯಲ್ಲಿ ಅಪೂರ್ವ ಗೊಂದಲ ಹೇಳಿಕೆಗಳನ್ನು ನೀಡಿದ್ದಾರೆ. ತಮ್ಮ ನಿರ್ಧಾರದ ಕುರಿತು ಪಶ್ಚಾತಾಪ ಪಡುತ್ತಿರುವಂತೆಯೂ ಕಾಣುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯಾಗುವ ದಿನ ರೋಹಿತ್ ಆತನ ಸಹೋದರಿ ಜೊತೆಗೆ ಒಂದೇ ಗ್ಲಾಸಿನಲ್ಲಿ ಕುಡಿಯುತ್ತಿರುವ ಕುರಿತು ಜಗಳವಾಗಿತ್ತು. ಅಪೂರ್ವ ಹಾಗೂ ರೋಹಿತ್ ಒಂದೇ ಮಹಡಿಯಲ್ಲಿ ಬೇರೆ ಬೇರೆ ಕೋಣೆಯಲ್ಲಿ ವಾಸಿಸುತ್ತಿದ್ದರು ಎನ್ನುವುದು ಸಿಸಿಟಿವಿ ದೃಶ್ಯಾವಳಿ ಮೂಲಕ ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+