ಡಿಕೆ.ಶಿವಕುಮಾರ್‌ಗೆ ಬೆಂಬಲಕ್ಕೆ ಬಂದ ಕಾಂಗ್ರೆಸ್ ಮುಖ್ಯ ವ್ಯಕ್ತಿ
ನವದೆಹಲಿ, ಸೆಪ್ಟೆಂಬರ್ 04: ಇಡಿ ಯಿಂದ ಬಂಧನಕ್ಕೆ ಒಳಗಾಗಿರುವ ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಪೂರ್ಣ ಬೆಂಬಲ ನೀಡಿದೆ. ಜೊತೆಗೆ ಈಗ ರಾಷ್ಟ್ರೀಯ ಕಾಂಗ್ರೆಸ್ ಸಹ ಸೇರಿಕೊಂಡಿದೆ.
ಕಾಂಗ್ರೆಸ್‌ನ ಪ್ರಮುಖ, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಡಿ.ಕೆ.ಶಿವಕುಮಾರ್ ಅವರ ಬಂಧನದ ಕುರಿತು ಇಂದು ಟ್ವೀಟ್ ಮಾಡಿದ್ದು, ಡಿ.ಕೆ.ಶಿವಕುಮಾರ್ ಜೊತೆಗೆ ನಾವಿದ್ದೇವೆ ಎಂಬ ಭರವಸೆ ನೀಡಿದ್ದಾರೆ.
ಬಂಧನ ನಂತರ ಡಿಕೆ ಶಿವಕುಮಾರ್ ಮುಂದಿನ ಆಯ್ಕೆಗಳೇನು?
'ಡಿ.ಕೆ.ಶಿವಕುಮಾರ್ ಅವರ ಬಂಧನ, ಬಿಜೆಪಿಯ ದ್ವೇಷ ರಾಜಕೀಯದ ಮತ್ತೊಂದು ಉದಾಹರಣೆ ಅಷ್ಟೆ, ಸರ್ಕಾರವು ಇಡಿ-ಸಿಬಿಐ ಅಂತಹಾ ಸಂಸ್ಥೆಗಳನ್ನು ಬಳಸಿಕೊಂಡು ಅದರ ಜೊತೆಗೆ ತಮ್ಮಿಷ್ಟಕ್ಕೆ ಮಣಿಯುವ ಮಾಧ್ಯಮಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಸಹ ಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದು, ಇಂದು ರಾಜ್ಯದಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಮಾಡಲಾಗಿದೆ.
ಡಿ.ಕೆ. ಶಿವಕುಮಾರ್ ಬಂಧನ : ಸಿದ್ದರಾಮಯ್ಯ ಹೇಳಿದ್ದೇನು?
ಡಿ.ಕೆ.ಶಿವಕುಮಾರ್ ಅವರು ರಾಹುಲ್ ಗಾಂಧಿ ಅವರಿಗೆ ಆಪ್ತರಾಗಿದ್ದರು. ಹೈಕಮಾಂಡ್ ಡಿ.ಕೆ.ಶಿವಕುಮಾರ್ ಅವರ ಸಂಘಟನಾ ಚತುರತೆಯನ್ನು ಹಲವು ಬಾರಿ ಚುನಾವಣೆ ರಾಜಕೀಯಕ್ಕೆ ಬಳಸಿಕೊಂಡಿತ್ತು. ಹಾಗಾಗಿ ಹೈಕಮಾಂಡ್ ಈಗ ಡಿ.ಕೆ.ಶಿವಕುಮಾರ್ ಬೆನ್ನಿಗೆ ನಿಂತಿದೆ.