ಅಪಾಯ ಮಟ್ಟ ಮೀರಿದ ಗಂಗಾ: ದೆಹಲಿಗೆ ರೆಡ್ ಅಲರ್ಟ್

ನವದೆಹಲಿ, ಆಗಸ್ಟ್ 19: ಉತ್ತರ ಭಾರತದಲ್ಲಿ ಭಾರಿ ಮಳೆ ಮುಂದುವರೆದಿದ್ದು, ಹಿಮಾಚಲ ಪ್ರದೇಶದಲ್ಲಿ ಈಗಾಗಲೇ 24 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ದೆಹಲಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.

ಕೆಲವೇ ದಿನಗಳ ಹಿಂದೆ ಮಹಾರಾಷ್ಟ್ರ, ಬಿಹಾರ, ಮುಂಬೈ ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದ್ದು ಪ್ರವಾಹದ ಸ್ಥಿತಿ ತಂದೊಡ್ಡಿತ್ತು. ಉತ್ತರ ಭಾರತದ ಹಲವಡೆ ಮಳೆಯಾಗಿದ್ದು ಇದುವರೆಗೆ 30 ಮಂದಿ ಮೃತಪಟ್ಟಿದ್ದಾರೆ. ಹಿಮಾಚಲ ಪ್ರದೇಶವೊಂದರಲ್ಲೇ 24 ಕ್ಕೂ ಹೆಚ್ಚು ಮೃತಪಟ್ಟಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಉತ್ತರ ಪ್ರದೇಶ, ಹರಿಯಾಣ, ಹರಿಯಾಣ, ದೆಹಲಿ, ಪಂಜಾಬ್ ಸೇರಿದಂತೆ ಇತರೆ ಕಡೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಪಂಜಾಬ್‌ನ 250 ಹಳ್ಳಿಗಳು ರೋಪರ್, ಜಲಂಧರ್, ಕಾಪುರ್ತಾಲ, ಲುಧಿಯಾನ, ಮೋಗಾ ಹಾಗೂ ಫಿರೋಜ್‌ಪುರದಲ್ಲಿ ಹೆಚ್ಚು ಮಳೆ ಬರುವ ಮುನ್ಸೂಚನೆ ನೀಡಿದೆ.

Red Alert Issued For Delhi

ಹಿಮಾಚಲ ಪ್ರದೇಶದಲ್ಲಿ ಭಾನುವಾರ ಅತಿ ಹೆಚ್ಚು ಮಳೆ ದಾಖಲಾಗಿದೆ. 102.5 ಮಿ.ಮೀನಷ್ಟು ಮಳೆ ದಾಖಲಾಗಿದೆ. ಸಾಮಾನ್ಯ ಮಳೆಗಿಂತ ಶೇ.1,065 ಪಟ್ಟು ಮಳೆ ಅಧಿಕವಾಗಿದೆ.

ಲಾಹೌಲ್ ನಲ್ಲಿ 150ಕ್ಕೂ ಹೆಚ್ಚು ಪ್ರವಾಸಿಗರನ್ನು ರಕ್ಷಿಸಲಾಗಿದೆ. ಮಳೆ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿಬಾಲ್ ಸಭೆ ಕರೆದಿದ್ದಾರೆ. ಉತ್ತರ ಪ್ರದೇಶದ ಗಂಗಾ, ಯಮುನಾ, ಗಾಗ್ರಾ ನದಿ ತುಂಬಿದ್ದು ಅಪಾಯದ ಮಟ್ಟವನ್ನು ಮೀರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+