'ಪ್ರೀತಿಯಲ್ಲಿ ಹುಚ್ಚರಾಗಿ ಟ್ಯಾಟೂ ಹಾಕಿಸಿಕೊಳ್ಳಬಾರದು': ರಾಖಿ ಸಲಹೆ
'ಪ್ರೀತಿಯಲ್ಲಿ ಹುಚ್ಚರಾಗಿ ಟ್ಯಾಟೋ ಹಾಕಿಸಿಕೊಳ್ಳಬಾರದು' ಎಂದು ಹೇಳುವ ಮೂಲಕ ಬಾಲಿವುಡ್ ನಟಿ ರಾಖಿ ಸಾವಂತ್ ತಮ್ಮ ದೇಹದ ಮೇಲಿದ್ದ ಮಾಜಿ-ಪತಿಯ ಟ್ಯಾಟೂ ಹೆಸರನ್ನು ತೆಗೆದು ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ರಾಖಿ ಸಾವಂತ್ ಮತ್ತು ರಿತೇಶ್ ತಮ್ಮ ಬಿಗ್ ಬಾಸ್ ದಿನಗಳಲ್ಲಿ ಯಾವಾಗಲೂ ನೋಡುಗರ ಗಮನ ಸೆಳೆಯುತ್ತಿದ್ದರು. ಅವರ ಮಾತು ಹಾಗೂ ರಾಖಿ ಸಾವಂತ್ ಚೇಷ್ಟೆಗಳವರೆಗೆ ಇಬ್ಬರೂ ಬಿಗ್ ಬಾಸ್‌ನಲ್ಲಿ ಚರ್ಚೆಯಲ್ಲಿದ್ದರು. ವಾಸ್ತವವಾಗಿ BB 15ರ ಗ್ರ್ಯಾಂಡ್ ಫಿನಾಲೆಯಲ್ಲಿ ರಾಖಿ ಮತ್ತು ರಿತೇಶ್ ಅವರ ಲಿಪ್-ಲಾಕ್ ಯಾರೂ ಕೂಡ ಮರೆತಿಲ್ಲ. ಅದಾಗಲೇ ಫೆಬ್ರವರಿ 2022 ರಂದು ರಾಖಿ ಮತ್ತು ರಿತೇಶ್ 3 ವರ್ಷಗಳ ಒಗ್ಗಟ್ಟಿನ ಜೀವನಕ್ಕೆ ಬ್ರೇಕ್ ಹಾಕಿರುವುದಾಗಿ ಘೋಷಿಸಿದರು. ಇದೀಗ ರಾಖಿ ತನ್ನ ಸೊಂಟದ ಮೇಲಿದ್ದ ರಿತೇಶ್ ಟ್ಯಾಟೂವನ್ನು ತೆಗೆದಿದ್ದಾಳೆ.
ರಿತೇಶ್ ಜೊತೆಗಿನ ಪ್ರತ್ಯೇಕತೆಯ ಕುರಿತು ರಾಖಿಯ ಅಧಿಕೃತ ಹೇಳಿಕೆ
ಪ್ರೇಮಿಗಳ ದಿನಕ್ಕೂ ಮುನ್ನ, ರಾಖಿ ಸಾವಂತ್ ತಾನು ಮತ್ತು ರಿತೇಶ್ ಬೇರೆಯಾಗಿರುವುದನ್ನು ಖಚಿತಪಡಿಸಿದ್ದಾರೆ. "ಆತ್ಮೀಯ ಸ್ನೇಹಿತರು ಮತ್ತು ಹಿತೈಷಿಗಳು ರಿತೇಶ್ ಮತ್ತು ನಾನು ಬೇರೆಯಾಗಲು ನಿರ್ಧರಿಸಿದ್ದೇವೆ ಎಂದು ಹೇಳಲು ಬಯಸಿದ್ದೇವೆ. ಬಿಗ್ ಬಾಸ್ ಕಾರ್ಯಕ್ರಮದ ನಂತರ ಬಹಳಷ್ಟು ಸಂಭವಿಸಿದೆ ಮತ್ತು ಕೆಲವು ವಿಷಯಗಳ ಬಗ್ಗೆ ನನಗೆ ತಿಳಿದಿರಲಿಲ್ಲ. ಕೆಲ ನಿರ್ಧಾರದ ಮೂಲಕ ನಾವು ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಪ್ರಯತ್ನಿಸಿದ್ದೇವೆ. ನಾವಿಬ್ಬರೂ ಸೌಹಾರ್ದಯುತವಾಗಿ ಮುಂದುವರಿಯುವುದು ಉತ್ತಮ ಎಂದು ನಾನು ಭಾವಿಸುತ್ತೇನೆ. ಜೊತೆಗೆ ನಾವಿಬ್ಬರೂ ನಮ್ಮ ಜೀವನವನ್ನು ಪ್ರತ್ಯೇಕವಾಗಿ ಆನಂದಿಸುತ್ತೇವೆ. ಈ ಕೆಲದ ಪ್ರೇಮಿಗಳ ದಿನದ ಮೊದಲು ಆಗಬೇಕು. ಆದರೆ ಈ ನಿರ್ಧಾರ ತೆಗೆದುಕೊಳ್ಳಲು ನಾನು ದುಃಖಿತಳಾಗಿದ್ದೇನೆ. ನಾನು ರಿತೇಶ್ ಜೀವನ ಉತ್ತಮವಾಗಿರಲಿ ಎಂದು ಹಾರೈಸುತ್ತೇನೆ. ನಾನು ನನ್ನ ಕೆಲಸ ಮತ್ತು ನನ್ನ ಜೀವನದ ಮೇಲೆ ಕೇಂದ್ರೀಕರಿಸಬೇಕು ಮತ್ತು ನನ್ನನ್ನು ಸಂತೋಷದಿಂದ ಮತ್ತು ಆರೋಗ್ಯವಾಗಿರಿಸಿಕೊಳ್ಳಬೇಕು. ಯಾವಾಗಲೂ ನನ್ನನ್ನು ಅರ್ಥಮಾಡಿಕೊಳ್ಳಲು ಮತ್ತು ಬೆಂಬಲಿಸಿದ್ದಕ್ಕಾಗಿ ಧನ್ಯವಾದಗಳು" ಎಂದು ರಾಖಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.
-
ಶೂಟಿಂಗ್ ವೇಳೆ ನನ್ನ ಖಾಸಗಿ ಭಾಗ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ: ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧ ನಟಿ ಮೊನಾಲಿಸಾ ಆರೋಪ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ














Click it and Unblock the Notifications