ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಪತ್ರೆಯ ಶೇ.80ರಷ್ಟು ಐಸಿಯು ಬೆಡ್ ಕೊವಿಡ್-19 ರೋಗಿಗಳಿಗೆ ಮೀಸಲು

|
Google Oneindia Kannada News

ನವದೆಹಲಿ, ಸಪ್ಟೆಂಬರ್.13: ಕೊರೊನಾವೈರಸ್ ಸೋಂಕು ಹರಡುವಿಕೆ ಪ್ರಮಾಣ ಏರಿಕೆಯಾಗುತ್ತಿದ್ದಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರ ಎಚ್ಚೆತ್ತುಕೊಂಡಿದೆ. ನವದೆಹಲಿಯಲ್ಲಿ ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್ ಗಳಲ್ಲಿ ಶೇ.80ರಷ್ಟು ಐಸಿಯು ಬೆಡ್ ಗಳನ್ನು ಕೊವಿಡ್-19 ಸೋಂಕಿತರಿಗೆ ಮೀಸಲು ಇರಿಸುವಂತೆ ಆದೇಶಿಸಿದ್ದಾರೆ.

ನವದೆಹಲಿಯ ಖಾಸಗಿ ಆಸ್ಪತ್ರೆಗಳಲ್ಲಿ ಕನಿಷ್ಠ 50 ಐಸಿಯು ಬೆಡ್ ಅಥವಾ ಆಸ್ಪತ್ರೆಯಲ್ಲಿರುವ ಐಸಿಯು ಬೆಡ್ ಗಳ ಶೇ.80ರಷ್ಟು ಪ್ರಮಾಣವನ್ನು ಕೊರೊನಾವೈರಸ್ ಸೋಂಕಿತರಿಗಾಗಿ ಮೀಸಲು ಇರಿಸುವಂತೆ ಭಾನುವಾರ ಆದೇಶ ಹೊರಡಿಸಲಾಗಿದೆ. ತತ್ ಕ್ಷಣದಿಂದಲೇ ಈ ಆದೇಶವು ಜಾರಿಗೆ ಬರಲಿದೆ.

ಭಾರತದಲ್ಲಿ ಕೊವಿಡ್-19 ಸೋಂಕಿತರಿಗೆ ಆಕ್ಸಿಜನ್ ಕೊರತೆ ಆತಂಕಭಾರತದಲ್ಲಿ ಕೊವಿಡ್-19 ಸೋಂಕಿತರಿಗೆ ಆಕ್ಸಿಜನ್ ಕೊರತೆ ಆತಂಕ

ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣ ಸಂಖ್ಯೆ ಸಪ್ಟೆಂಬರ್ ತಿಂಗಳ ಆರಂಭದಿಂದಲೂ ಏರಿಕೆಯಾಗುತ್ತಿದೆ. ಕೊವಿಡ್-19 ಸೋಂಕಿನಿಂದ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ತುರ್ತು ನಿಗಾ ಘಟಕ ಬೆಡ್ ಗಳು ಸಿಗುತ್ತಿಲ್ಲ. ಈ ಹಿನ್ನೆಲೆ ಐಸಿಯು ಬೆಡ್ ಗಳನ್ನು ನೀಡುವ ಸಂದರ್ಭಗಳಲ್ಲಿ ಕೊರೊನಾವೈರಸ್ ಸೋಂಕಿತರಿಗೇ ಮೊದಲ ಆದ್ಯತೆ ನೀಡುವಂತೆ ಸರ್ಕಾರದ ಆದೇಶದಲ್ಲಿ ಸೂಚನೆ ನೀಡಲಾಗಿದೆ.

Reserve 80% of All ICU Beds For COVID-19 Patients At Hospitals: Delhi Govt

ಇಂದಿರಾ ಗಾಂಧಿ ಏರ್ ಪೋರ್ಟ್ ನಲ್ಲಿ ಕೊವಿಡ್-19 ತಪಾಸಣೆ:

Recommended Video

ಕೊನೆಗೂ ಮಂಡಿ ಊರಿದ Kangana Ranaut?? | Oneindia Kannada

ಸಪ್ಟೆಂಬರ್.12ರ ಶನಿವಾರವಷ್ಟೇ ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 3ರಲ್ಲಿ ಮೊದಲ ಬಾರಿಗೆ ಕೊವಿಡ್-19 ಸೋಂಕು ತಪಾಸಣೆ ನಡೆಸಲಾಗಿತ್ತು. ಕಳೆದ 24 ಗಂಟೆಗಳಲ್ಲಿ 4321 ಜನರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿತ್ತು. ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 2,14,069ಕ್ಕೆ ಏರಿಕೆಯಾಗಿದ್ದು, ಈ ಪೈಕಿ 1,81,295 ಸೋಂಕಿತರು ಗುಣಮುಖರಾಗಿದ್ದರು. ಮಹಾಮಾರಿಗೆ ಈವರೆಗೂ 4715 ಜನರು ಬಲಿಯಾಗಿದ್ದು, ನವದೆಹಲಿಯಲ್ಲಿ 28059 ಸಕ್ರಿಯ ಪ್ರಕರಣಗಳಿದ್ದವು.

English summary
Reserve 80% of All ICU Beds For COVID-19 Patients At Hospitals: Delhi Govt New Order.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X