ರಫೇಲ್‌ ಬಗ್ಗೆ ಹೊಸ ದಾಖಲೆ ಮುಂದಿಟ್ಟ ರಾಹುಲ್, ಮೋದಿಗೆ ತಪರಾಕಿ

ನವದೆಹಲಿ, ಫೆಬ್ರವರಿ 13: ರಫೇಲ್ ಕುರಿತು ಮತ್ತೊಂದಿಷ್ಟು ದಾಖಲೆಗಳನ್ನು ಮುಂದಿಟ್ಟ ರಾಹುಲ್ ಗಾಂಧಿ. ಇಂದು ಲೋಕಸಭೆಯಲ್ಲಿ ಸಲ್ಲಿಸಲಾದ ರಫೇಲ್ ಬಗೆಗಿನ ಸಿಎಜಿ ವರದಿಯಲ್ಲಿಯ ಲೋಪದೋಷಗಳನ್ನು ಎತ್ತಿ ಹಿಡಿದು ಮೋದಿಯನ್ನು ಭ್ರಷ್ಟ ಎಂದರು.

ನವದೆಹಲಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ರಫೇಲ್ ಒಪ್ಪಂದದಲ್ಲಿ ಭಾಗಿಯಾಗಿದ್ದ ಕೆಲವು ಅಧಿಕಾರಿಗಳು ತಕರಾರು ಪತ್ರವನ್ನು ರಕ್ಷಣಾ ಸಚಿವಾಲಯಕ್ಕೆ ಬರೆದಿದ್ದರು. ಅದರಲ್ಲಿ ಸ್ಪಷ್ಟವಾಗಿ ಬೆಲೆ ಹೆಚ್ಚಳ ಹಾಗೂ ವಿಮಾನ ನೀಡುವಲ್ಲಿನ ವಿಳಂಬದ ಬಗ್ಗೆ ಉಲ್ಲೇಖವಿತ್ತು ಎಂದು ರಾಹುಲ್ ಗಾಂಧಿ ಅವರು ಇಂದು ದಾಖಲೆಗಳನ್ನು ಬಿಡುಗಡೆ ಮಾಡಿದರು.

ನರೇಂದ್ರ ಮೋದಿ, ಅರುಣ್ ಜೇಟ್ಲಿ, ನಿರ್ಮಲಾ ಸೀತಾರಾಮನ್ ಅವರು ಸಂಸತ್‌ಗೆ ನೀಡಿದ ಉತ್ತರದಲ್ಲಿ, ವಾಯುಸೇನೆಗೆ ವಿಮಾನವು ಬೇಗನೆ ಬೇಕಿತ್ತು ಎಂದಿದ್ದರು. ಆದರೆ ಅವರೇ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ರಫೇಲ್‌ನ ಕೊನೆಯ ವಿಮಾನ ವಾಯುಸೇನೆಗೆ ಸೇರಲು 10 ವರ್ಷ ಬೇಕಾಗುತ್ತದೆ ಎಂದು ರಾಹುಲ್ ಹೇಳಿದರು.

Rahul Gandhi shown another documet about Rafale and it is a big scam

ಒಪ್ಪಂದದಲ್ಲಿ ಭಾಗಿಯಾಗಿದ್ದ ಅಧಿಕಾರಿಗಳು ಬರೆದಿದ್ದಾರೆ ಎನ್ನುವ ಪತ್ರವನ್ನು ತೋರಿಸಿ ಮಾತನಾಡಿದ ರಾಹುಲ್ ಅಧಿಕಾರಿಗಳು ಹೇಳುವಂತೆ ಈ ಒಪ್ಪಂದವು ಹಳೆಯ ಒಪ್ಪಂದಕ್ಕಿಂತಲೂ 55% ಹೆಚ್ಚಿನ ಹಣವನ್ನು ಡೆಸಾಲ್ಟ್‌ಗೆ ಪಾವತಿಸಬೇಕಿದೆ ಎಂದು ಹೇಳಿದರು.

ಇಂದು ರಫೇಲ್‌ ಬಗ್ಗೆ ಸಿಎಜಿ ವರದಿಯಲ್ಲಿರುವ ಲೋಪದೋಷಗಳ ಬಗ್ಗೆ ಮಾತನಾಡಿದ ರಾಹುಲ್, ಸಿಎಜಿ ವರದಿಯಲ್ಲಿ ಅಧಿಕಾರಿಗಳ ಪತ್ರದ ಬಗ್ಗೆ ಉಲ್ಲೇಖವೇ ಇಲ್ಲ ಎಂದರು.

ಈ ಹಿಂದಿನ ಒಪ್ಪಂದದಲ್ಲಿ, ಕಾರ್ಯಕ್ಷಮತೆ ಭರವಸೆ, ಹಣಕಾಸು ಭರವಸೆಗಳು ಇದ್ದವು ಆದರೆ ಹೊಸ ಒಪ್ಪಂದದಲ್ಲಿ ಈ ಯಾವುದೇ ಭರವಸೆಗಳು ಇಲ್ಲ ಎಂದು ಇಂದು ಸಲ್ಲಿಸಿರುವ ಸಿಎಜಿ ವರದಿಯಲ್ಲಿ ಹೇಳಲಾಗಿದೆ. ಮತ್ತು ಇದು ವಿಮಾನ ತಯಾರಿಕಾ ಸಂಸ್ಥೆ ಡಸಾಲ್ಟ್‌ನ ಅನುಕೂಲಕ್ಕಾಗಿಯೇ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಇಂಡಿಯಾ ಸ್ಪೆಸಿಫಿಕ್ಸ್‌ ಎನ್‌ಹಾನ್ಸ್‌ಮೆಂಟ್‌ 104 ವಿಮಾನಗಳಿಗೆ ನೀಡಿರುವ ಬೆಲೆಯನ್ನೇ 36 ರಫೇಲ್‌ ವಿಮಾನಕ್ಕೆ ನೀಡಿದೆ. ಭ್ರಷ್ಟಾಚಾರ ನಡೆದಿರುವುದೇ ಇಲ್ಲಿ. ಕಣ್ಣಿಗೆ ಕಾಣುವಂತೆ ಭ್ರಷ್ಟಾಚಾರ ಇಲ್ಲಿ ನಡೆದಿದೆ. ಮೋದಿ ಅವರು ರಫೇಲ್ ವಿಷಯದಲ್ಲಿ ಭ್ರಷ್ಟಾಚಾರ ಮಾಡಿಲ್ಲವೆಂದರೆ ಸದನ ಸಮಿತಿ ಮಾಡಲು ಹೆದರಿಕೆ ಏಕೆ ಎಂದು ರಾಹುಲ್ ಪ್ರಶ್ನೆ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+