'ಮೂರು' ಮರೆತ ರಾಹುಲ್ ಗಾಂಧಿ, ಕಾಲೆಳೆದ ಟ್ರೋಲ್ ಹೈಕ್ಳು!
Recommended Video

ನವದೆಹಲಿ, ಜನವರಿ 03: ಟ್ರೋಲ್ ಹೈಕ್ಳ ಕಣ್ಣು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಬಿಟ್ಟು ಅರೆಕ್ಷಣ ಕದಲುವುದಿಲ್ಲ. ಅವರೇನೇ ಮಾಡಿದರೂ ಅದು ಟ್ರೋಲ್ ಆಗುತ್ತೆ!
ಬುಧವಾರ ರಫೇಲ್ ಡೀಲ್ ಕುರಿತಂತೆ ಟ್ವೀಟ್ ಮಾಡಿರುವ ಅವರು ಸಂಸತ್ತಿನಲ್ಲಿ ತಾವು ಕೇಳಲಿರುವ ಸಾಲು ಸಾಲು ಪ್ರಶ್ನೆಗಳನ್ನು ಮುಂಚಿತವಾಗಿಯೇ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದರು.
ಆದರೆ ಈ ಸಂದರ್ಭದಲ್ಲಿ ಅವರು 1, 2 ಪ್ರಶ್ನೆಯ ನಂತರ 4 ನೇ ಪ್ರಶ್ನೆ ಕೇಳಿದ್ದರು. 3 ನೇ ಪ್ರಶ್ನೆ ನಾಪತ್ತೆಯಾಗಿದ್ದಕ್ಕೆ ಟ್ರೋಲ್ ಹೈಕ್ಳು ರಾಹುಲ್ ಗಾಂಧಿ ಅವರ ಕಾಲೆಳೆಯುವುದಕ್ಕೆ ಆರಂಭಿಸಿದ್ದರು!
1,2 ಆದ್ಮೇಲೆ 4 ಗೊತ್ತಾ? ಎಂದು ಕೆಲವರು ಛೇಡಿಸಿದ್ದರೆ, ಕೆಲವರು ತಾವೇ ಮೂರನೇ ಪ್ರಶ್ನೆಯನ್ನೂ ಕೇಳಿದ್ದಾರೆ!
|
ರಾಹುಲ್ ಕೇಳಿದ್ದ ನಾಲ್ಕು ಪ್ರಶ್ನೆಗಳು
ಪ್ರಶ್ನೆ 1: 126 ರ ಬದಲಾಗಿ 36 ಯುದ್ಧ ವಿಮಾನಗಳು ಖರೀದಿ ಏಕೆ?
ಪ್ರಶ್ನೆ 2: ಒಂದು ವಿಮಾನಕ್ಕೆ 560 ಕೋಟಿ ರೂ.ಬದಲಾಗಿ 1600 ಕೋಟಿ ರೂ. ಯಾಕೆ?
ಪ್ರಶ್ನೆ 4 : ಎಚ್ ಎಎಲ್ ಬದಲಾಗಿ ಅನಿಲ್ ಅಂಬಾನಿ ಯಾಕೆ?
|
ಮೂರನೇ ಪ್ರಶ್ನೆ ನಾಪತ್ತೆಯಾಗಿದ್ದು ಏಕೆ?
'ಮೂರನೇ ಪ್ರಶ್ನೆಯನ್ನು ಕೇಳಲು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ತಡೆದರು. ಏಕೆಂದರೆ ನಾನು ಗೋವಾ ಮುಖ್ಯಮಂತ್ರಿಗಳ ಟೇಪ್ ಬಗ್ಗೆ ಪ್ರಶ್ನೆ ಕೇಳುವವನಿದ್ದೆ. ಮೂರನೇ ಪ್ರಶ್ನೆ ಸಹ ರಫೇಲ್ ಡೀಲ್ ನಷ್ಟೇ ವಿವಾದ ಹುಟ್ಟಿಸಬಹುದು' ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಮೂರನೇ ಪ್ರಶ್ನೆ ಏನು?
ಅಷ್ಟಕ್ಕೂ ರಾಹುಲ್ ಗಾಂಧಿ ಕೇಳಬೇಕು ಎಂದುಕೊಂಡಿದ್ದ ಪ್ರಶ್ನೆ ಯಅವುದು? ಬಹುಜನರ ಬೇಡಿಕೆಯ ಮೇರೆಗೆ ಆ ಪ್ರಶ್ನೆಯನ್ನೂ ಅವರು ನಂತರ ಟ್ವೀಟ್ ಮಾಡಿದ್ದಾರೆ. "ಪರಿಕ್ಕರ್ ಜೀ ರಫೇಲ್ ಫೈಲ್ ಅನ್ನು ತಮ್ಮ ಬೆಡ್ ರೂಮಿನಲ್ಲಿಟ್ಟುಕೊಂಡಿದ್ದು ಏಕೆ? ಅದರಲ್ಲಿ ಏನಿತ್ತು ಹೇಳಿ ಮೋದಿಜೀ" ಎಂಬುದು ಅವರ ಮೂರನೇ ಪ್ರಶ್ನೆ!

20 ನಿಮಿಷ ಮಾತಾಡಲಿ
ಮೋದಿ ಅವರಿಗೆ ರಫೇಲ್ ಬಗ್ಗೆ ಚರ್ಚಿಸುವ ಧೈರ್ಯ ಇಲ್ಲ, ನನ್ನೊಂದಿಗೆ ಮೋದಿ ಅವರು 20 ನಿಮಿಷ ಮಾತನಾಡಲಿ ಸಾಕು ಎಂದು ಅವರು ಸವಾಲು ಹಾಕಿದರು. ನನ್ನೊಂದಿಗೆ ಬಿಡಿ ಸಂಸತ್‌ಗೆ ಬರಲು ಸಹ ಅವರಿಗೆ ಧೈರ್ಯ, ಸುದ್ದಿಗೋಷ್ಠಿ ಮಾಡುವುದಂತೂ ದೂರವೇ ಉಳಿಯಿತು ಎಂದು ನಿನ್ನೆ ರಾಹುಲ್ ಗಾಂಧಿ ವಾಗ್ದಾಳಿ ಮಾಡಿದ್ದರು.
|
ಪ್ರಶ್ನೆ ಪತ್ರಿಕೆಯಲ್ಲೂ ಹಗರಣ!
ರಾಹುಲ್ ಗಾಂಧಿ ಅವರ ಪ್ರಕಾರ 1, 2 ಆದ ನಂತರ 4! ಪ್ರಶ್ನೆ ಪತ್ರಿಕೆಯಲ್ಲೂ ಹಗರಣ ಅಂದರೆ ಇದೇ ಎಂದು ನೇಶನ್ ಫಸ್ಟ್ ಪಿಂಕು ಎಂಬ ಖಾತೆಯಿಂದ ಪೋಸ್ಟ್ ಮಾಡಲಾಗಿದೆ.
|
ಮೂರನೇ ಪ್ರಶ್ನೆ!
ಪ್ರಶ್ನೆ 3: ನೆಹರು ಮತ್ತು ಗಾಂಧಿ ಕುಟುಂಬ ಮಾಡಿದಂತೆ ಬಿಜೆಪಿ ಏಕೆ 'ಕಮಿಶನ್' ತೆಗೆದುಕೊಳ್ಳುತ್ತಿಲ್ಲ ಎಂದು ಟಾಮ್ ಲಬೌನ್ ಪ್ರಶ್ನಿಸಿದ್ದಾರೆ.












Click it and Unblock the Notifications