• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವೋಟು ಮಾಡಿ ಪೆರುಗ್ವೆ ಧ್ವಜ ಹಾಕಿದ ವಾದ್ರಾಗೆ ಪಂಚೋ ಪಂಚು!

|

ನವದೆಹಲಿ, ಮೇ 13: ನವದೆಹಲಿಯಲ್ಲಿ ಭಾನುವಾರ ನಡೆದ ಆರನೇ ಹಂತದ ಚುನಾವಣೆಯಲ್ಲಿ ಮತದಾನ ಮಾಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮತಿ ರಾಬರ್ಟ್ ವಾದ್ರಾ ಇದೀಗ ಟ್ರೋಲ್ ಬಲೆಗೆ ಸಿಕ್ಕಿಕೊಂಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮತ ಚಲಾಯಿಸಿದ ನಂತರ ಸೆಲ್ಫಿಯನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದ ವಾದ್ರಾ, ಭಾರತದ ಧ್ವಜ ಬದಲು ಪೆರುಗ್ವೆ ದೇಶದ ಧ್ವಜವನ್ನು ಹಾಕಿದ್ದು ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ. "ರಾಹುಲ್ ಗಾಂಧಿ ಅವರ ಭಾವನಿಗೆ ತನ್ನ ಸ್ವಂತ ದೇಶದ ಧ್ವಜ ಹೇಗೆ ಕಾಣುತ್ತದೆ ಎಂಬುದೂ ಗೊತ್ತಿಲ್ಲ" ಎಂದು ಟ್ವಿಟ್ಟಿಗರು ಆಡಿಕೊಂಡಿದ್ದಾರೆ.

'ಶಹೆನ್‌ಶಾ' ರಾಬರ್ಟ್ ವಾದ್ರಾ ಶೀಘ್ರದಲ್ಲೇ ಜೈಲಿಗೆ: ಪ್ರಧಾನಿ ಮೋದಿ

ತಮ್ಮ ತಪ್ಪಿನ ಅರಿವಾದ ನಂತರ ಈ ಟ್ವೀಟ್ ಅನ್ನು ವಾದ್ರಾ ಡಿಲೀಟ್ ಮಾಡಿದರಾದರೂ ಟ್ರಾಲ್ ಹೈಕ್ಳು ಜೋಪಾನವಾಗಿ ತೆಗೆದಿಟ್ಟ ಸ್ಕ್ರೀನ್ ಶಾಟ್ ಗಳು ಮಾತ್ರ ಈಗಲೂ ವಾದ್ರಾ ಅವರ ಕಾಲೆಳೆಯುವ ಕೆಲಸ ಮಾಡುತ್ತಿವೆ.

"ಇದು ಕಣ್ತಪ್ಪಿನಿಂದ ಆದ ಪ್ರಮಾದ ಎಂಬುದು ನಿಮಗೂ ಗೊತ್ತು. ನನ್ನ ದೇಶದ ಬಾವುಟ ನನಗೆ ಗೊತ್ತಾಗುವುದಿಲ್ಲವೇ? ಇದು ಅಚಾತುರ್ಯದಿಂದ ಆದ ತಪ್ಪು ಎಂದು ಗೊತ್ತಿದೂ ನೀವು ಅಪಹಾಸ್ಯ ಮಾಡುತ್ತಿರುವುದು ನನಗೆ ಕೊಂಚ ನೋವುಂಟು ಮಾಡಿದೆ. ಆದರೂ ಪರವಾಗಿಲ್ಲ" ಎಂದು ರಾಬರ್ಟ್ ವಾದ್ರಾ ನಂತರ ಟ್ವೀಟ್ ಮಾಡಿದ್ದಾರೆ.

ಪೂರಾ ಕುಟುಂಬವೂ ಬುದ್ದು!!

ಅಂದರೆ ವಾದ್ರಾಗೆ ಭಾರತದ ಧ್ವಜ ಯಾವುದು ಎಂಬುದು ಗೊತ್ತಿಲ್ಲ. ಈ ಜೋಕರ್ ಬಾರತದ ಧ್ವಜ ಎಂದು ತಿಳಿದು ಪೆರುಗ್ವೆ ಧ್ವಜ ಹಾಕಿದ್ದಾರೆ. ಪೂರಾ ಕುಟುಂಬವೇ ಬುದ್ದು - ಸನಾತನ ಧರ್ಮ ಟ್ವಿಟ್ಟರ್

ದಿವ್ಯ ಸ್ಪಂದನ ಏನಂತಾರೆ?

"ದಿವ್ಯ ಸಂದನ ಅವರೇ, ಮೋದಿ 1988 ರಲ್ಲಿ ಡಿಜಿಟಲ್ ಕ್ಯಾಮರಾ ಮತ್ತು ಇಮೇಲ್ ಬಳಸಿದ್ದೆ ಎಂದು ಹೇಳಿದರೆ ಅದನ್ನು ಆಡಿಕೊಳ್ಳುತ್ತೀರಿ. ರಾಬರ್ಟ್ ವಾದ್ರಾ ಬಗ್ಗೆ ಏನನ್ನುತ್ತೀರಿ ನಮ್ಮ ದೇಶದ ಧ್ವಜವನ್ನೇ ಯಾರಾದರೂ ತಪ್ಪಾಗಿ ಪ್ರಕಟಿಸುತ್ತಾರೆಯೇ?" -ಅತನು ದಾಸ್

ನನ್ನನ್ನು ನಿಂದಿಸಬೇಡಿ, ಮೋದಿಗೆ ವಾದ್ರಾ 'ಎಫ್ಬಿ'ಯಲ್ಲಿ ಮನವಿ

ಕುಟುಂಬವೆಲ್ಲ ಒಳ್ಳೆಯ ಕೆಲಸ ಮಾಡಿದೆ!

ರಾಬರ್ಟ್ ವಾದ್ರಾ ಅವರು ಪೆರುಗ್ವೆ ಧ್ವಜವನ್ನು ತಮ್ಮ ಧ್ವಜ ಎಂಬಂತೆ ಹಾಕಿದ್ದಾರೆ. ಕುಟುಂಬವೆಲ್ಲ ಒಳ್ಳೆಯ ಕೆಲಸ ಮಾಡಿದೆ ಎಂದು ವಂದನಾ ಎಂಬುವವರು ಕಾಲೆಳೆದಿದ್ದಾರೆ.

ದೇಶವನ್ನು ಪ್ರೀತಿಸದಿದ್ದರೆ ಹೀಗಾಗುತ್ತದೆ

ನಿಮ್ಮ ದೇಶವನ್ನು ಪ್ರೀತಿ ಮಾಡದೆ ಇದ್ದಾಗ ಹೀಗಾಗುತ್ತದೆ!- ಪ್ರತೀಕ್ ಅಗರ್ವಾಲ್

ವಾದ್ರಾ ಸಮಜಾಯಿಷಿ

"ಭಾರತ ನನ್ನ ಹೃದಯದಲ್ಲಿದೆ ಮತ್ತು ನಾನು ತಿರಂಗವನ್ನು ಗೌರವಿಸುತ್ತೇನೆ. ನನ್ನ ಟ್ವೀಟ್ ನಲ್ಲಿ ಪೆರುಗ್ವೆ ಧ್ವಜವನ್ನು ಹಾಕಿದ್ದು ಅಚಾತುರ್ಯದಿಂದ. ಅದನ್ನು ಕಣ್ತಪ್ಪಿನಿಂದ ಪೋಸ್ಟ್ ಮಾಡಿದ್ದು ಎಮಬುದು ನನಗೂ ಗೊತ್ತು, ನಿಮಗೆಲ್ಲರಿಗೂ ಗೊತ್ತು. ಆದರೆ ನೀವು ನನ್ನ ತಪ್ಪಿನೊಂದಿಗೆ ಆಟ ಆಡಲು ನಿರ್ಧರಿಸಿದ್ದೀರಿ! ಈ ದೇಶದಲ್ಲಿ ಚರ್ಚೆ ಮಾಡುವುದಕ್ಕೆ ಸಾಕಷ್ಟು ವಿಷಯಗಳಿದ್ದರೂ ಇದನ್ನು ಚರ್ಚಿಸುತ್ತಿದ್ದೀರಿ. ಅದು ನನಗೆ ಬೇಸರ ತಂದಿದೆ. ಆದರೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ" ಎಂದು ರಾಬರ್ಟ್ ವಾದ್ರಾ ಸಮಜಾಯಿಷಿ ನೀಡಿದ್ದಾರೆ.

English summary
Congress leader Priyanka Gandhi Vadra's husband Robert Vadra, after casting his vote in 6th phase in New Delhi posted a selfie on twitter with Paraguayan flag. Trolls critisises his act. Later he deleted his tweet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X