ರಾಹುಲ್ ಪಪ್ಪುವಲ್ಲ, ಬುದ್ಧಿವಂತ ಯುವ ನಾಯಕ: ಸ್ಯಾಮ್ ಪಿತ್ರೋಡ
ನವದೆಹಲಿ, ಮೇ 6: ಬಿಜೆಪಿಗರು ಹೇಳುವಂತೆ ರಾಹುಲ್ ಪಪ್ಪುವಲ್ಲ ವಿದ್ಯಾವಂತ ಹಾಗೂ ಬುದ್ಧಿವಂತ ಯುವ ನಾಯಕ ಎಂದು ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೋಡ ಹೇಳಿದ್ದಾರೆ.
ಬಿಜೆಪಿ ಆಯಕರು ಅನವಶ್ಯಕವಾಗಿ ರಾಹುಲ್ ಬಗ್ಗೆ ಕಳೆದ ಹತ್ತು ವರ್ಷಗಳಿಂದ ಅವಮಾನಕಾರಿ ಹೇಳಿಕೆ ನೀಡುತ್ತಿದ್ದಾರೆ. ಆದರೆ ನಾನು ರಾಹುಲ್‌ರನ್ನು ವೈಯಕ್ತಿಕವಾಗಿ ಬಲ್ಲೆ, ಅವರಲ್ಲಿ ನನಗೆ ನಂಬಿಕೆ ಇದೆ. ರಾಹುಲ್ ಪಪ್ಪುವಲ್ಲ, ಅತ್ಯುತ್ತಮ ಶಿಕ್ಷಣ ಪಡೆದಿದ್ದು, ಬುದ್ಧಿವಂತಿಕೆಯೂ ಇದೆ.
ಭಾರತಕ್ಕೆ ಇಂತಹ ಯುವ ನಾಯಕರ ಅಗತ್ಯವಿದೆ ಎಂದು ಪಿತ್ರೋಡ ಅಭಿಪ್ರಾಯ ಪಟ್ಟಿದ್ದಾರೆ. ನಾನು ಅವರ ರಾಹುಲ್ ಅಜ್ಜಿ ಇಂದಿರಾ ಗಾಂಧಿ ಹಾಗೂ ತಂದೆ ರಾಜೀವ್ ಗಾಂಧಿ ಜೊತೆಗೂ ಕೆಲಸ ಮಾಡಿದ್ದೇನೆ, ಈಗ ಕೆಲ ವರ್ಷಗಳಿಂದ ರಾಹುಲ್ ಜತೆಗೂ ಕೆಲಸ ಮಾಡುತ್ತಿದ್ದೇನೆ, ದೇಶದ ಅಭಿವೃದ್ಧಿ ಬಗ್ಗೆ ರಾಹುಲ್ ಬಳಿ ಚರ್ಚಿಸಿದ್ದೇನೆ.

ದೇಶದ ತುಂಬೆಲ್ಲಾ ಸುಳ್ಳನ್ನು ಹೇಳಿಕೊಂಡು ಓಡಾಡುವವರಿಗಿಂತ ತಂತ್ರಜ್ಞಾನಗಳ ಮಾಹಿತಿ ಇರುವ ಯುವ ನಾಯಕರ ಅಗತ್ಯವಿದೆ ಎಂದು ಪ್ರಧಾನಿ ಮೋದಿಗೆ ಪರೋಕ್ಷವಾಗಿ ಪಿತ್ರೋಡ ಟಾಂಗ್ ನೀಡಿದ್ದಾರೆ.












Click it and Unblock the Notifications