ಪ್ರಯಾಣ ದರ ಆಯ್ತು ಇನ್ನು ರೈಲ್ವೆ ಆಹಾರವೂ ದುಬಾರಿ

railways-hike-food-rates-rajdhanip-shatabdi-and-duronto-express
ನವದೆಹಲಿ, ಅ.11: ಇತ್ತೀಚೆಗಷ್ಟೇ ಪ್ರಯಾಣ ದರ ಮತ್ತು ಸರಕು ಸಾಗಣೆ ದರವನ್ನು ಹೆಚ್ಚಳ ಮಾಡಿರುವ ರೈಲ್ವೆ ಇಲಾಖೆಯು ಇದೇ ಅಕ್ಟೋಬರ್ 17ರಿಂದ ಜಾರಿಗೆ ಬರುವಂತೆ ಎಕ್ಸ್‌ಪ್ರೆಸ್ ರೈಲುಗಳಲ್ಲಿ ವಿತರಿಸುವ ಆಹಾರ ದರವನ್ನೂ ಭಾರಿ ಪ್ರಮಾಣದಲ್ಲಿ ಅಂದರೆ ಶೇ. 40ರಷ್ಟು ಹೆಚ್ಚಿಸಿದೆ.

ಈ ದರ ಹೆಚ್ಚಳದ ಬಿಸಿ ರಾಜಧಾನಿ, ಶತಾಬ್ದಿ ಮತ್ತು ದುರಂತೋ ಎಕ್ಸ್‌ಪ್ರೆಸ್ ರೈಲುಗಳ ಪ್ರಯಾಣಿಕರಿಗೆ ಮಾತ್ರ ತಟ್ಟಲಿದೆ. ಪವನ್ ಕುಮಾರ್ ಬನ್ಸಾಲ್ ರೈಲ್ವೆ ಸಚಿವರಾಗಿದ್ದಾಗ, ರೈಲುಗಳಲ್ಲಿ ಆಹಾರದ ಗುಣಮಟ್ಟ ನಿರ್ಧರಿಸಲು ಸಮಿತಿಯೊಂದನ್ನು ರಚಿಸಿದ್ದರು. ಈ ಸಮಿತಿ ಸದ್ಯ ತನ್ನ ವರದಿ ನೀಡಿದ್ದು, ರೈಲುಗಳಲ್ಲಿ ನೀಡಲಾಗುವ ಆಹಾರದ ದರವನ್ನು ಹೆಚ್ಚಿಸುವ ಬಗ್ಗೆ ಶಿಫಾರಸು ಮಾಡಿತ್ತು.

AC 2-tier ಮತ್ತು AC 3-tier ಮತ್ತು AC Chair ವಿಭಾಗಗಳಲ್ಲಿ ನೀಡಲಾಗುವ ಚಹಾ ದರವನ್ನು 8 ರೂಪಾಯಿಯಿಂದ 10 ರೂಪಾಯಿಗೆ ಹೆಚ್ಚಿಸಿದೆ. ಉಪಹಾರವನ್ನು 66.50 ರೂ. ನಿಂದ 75 ರೂಪಾಯಿಗೆ ಏರಿಸಲಾಗಿದೆ. ಮಧ್ಯಾಹ್ನದ ಊಟವನ್ನು 112 ರೂ. ನಿಂದ 125 ರೂ. ಗೆ ಏರಿಸಲಾಗಿದೆ. ಸಂಜೆ ಚಹಾ ಮತ್ತು ಲಘು ಉಪಹಾರವನ್ನು 37 ರೂ. ಗಳಿಂದ 45 ರೂ. ಗೆ ಹೆಚ್ಚಿಸಲಾಗಿದೆ. ರಾತ್ರಿ ಊಟ 112 ರೂ. ನಿಂದ 125 ರೂಪಾಯಿಗೆ ಏರಿದೆ.

Duronto sleeper coachನಲ್ಲಿ ಚಹಾ ದರವನ್ನು 6.50 ರೂಪಾಯಿಯಿಂದ 10 ರೂಪಾಯಿಗೆ ಹೆಚ್ಚಿಸಿದೆ. ಉಪಹಾರವನ್ನು 34 ರೂ. ನಿಂದ 40 ರೂಪಾಯಿಗೆ ಏರಿಸಲಾಗಿದೆ. ಮಧ್ಯಾಹ್ನದ ಊಟವನ್ನು 71 ರೂ. ನಿಂದ 80 ರೂ. ಗೆ ಏರಿಸಲಾಗಿದೆ. ಸಂಜೆ ಚಹಾ ಮತ್ತು ಲಘು ಉಪಹಾರವನ್ನು 18 ರೂ. ಗಳಿಂದ 20 ರೂ. ಗೆ ಹೆಚ್ಚಿಸಲಾಗಿದೆ. ರಾತ್ರಿ ಊಟ 71 ರೂ. ನಿಂದ 80 ರೂಪಾಯಿಗೆ ಏರಿದೆ.

'ಗುಣಮಟ್ಟದ ಮತ್ತು ಬ್ರ್ಯಾಂಡೆಡ್ ಆಹಾರವನ್ನು ಒದಗಿಸಲು ಬೆಲೆ ಹೆಚ್ಚಳ ಮಾಡಲಾಗಿದೆ. ಈ ಹಿಂದೆ 1999ರಲ್ಲಿ ಆಹಾರದ ಬೆಲೆಯನ್ನು ಹೆಚ್ಚಿಸಲಾಗಿತ್ತು ಅಷ್ಟೆ. ಅದಾದ ನಂತರ ಆಹಾರ ಪದಾರ್ಥಗಳ ಬೆಲೆಗಳು ಗಗನಕ್ಕೆ ತಲುಪಿವೆ. ಹಾಗಾಗಿ ಅನಿವಾರ್ಯವಾಗಿ ಬೆಲೆ ಹೆಚ್ಚಿಸಲಾಗಿದೆ' ಎಂದು ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+